ಅಂದು ಗಾಂಧಿ ಇಂದು ಮೋದಿ


ಈ ದೇಶಕ್ಕೆ ಭವಿಷ್ಯವಿಲ್ಲ, ಇಲ್ಲಿ ಭ್ರಷ್ಟಾಚಾರ ತಾಂಡವವೇ ಎಲ್ಲೆಲ್ಲೂ ಎಂದು ಬರಿದೇ ಗೊಣಗುತ್ತಿದ್ದ ವಿದ್ಯಾವಂತರೂ ಎಚ್ಚೆತ್ತಿದ್ದಾರೆ ಭ್ರಷ್ಟಾಚಾರ ನಿಗ್ರಹಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಏಳು ದಶಕಗಳ ವಂಶಾಡಳಿತಕ್ಕೆ ರೋಸಿದ್ದಾರೆ. ಕಳೆದ ಹತ್ತುವರ್ಷಗಳಲ್ಲಂತೂ ಸಾಲುಸಾಲು ಭ್ರಷ್ಟಾಚಾರ ಹಗರಣಗಳಲ್ಲಿ ಮಹಾಮೌನಿಗಳಾಗದ ನಾಯಕರನ್ನೂ ಕಂಡಿದ್ದಾರೆ. ಪ್ರತಿಭಾವಂತರು ಹಿಂದಿನಂತೆ ಪಲಾಯನ ಮಾಡದೇ ದೇಶದ ಪ್ರಗತಿಯಲ್ಲಿ ತೊಡಗಸಿಕೊಂಡಿದ್ದಾರೆ. ಜಾತೀಯತೆ ತೊಡೆಯುವಲ್ಲಿ ಸಮರ್ಥರಾಗಿದ್ದಾರೆ. ಯಾಕೆಂದರೆ, ವಿದ್ಯಾವಂತರಷ್ಟೇ ಅಲ್ಲ, ಹಳ್ಳಿಹಳ್ಳಿಗಳಲ್ಲಿ ಜನ ಮುಗ್ಧರಾಗುಳಿದಿಲ್ಲ. ಅಂದು ದೇಶ ಸ್ವಾತಂತ್ರ್ಯಗಳಿಸಲು ಗಾಂಧಿ, ಇಂದು ಹಳ್ಳಿಯಿಂದ ದಿಲ್ಲಿಯವರೆಗೆ ಯುವಜನರು ದುಡಿಮೆಯಲ್ಲಿ ಆರ್ಥಿಕಸ್ವಾತಂತ್ರ್ಯ ಗಳಿಸುವ ಹಾದಿಯಲ್ಲಿ ಮೋದಿ ಕೊಂಡೊಯ್ಯುತ್ತಿ ದ್ದಾರೆ. ಜಾತಿಮತ ಭಿನ್ನಭಾವಗಳನ್ನು ಬಿಟ್ಟು ನಮ್ಮ ದೇಶಬಾಂಧವರೆಲ್ಲ ಎಲ್ಲೆಲ್ಲೂ ಮೋದಿಯವರಲ್ಲಿ ಅಪಾರ ಭರವಸೆ ಇಟ್ಟಿದ್ದಾರೆಂದರೆ ಉತ್ಪ್ರೇಕ್ಷೆಯೇನಲ್ಲ… ಈಗ ಏನೇ ಆಗಲಿ ಬಡಜನಧನ ಯೋಜನೆ. ಈ ದೇಶದ ಮೊದಲ ಶತ್ರುಗಳಾದ ಅಜ್ಞಾನ, ಅನಕ್ಷರತೆ ಹಾಗೂ ಬಡತನ ನಿರ್ಮೂಲಗೊಳಿಸುವ ಸಾಧನೆ.

Leave a comment