ಮುಖಪುಟ

RiterTimes ನನ್ನ ಹೊಸ ಪೌರಾಣಿಕ ಕಾದಂಬರಿ ಇದೀಗ ಪ್ರಕಟವಾಗಿದೆ…  

ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ        

  ಶ್ರೀ  ತಿರುಮಲೇಶನ  ತ್ರಿಗುಣಾತ್ಮಕ ಪ್ರಪಂಚ
ತಿರುಮಲೆ ಕ್ಷೇತ್ರಕ್ಕೆ ಆ ದೇವ ದೇವನ ಪ್ರೇರಣೆಯಲ್ಲಿ-
ಹಾಗೂ ಆಧ್ಯಾತ್ಮಿಕ ಪ್ಪಪಂಚಕ್ಕೊಂದು ವಿಶಿಷ್ಟ ಕೊಡುಗೆ

ನನ್ನ ಹೊಸ ಕೃತಿ,

ಶ್ರೀ  ತಿರುಮಲೇಶನ ತ್ರಿಗುಣತ್ಮಕ ಪ್ರಪಂಚನೀವು ಸಹಸ್ರ ವರ್ಷಗಳಿಂದ ಕಂಡು ಕೇಳಿದ ತಿರುಮಲೇಶ ಶ್ರೀನಿವಾಸನ ಕಲ್ಯಾಣ ಕಥೆ ಇದೀಗ ಸಾರ್ವಕಾಲಿಕ ಜೀವನ ಮೌಲ್ಯಗಳೊಂದಿಗೆ… .        ಶ್ರೀನಿವಾಸ ಕಲ್ಯಾಣ ಕಥೆಯ ಮೂಲ ರೂಪದಲ್ಲೇ  ಕಥಾ ಸಂವಿಧಾನ, ಸಂಭಾಷಣೆಗಳಲ್ಲಿ ಸಮಕಾಲೀನ ಜೀವನ ಮೌಲ್ಯಗಳಿವೆ ಎಂದರೆ, ಅಚ್ಚರಿಯಾದೀತು. ಹೌದು, ಎಲ್ಲರೂ ಓದಲೇ ಬೇಕಾದ ಪೌರಾಣಿಕ ಕಾದಂಬರಿ ಇದು. ರಾಜಕೀಯ, ಸಾಮಾಜಿಕ ಹಾಗೂ ಕೌಟುಂಬಿಕ ವಿಡಂಬನೆ ಮತ್ತು ವಿಶ್ಲೇಷಣಗಳೊಂದಿಗೆ ಸಂಗ್ರಾಹ್ಯ ಕೃತಿ.ಈಗಾಗಲೇ ಅಂಚೆ ಮೂಲಕ ತರಿಸಿಕೊಂಡವರು ಹಾಗೂ ಪುಸ್ತಕ ಮಳಿಗೆ ಯಲ್ಲಿ ಖರೀದಿಸಿದವರು. ಪ್ರತಿ ಕ್ರಿಯಿಸಿ ಉತ್ತಮ ಉಪಯುಕ್ತ ಕೃತಿ ಎಂದಿದ್ದಾರೆ. ನಿಮ್ಮ ವಿಳಾಸ ಎಸ್ ಎಮ್ ಎಸ್ ಮಾಡಿ-                                                 ಮೊಬೈಲ್94486 28526.

ನಿಮ್ಮ ಮನೆ ಬಾಗಿಲಲ್ಲೇ ನೀವು ಈ ಪುಸ್ತಕ ಪಡೆಯುತ್ತೀರಿ…

ಹಾರ್ಡ್ ಬೌಂಡು, ಪುಟಗಳು-416  ಬೆಲೆ ರೂ.350/-        ರಿಯಾಯಿತಿ ಬೆಲೆ ರೂ.300/- M O ಮಾಡಿ, ಅಂಚೆ ವೆಚ್ಚ ಉಚಿತ. ಅಥವಾ  ಕೆಳಗೆ ತಿಳಿಸಿದ  S.B. account ಗೆ ರೂ. 300/- ಪಾವತಿ ಮಾಡಿ , ಫೋನ್ ಕರೆ ಮಾಡಿ ….ಎಚ್.ಶಿವರಾಂ                  # 526, “ಸಪ್ತಗಿರಿ ಸಂಪದ” ಕಿರ್ಲೋಸ್ಕರ್ ಬಡಾವಣೆ, 4 ನೇ ಮುಖ್ಯ ರಸ್ತೆ, 26 ನೇ ಕ್ರಾಸ್, ಹೆಸರಘಟ್ಟರಸ್ತೆ, ಸಪ್ತಗಿರಿ ಇಂಜಿನಿಯರಿಂಗ್  ಕಾಲೇಜು ಹತ್ತಿರ, ಬೆಂಗಳೂರು 560073.              94486 28526 

My SBI ac H Shivaram, Ac no 10624079003                          IFSC :SBIN0010499

ನಿಮ್ಮ ವಿಳಾಸ ಕೊಡಿ, ಪಿನ್ ಕೋಡ್ ನಂ ಇರಲಿ, ಪುಸ್ತಕ regd.book post. ಮೂಲಕ ನಿಮ್ಮ ವಿಳಾಸಕ್ಕೆ ತಲುಪುತ್ತದೆ.

“ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ’’ತಿರುಪತಿ ತಿರುಮಲೇಶ  ಶ್ರೀ ವೆಂಕಟೇಶ್ವರನ ಬಗ್ಗೆ 20 ವರುಷಗಳಿಂದ ಅಧ್ಯಯನ ನಡೆಸಿ ಇದೀಗ ಮೂರನೆಯ ಬಾರಿಗೆ ಎರಡು ವರ್ಷದಲ್ಲಿ ಸಿದ್ಧಪಡಿಸಿ ಪ್ರಕಟಿಸಿದ ಕೃತಿ ಇದು. ಮೊದಲು “ಸಪ್ತಗಿರಿ ಸಂಪದ” 1997 ರಲ್ಲಿ, ನಂತರ ಇಂಗ್ಲೀಷ್ ನಲ್ಲಿ  “The Message from Seven Hills” (2009) ಇತ್ತೀಚಿನ ಕನ್ನಡ ವಿಸ್ತೃತ ಪುನಾರಚನೆಯ ಪ್ರಕಟಣೆ-2018

ಹೌದು, ಇದು ಆ ಸೃಷ್ಟಿಕರ್ತನ ತ್ರಿಗುಣಾತ್ಮಕ ಪ್ರಪಂಚ!. ಪ್ರಾಕೃತಿಕ, ಭೌತಿಕ ಮತ್ತು ಜೈವಿಕವೂ ಆದ ಸೃಷ್ಟಿಕರ್ತನ ಈ ಪ್ರಪಂಚವೆಲ್ಲ ತ್ರಿಗುಣಮಯ. ಎಲ್ಲ ಕಾಲಕ್ಕೂ ಕೆಟ್ಟದ್ದೇ ಹೆಚ್ಚೆಂದು ತೋರುವ ಒಳಿತಿಗೇ ಅತ್ಯಂತ ಮಹತ್ವವಿರುವ ಚಿತ್ರ, ವಿಚಿತ್ರ ಪ್ರಪಂಚ!!   ದೇವರಿಗೆ ವಿಶ್ವವೇ ಶರೀರ. ಅವನು ವಿಶ್ವೇಶ್ವರ. ವಿಶ್ವಸ್ವರೂಪಿಯೇ ಅವನಾಗಿದ್ದಾನೆ. ವಿಶ್ವಪ್ರಕೃತಿಯಲ್ಲಿ  ತ್ರಿಗುಣಗಳು ಇವೆ. ಮನುಷ್ಯರಲ್ಲೂ ಇವೆ. ಇಲ್ಲಿ ಮನುಷ್ಯ ಸಾತ್ವಿಕ ನಾಗಿ, ಸಭ್ಯಗೃಹಸ್ಥನಾಗಿ  ಇಲ್ಲವೇ ಸಂತನಾಗಿ ಬದುಕವುದನ್ನು ಬಿಟ್ಟರೆ ಬೇರೆ ಏನಿದೆ ಹೇಳಿ?   ಕೆಟ್ಟದ್ದೆಂಬುದು ಯಾವ ಕಾಲದಲ್ಲಿ ಇರಲಿಲ್ಲ? ಎಲ್ಲಕಾಲಕ್ಕೂ ಕೆಟ್ಟದ್ದೆಂಬುದು ಹೆಚ್ಚು ಇರುವುದೇ.   ಅದಿರುವುರಿಂದಲೇ ಒಳ್ಳೆಯದಕ್ಕೇ ಬಹಳ ಬೆಲೆ ; ನೈತಿಕತೆ ಗೂ ಒಂದು ನೆಲೆ ತಾನೇ ?, ಧರ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಕರ್ಮಸಿದ್ದಾಂತ, ಆತ್ಮ, ಪೂರ್ವಜನ್ಮ, ಪುನರ್ಜನ್ಮ , ಜಾತಕಫಲ, ಕರ್ಮಫಲ, ಪ್ರಾರಬ್ಧಗಳು ಇವೆಲ್ಲ   ಪ್ರಶ್ನೆಗಳಿಗೆ ವಾಸ್ತವಿಕ ವೈಜ್ಞಾನಿಕವಾಗಿ ಉತ್ತರಿಸುವ  ದೇವರು ಶ್ರೀನಿವಾಸನ ಕಲ್ಯಾಣ ಕಥೆ; ಭವಿಷ್ಯೋತ್ತರ ಪುರಾಣ ಕಥೆ. ದೇವರು ಒಬ್ಬನೇ  ಸರ್ವೇಶ್ವರ. ಶ್ರೀನಿವಾಸ ವೆಂಕಟೇಶ್ವರನ ರೂಪದಲ್ಲೂ ಅವನೇ… ಕಲ್ಲಿನ ಮೂರ್ತಿಯಲ್ಲಿ ದೇವರಿದ್ದಾನೆಯೇ? ಪ್ರಾಣ ಪ್ರತಿಷ್ಠಾಪನೆ ಎಂದರೇನು?  ಪಂಚ ಪ್ರಾಣಗಳು, ಯೋಗಸಾಧನೆ, ಪಂಚಭೂತಗಳು, ವೇದಗಳೆಂದರೇನು? ಪೂಜೆ, ತಿರುಮಲೆ ಶ್ರೀ ವೆಂಕಟೇಶ್ವರನ ದೇವಾಲಯದಲ್ಲಿ ಪ್ರಾತಃಕಾಲದ ಮೊದಲ ಪೂಜೆ ವಿಶ್ವರೂಪ ಸೇವೆಯಿಂದಲೇ ದಿನದ ಎಲ್ಲಾ ಪೂಜೆಗಳೂ ಪ್ರಾರಂಭವಾಗುವುದು‌. ಯಜ್ಞ, ಹೋಮ, ತೀರ್ಥ ಸ್ನಾನ ಹರಕೆ, ಇಲ್ಲಿ ಎಲ್ಲವೂ    ವಾಸ್ತವಿಕವಾಗಿ, ವೈಜ್ಞಾನಿಕವಾಗಿ ಹಾಗೂ ತಾತ್ವಿಕವಾಗಿ ಎಲ್ಲಕಾಲಕ್ಕೂ ಸಲ್ಲುವಂತಿರುವ ಜೀವನ ಮೌಲ್ಯಗಳನ್ನು ಸಂಶೋಧನೆ ಮಾಡಿ,   ನಿತ್ಯ ನಿರಂತರ ಹೊಸ ಅನುಭವವನ್ನು ನೀಡುವ ಒಂದು ಅಪರೂಪದ ಆಧ್ಯಾತ್ಮಿಕ ಕೃತಿ ಇದಾಗಿದೆ. ವೇಗಗತಿಯಲ್ಲಿ ಮುಂದುವರಿದಿರುವ ಅಂದಿಗೂ ಇಂದಿಗೂ ಪ್ರಪಂಚಕ್ಕೆ ಭವಿಷ್ಯೋ ತ್ತರವಾಗಿ ಹಿಡಿದ ಕೈಗನ್ನಡಿ! ಹಿಂದೂಧರ್ಮ ದ ಸಾರವನ್ನೇ ನಿಮಗೆ ತೆರೆದು ತೋರುವ ಪ್ರಮಾಣಿಕ ಪ್ರಯತ್ನ. ಸಾರ್ಥಕ ಬದುಕಿಗೆ ಉಪಯುಕ್ತ ಮಾಹಿತಿಯೊಂದಿಗೆ ಪುಸ್ತಕ ಚಿತ್ತಾಕರ್ಷ್ಕ ವಾಗಿ ಮುದ್ರಣವಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಇದು         ಆತ್ಮವಿಶ್ವಾಸ ಹಾಗೂ ದೈವಪ್ರೇರಣೆಯಲ್ಲಿ  ಮೂಡಿಬಂದ ಅಪರೂಪದ ಕೃತಿ.                 ಓದಿ ಸಂಗ್ರಹಿಸಿಡಿ. ಇದು ತಿರುಮಲೆ ದೇವಾಲಯದ ಬಗ್ಗೆ ಸಂಪೂರ್ಣ  ಮಹಿತಿ ಮತ್ತು ಚರಿತ್ರೆಯನ್ನು ತೆರೆದಿಡುವ ನಿಮಗೂ ಆತ್ಮಸಂತೋಷ ನೀಡುವ ಗ್ರಂಥ ಹಾಗೂ ಪೌರಾಣಿಕ ಕಾದಂಬರಿ (complete book about Tirupati Tirumalesha) ಎಂದರೆ ಅತ್ಯಾಶ್ಚರ್ಯವೇ ;                    ಉತ್ಪ್ರೇಕ್ಷೆಯೇನಿಲ್ಲ….

ಮುಂದೆ ಓದಿ >>>>

ಕಂಪ್ಯೂಟರ‍್ ಕಲಿಕೆಯಲ್ಲಿ…..Computer Introduction-Concepts)

ಶತ ಶತಮಾನಗಳಿಂದ ಮನುಷ್ಯ ಪ್ರಕೃತಿ ಪರಿಸರದಿಂದ ಪ್ರೇರಣೆ ಪಡೆಯುತ್ತಾ ಸತತ  ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ದಿನ ದಿನಕ್ಕೂ ವಿಜ್ಞಾನ ಬೆಳಕಿನೊಡನೆ ಸ್ಪರ್ಧಿಸುತ್ತಾ, ಅಣುವಿನಿಂದ ಮಹತ್ತಾಗುತ್ತಲೆ ಸಾಗಿದೆ. ತಿರುಗುವ ಚಕ್ರಗಳಾಚೆಗೂ ಮಿಗಿಲಾಗಿ ಹೊಸ ಹೊಸ ಆವಿಷ್ಕಾರಗಳತ್ತ ವೇಗವಾಗಿ ಮುನ್ನಡೆದಿದೆ. ಹಾಗೆ ನೋಡಿದರೆ ಕಂಪ್ಯೂಟರ್ ಕೂಡ ಮನುಷ್ಯನಿಗೆ, ಅವನ ಮಿದುಳಿಗೆ ಪರ್ಯಾಯವಾಗಿ ಹೋಲಿಸಿ ತಯಾರಾದ ಒಂದು ಅದ್ಭುತ ಉಪಕರಣವೇ ಆಗಿದೆ. ಆದರೂ ಮನುಷ್ಯನ ಮಿದುಳಿನ ಸಂಪೂರ್ಣ ರಹಸ್ಯ ವಿಜ್ಞಾನಿಗಳಿಗೆ ತಿಳಿದೇ ಇಲ್ಲವೆನ್ನುತ್ತಾರೆ…ಅಲ್ಲವೇ?

ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜನಜೀವನದ ಪರಿಕಲ್ಪನೆಯನ್ನೇ ಬದಲಿಸಿದೆ; ನಿತ್ಯ ಬದುಕಿನ ವಿಧಾನವೇ ಅದಾಗಿದೆ. ಒಂದು ಕಾಲಕ್ಕೆ ಉನ್ನತ ಶಿಕ್ಷಣ ಪಡೆದವರಿಗೆ ಹಾಗೂ ಅತ್ಯುನ್ನತ ವೈಜ್ಞಾನಿಕ ಕೇಂದ್ರ ಗಳಿಗೆ ಮಾತ್ರ ಮೀಸಲಾಗಿದ್ದ ಕಂಪ್ಯೂಟ ರ್, ಇದೀಗ ಪ್ರಾಥಮಿಕ ಶಾಲೆಗಳಿಗೆ ಕಾಲೇಜುವ ವಿದ್ಯಾರ್ಥಿಗಳಿಗೆ, ವ್ಯವಹಾರಸ್ಥರಿಗೆ, ಉದ್ಯೋಗಗಳಿಗೆ ಹಾಗೂ ಕಾರ್ಮಿಕ ವರ್ಗದವರಿಗೂ ಸಹ ಅತ್ಯಗತ್ಯವಾಗಿ ಬಳಸುವ ಸಾಧನವಾಗಿದೆ.  ವೇಗವಾಗಿ ಮುಂದುವ ರೆದ ನಾಗರೀಕ ಸಮಾಜದ ಅವಿಭಾಜ್ಯ ಅಂಶವೇ ಅದಾಗಿದೆ. ಇಂದಿನ ದೈನಂದಿನ ವಿದ್ಯಮಾನ-ವ್ಯವಹಾರ ಮತ್ತು ಔದ್ಯೋಗಿಕ ಕೆಲಸ ಕಾರ್ಯಗಳಲ್ಲಿ ದುಡಿಮೆಗೆ, ಕಂಪ್ಯೂಟರ್ ಕಲಿಕೆಯು ಪ್ರತಿಯೊಬ್ಬ ರಿಗೂ ಅನಿವಾರ್ಯವೆನಿಸಿದೆ.

1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟ ರ್, ಇಂದಿಗೆ ಎ.ಟಿ.ಎಮ್. ಮೂಲಕ ಹಣ ಕೊಡುವಂಥ ಹೆಮ್ಮ ರವಾಗಿ ನಿಂತಿದೆ. ನಮ್ಮಅಂಗೈಯಲ್ಲಿರುವಮೊಬೈಲ್-ಸೆಲ್ ಫೋನ್ ಸಹ ಪುಟ್ಟ ಕಂಪ್ಯೂಟರ್ ನಂತೇ ಬಳಕೆ ಬಂದಿದೆ. ನಾವು ವಿದ್ಯಾವಂತರಾಗಿಕಂಪ್ಯೂಟರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೂ ಆದ್ಯ ಕರ್ತವ್ಯವೇ ಆಗಿರುತ್ತದೆ.

ಕಂಪ್ಯೂಟ ರ್ ಇತಿಹಾಸ- ಧ್ವನಿವಾಹಿನಿ ಇಲ್ಲಿದೆ ಕೇಳಿ                      ಕಂಪ್ಯೂಟ ರ್ ಗೂ ಕೂಡ ಮನುಷ್ಯನಂತೆಯೇ ಎರಡು ಸ್ಮೃತಿಗಳಿವೆ

1.ಶಾಶ್ವತ ಸ್ಮೃತಿ –(Read only Memory)ಇದು ಕಂಪ್ಯೂಟರ್ ನ ಅದಾನ ಪ್ರದಾನ ವ್ಯವಸ್ಥೆಯಲ್ಲಿ (Basic Input Output System) ಅಡಕವಾಗಿರುತ್ತದೆ.

2. ತಾತ್ಕಾಲಿಕ ಸ್ಮೃತಿ –(Random Access Memory)ನೀವು ಗಮನಿಸಿ, ನೀವು  ಬೆಳಿಗ್ಗೆ ಹಾಸಿಗೆಯಿಂದ ಎದ್ದನಂತರ ರಾತ್ರಿ(ಪುನಃ ನಿದ್ರಿಸುವವರೆಗೆ) ನೋಡುವುದೇನೆಲ್ಲವೂ ನಿಮ್ಮ ತಾತ್ಕಾಲಿಕ ಮೆಮೊರಿಯಲ್ಲಿರುತ್ತದೆ. ನೀವು ಇಚ್ಛಿಸಿದರೆ ಮಾತ್ರ ನೋಡಿದುದನ್ನು ನಿಮ್ಮ ಸ್ಮೃತಿಯಲ್ಲಿ ಶಾಶ್ವತ ಸಂಗ್ರಹಿಸಲಿಕ್ಕಾಗಿ ಉಳಿಸಿಕೊಳ್ಳುತ್ತೀರಿ/ಸೇವ್ ಮಾಡಿಕೊಳ್ಳುತ್ತೀರಿ.

3.ಚಿಕ್ಕ ಮಗುವಿಗೆ ಹುಟ್ಟಿದ ಆನಂತರದ ದಿನಗಳಲ್ಲೇ ಸ್ವೀಕರಿಸುವ ಮತ್ತು ಪ್ರತಿಕ್ರಿಯಿಸುವಂತ(ನೋಡಿ ಗುರುತಿಸುವ, ನಗುವ/ಅಳುವ) ವ್ಯವಸ್ಥಿತವಾದ ಪ್ರಾಥಮಿಕ ಅರಿವು ತಾನೆ ಮೂಡಿ ಬಂದರೆ ಮಾತ್ರ, ಈ ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗಿರಬೇಕೆಂಬುದು ಮತ್ತು ನಾವು ನೀಡುವ ಸೂಚನೆ ಆದೇಶಗಳೆಲ್ಲವನ್ನೂ ಅದು ಗ್ರಹಿಸುತ್ತಲೆ ಬೆಳೆಯಲು ಸಾಧ್ಯವಾಗುತ್ತದೆ.(ಮಾನವ ಸಹಜ ಅನುಕರಣೆ ಹೊರತಾಗಿ). ಅಂತಹ ಅದಾನ ಪ್ರದಾನ ವ್ಯವಸ್ಥೆಯು (Basic Input Output System) ಚಿಕ್ಕಮಗುವಿಗೆ ಆರಂಭಿಕವಾಗಿ ಕ್ರಿಯಾಶೀಲವಾಗದಿದ್ದರೆ ಡಾಕ್ಟರೂಗಳೂ ನಿಸ್ಸಹಾಯಕರೇ ಆಗಿಬಿಡುತ್ತಾರೆ.

4. ಕಂಪ್ಯೂಟ ರ್ ನ ಬೈನರಿ ಭಾಷೆ 0- 1  ಹೀಗೆ ದ್ವಿಮಾನ ಪದ್ಧತಿಯ ಸಂಖ್ಯಾ ರೂಪಕಗಳು, ಸಂಜ್ಞೆಗಳಿಂದಾಗಿದೆ.

5 .ಕಂಪ್ಯೂಟರ್ ನ  ಬಿಡಿಭಾಗಗಳೆ ಹಾರ್ಡ್ ವೇರ್ ,ಅದರ ತಂತ್ರಾಂಶಗಳು- ಸಾಫ್ಟ್ ವೇರ್

6. ಪ್ರದಾನ ನಿಯಂತ್ರಣ ತಂತ್ರಾಂಶವೆಂದರೆ- ಆಪರೇಟಿಂಗ್ ಸಿಸ್ಟಂ-(Master Control Program) ಸಾಮಾನ್ಯವಾಗಿ  ಬಹುತೇಕ ಬಳಕೆದಾರರಂತೇ ನೀವು ಬಳಸುವ ವಿಂಡೋಸ್ XP/ ವಿಂಡೋಸ್ 7…. ಈ  ಓ.ಎಸ್ ನ್ನೇ ಅವಲಂಬಿಸಿ ಕ್ರಿಯೆಯಲ್ಲಿ ತೊಡಗುವ ಇತರೆ  ಎಂ.ಎಸ್. ವರ್ಡ್, ಫೋಟೋಷಾಪ್, ಪೇಜ್ ಮೇಕರ್, ಕೊರೆಲ್ ಡ್ರಾ ಮುಂತಾದ  ತಂತ್ರಾಂಶಗಳೆಲ್ಲವೂ ಅಪ್ಲಿಕೇಷನ್ ಸಾಫ್ಟ್ ವೇರ್ ಅಥವಾ ಅಪ್ಲಿಕೇಷನ್ಸ್ ಪ್ರೋಗ್ರಾಂಸ್.

ಎಷ್ಟೇ ಆಗಲಿ, ಮನುಷ್ಯನ ಸ್ವಂತಿಕೆ, ಆಲೋಚನೆ, ಬುದ್ಧಿವಂತಿಕೆ, ಸೃಜನಾತ್ಮಕ ಶಕ್ತಿ, ಸೂಕ್ಷ್ಮ ಪ್ರಜ್ಷೆ, ಪ್ರತಿಕ್ರಿಯಾಶೀಲತೆ ಮುಂತಾದ ಸಾಮರ್ಥ್ಯಕ್ಕೆ ಕಂಪ್ಯೂಟರ್ ಸರಿ ಸಾಟಿಯಾಗಲಾರದು. ಆದರೇನು!  ವಿಜ್ಞಾನಿಗಳು, ತಂತ್ರಜ್ಞರು ಕಂಪ್ಯೂ ಟ ರಗೆ ಕೃತಕ ಆಲೋಚನೆ ಮತ್ತು ಬುದ್ಧಿವಂತಿಕೆಯನ್ನು ಅಳವಡಿಸುವತ್ತ ಸಾಗಿದ್ದಾರೆ.

ಮನುಷ್ಯನ ಆಪರೇಟಿಂಗ್ ಸಿಸ್ಟಂ ಯಾವುದು ಗೊತ್ತೇ…?ಮನುಷ್ಯ ತನ್ನ ದೈಹಿಕ ನಿಯಂತ್ರಣದೊಂದಿಗೇ, ಈ ಸಮಾಜದಲ್ಲಿ ತಾನು ನೈಸ್ ಜಂಟಲ್ ಮೆನ್ / ನೈಸ್ ವಿಮೆನ್ ಆಗಿ ವರ್ತಿಸುವುದನ್ನೇ ಓ.ಎಸ್. ಎನ್ನಬಹುದಾಗಿದೆಯಲ್ಲವೇ…?

ಅವನು ಬೆಳೆದಂತೆ(ಅನುಕರಣೆ, ಆಲೋಚನೆಯ ಹೊರತಾಗಿ) ಕಲಿತದ್ದು ವಿದ್ಯೆ ಹಾಗೂ ಅಳವಡಿಸಿಕೊಂಡ ಉದ್ಯೋಗ ಇವುಗಳೆಲ್ಲವೂ ಅಪ್ಲಿಕೇಷನ್ ಪ್ರೋಗ್ರಾಂಸ್ ಆದೀತಲ್ಲವೇ…

ಮನುಷ್ಯನ ದೇಹಿಕ ಅಂಗಾಂಗಗಳೇ ಹಾರ್ಡ್ ವೇರ್, ಅವನು ಬುದ್ಧಿವಂತಿಕೆಯಿಂದ ಅಳವಡಿಸಿಕೊಂಡ ದ್ದೆಲ್ಲವೂ ಸಾಫ್ಟ್ ವೇರ್ ಅಲ್ಲವೇ…

ನೀವು ತಿಳಿದಿರುವಿರಾ…

* ಕಂಪ್ಯೂಟರ್ ಗೂ ಸ್ವೀಕರಿಸುವ ಮತ್ತು ಪ್ರತಿಕ್ರಿಸುವ ಹಾಗೆ  ಒಂದು ಭಾಷೆ ಇದೆ.  ಅದನ್ನೇ “ಬೈನ ರಿ ಭಾಷೆ” ಎನ್ನುತ್ತಾರೆ.

* ನೀವು ಕಂಪ್ಯೂಟರ್ ತೆರೆಯಲ್ಲಿ ನೋಡುವುದೆಲ್ಲವೂ ತಾತ್ಕಾಲಿಕ ಮೆಮೊರಿಯಲ್ಲಿರುತ್ತದೆ.

* ಕಂಪ್ಯೂಟರ್ ಹ್ಯಾಂಗ್ ಆದ ರೆ(ಸ್ತಗಿತಗೊಂಡರೆ) ರಿಸ್ಟಾರ್ಟ್ ಮಾಡುವುದರಿಂದಲೇ ಬಹುತೇಕ ಸಂದರ್ಭಗಳಲ್ಲಿ ಸರಿಹೋಗುತ್ತದೆ.

* ಕಂಪ್ಯೂಟ ರ್ ಶಿಕ್ಷಣ ಆರಂಭವಾಗುವುದೇ ಪರ್ಸನಲ್ ಕಂಪ್ಯೂಟರ್ ನಲ್ಲಿ..

* ಲ್ಯಾಪ್ ಟಾಪ್ ಎಂದರೆ  ಒಂದು ದೊಡ್ಡ ಮೊಬೈಲ್ ಕಂಪ್ಯೂಟರ್ ಇದ್ದಂತೆಯೇ ಮರೆಯದಿರಿ.

* ಮನೆಗೊಂದು ಕಂಪ್ಯೂಟ ರ್ ಎಂದ ರೆ ಡೆಸ್ಕ್ ಟಾಪ್ ಕಂಪ್ಯೂಟ ರ್, ಲ್ಯಾಪ್ ಟಾಪ್ ಅಗತ್ಯವೆನಿಸಿದರೆ ಆನಂತರದ ಆಯ್ಕೆ..

ನಾನು ಕಂಪ್ಯೂಟರ್ ಶಿಕ್ಷಕನಾದದ್ದು…

ನಾನು ಕನ್ನಡ ಲೇಖಕನಾಗಿ ಒಂದು ರವಷ್ಟು ಹೆಸರು ಮಾಡುತ್ತಿದ್ದಂತೆಯೆ ಪತ್ರಿಕೆಗಳಿಗೆ ಕಳುಹಿಸುವುದಕ್ಕಾಗಿ ನನ್ನ ಹಸ್ತ ಪ್ರತಿ ತಯಾರಿಸಲು 1998 ರಲ್ಲಿ ಮನೆಗೆ ಕಂಪ್ಯೂಟರ್ ತಂದೆ. ಇಲಾಖೆಯಲ್ಲಿದ್ದಾಗ ಅದಕ್ಕೆ ಸಂಬಂಧ ಪಟ್ಟಂತೆ ಕಂಪ್ಯೂಟರ್ ಟ್ರೈನಿಂಗ್ ಪಡೆದಿದ್ದೆ. ಆದರೆ, ಅಲ್ಲಿ ಕನ್ನಡ ಎಂಬುದಿರಲಿಲ್ಲ; ಅಷ್ಟಕ್ಕೂ, ಆಗ ಕಂಪ್ಯೂಟರ್ ನಲ್ಲಿ ಕನ್ನಡ ಇನ್ನೂ   ಬೆಳವಣಿಗೆ ಕಂಡಿರಲಿಲ್ಲ. ನನ್ನ ಮಕ್ಕಳಿಗೆ ಮನೆಯಲ್ಲಿ ನಾನು ಕಂಪ್ಯೂಟರ್ ಪಾಠ ಹೇಳಿಕೊಟ್ಟು ತಯಾರು ಮಾಡಿದ್ದನ್ನು ಕಂಡ ನನ್ನ ಸ್ನೇಹಿತರು, ನನ್ನನ್ನು ಅವರ ಮಕ್ಕಳಿಗೂ ಮನೆ ಪಾಠ ಹೇಳಿಕೊಡಲು ಒತ್ತಾಯಿಸಿದರು. ಸರಿ, ಒತ್ತಾಯಕ್ಕೆ ಕಟ್ಟು ಬಿದ್ದು ವಾರಕ್ಕೆ ಮೊರು ದಿನ ಮಾತ್ರ ಪಾಠ ಎಂದು ಹೇಳಿ ಆರಂಭಿಸಿದೆ.  ಹೀಗೆ ಅನಿರೀಕ್ಷಿತವಾಗಿಯೆ  ಕಂಪ್ಯೂಟರ್ ಶಿಕ್ಷಕನಾದೆ.   ಮುಂದೆ ಓದಿ…>>>

ಇವು ಮೂರು ನನ್ನ ಕನ್ನಡ ಕಂಪ್ಯೂಟರ್ ಪುಸ್ತಕಗಳು-

ಸಿ.ಡಿ. ಇಲ್ಲದೇನೆ ಯಾರೆಲ್ಲರೂ ಕಲಿಯಲು ಅತ್ಯಂತ ವಿಶ್ವಾಸರ್ಹವೆನಿಸಿವೆ….

1. ವಿನ್ ಕಂಪ್ಯೂಟರ್ಸ-ಕನ್ನಡ ಕಂಪ್ಯೂಟರ‍್ ಕಲಿಕೆ ಕೈಪಿಡಿ (Software Made Simple)

10 ನೇ ಆವೃತಿ  ೨೦೧೪ ಇದೀಗ ಬಂದಿದೆ

ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣ-ಪಾಠಗಳ  ನನ್ನ ಇನ್ನಷ್ಟು ಧ್ವನಿವಾಹಿನಿಯೊಂದಿಗೆ ಕೇಳಿ-

ಈ ಬಗ್ಗೆ ಅಪ್ ಡೇಟ್ ಮಾಡಲಾಗಿದೆ   ವಿನ್ ಕಂಪ್ಯೂಟರ್ಸ…ಇಲ್ಲಿ  ನೋಡಿ >>>>   

WinComputers 2014  For net

11 thoughts on “ಮುಖಪುಟ”

    1. ನನ್ನ ಹೊಸ ಪುಸ್ತಕ-ಆಧ್ಯಾತ್ಮಿಕ, ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ. ಇದು ಒಂದು ಅಪರೂಪದ ಪೌರಾಣಿಕ ಕೃತಿ. ಇದು ಆಧ್ಯಾತ್ಮಿಕ ಪ್ರಪಂಚಕ್ಕೆ ಒಂದು ವಿನೂತನ ಕೊಡುಗೆ. ಸಹಸ್ರ ಸಹಸ್ರ ವರ್ಷಗಳಿಂದ ನಾವು ಕಂಡು ಕೇಳಿದ ತಿರುಮಲೇಶ ಶ್ರೀನಿವಾಸನ ಕಲ್ಯಾಣ ಕಥೆ ಇಷ್ಟೇ ಅಲ್ಲವೇ… ಎನ್ನುವಂತಿಲ್ಲ. ಶ್ರೀನಿವಾಸ ಕಲ್ಯಾಣ ಕಥೆಯಲ್ಲಿ ಸಮಕಾಲೀನ ಜೀವನ ಮೌಲ್ಯಗಳಿವೆ ಎಂದರೆ, ಅಚ್ಚರಿಯಾದೀತು ನಿಮಗೆ. (ಹಾರ್ಡ್ ಬೌಂಡು, ಪುಟಗಳು-೪೦೦, ಬೆಲೆ ರೂ.೨೭೦ ರಿಯಾಯಿತಿ ಬೆಲೆ ರೂ.೨೦೦/- ವಿಪಿಪಿ ಅಂಚೆ ಮೂಲಕ ತರಿಸಿಕೊಳ್ಳಬಹುದು).

  1. By chance nimma pustaka “wincomputers” basic pustaka nodidaaga bahalaa kushii aithuu. it is fantastic… even little knowledge person can understand and learn Computer, even practically your all three books are very much useful. i never find these type of kannada computer books any where. Please continue your writing -With my regards..

  2. i am a phycial handicaped person running a tutorial along with my wife and teaching the general computer information to my students by chance i got all the three books written by u, it is fantastic; very use full, even to laypersons,
    that too the revised win computer basic book, as you have added therein about the internet & other applications; including Kannada typing, sending e mails,
    -good luck sir Samartha, Govinda Shantha Samartha,Tarikere

  3. ಪ್ರಿಯ ಶಿವರಾಮ್ ಸರ್,
    “ಏನು ಗಳಿಸಿದರೂ ಕಠಿಣ ಪರಿಶ್ರಮಕ್ಕೆ ಸಾರ್ಥಕ್ಯ ಕಾಣಬೇಕು”
    ಎಂಬುದನ್ನು ನಿಜವಾಗಿಸಿದ್ದೀರಿ.”
    ಏಕೆಂದರೆ, ತಮ್ಮ ಕನ್ನಡ “ವಿನ್ ಕಂಪ್ಯೂಟರ್ಸ” , “ವಿನ್ ಯುವರ್ PC ” ಮತ್ತು
    “ಮೇಜಿನ ಮೇಲಿನ ಪ್ರಕಾಶನ” ಪುಸ್ತಕಗಳನ್ನು ಓದಿ ಪ್ರಯೋಜನ ಪಡೆದಿದ್ದೇನೆ.
    ಕಲಿಯಬೇಕು, ಕಲಿಸಬೇಕೆಂಬ ಹಂಬಲ ಇರುವವರು ಎಂಥವರಾದರೂ ತಮ್ಮ
    ಪುಸ್ತಕಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
    ತಮ್ಮ ಬರವಣಿಗೆ ಹಾಗೂ ಬೋಧನಾ ಕ್ರಮದಲ್ಲಿರುವ ಪರಿಶ್ರಮ ಶ್ಲಾಘನೀಯ. ನಾನು ಎಂದೂ ಚಿರ ಋಣಿ.
    ಇಂತಹ ಪುಸ್ತಕಗಳನ್ನು ಎಲ್ಲರೂ ಕೊಂಡು ಪ್ರಯೋಜನ ಪಡೆಯುವಂತಾಗಬೇಕು.
    ದೇವರು ತಮಗೆ ತಮ್ಮ ಕುಟುಂಬಕ್ಕೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ
    ಎಂದು ಬೇಡಿಕೊಳ್ಳುತ್ತೇನೆ.
    ಧನ್ಯವಾದಗಳು,
    ಪ್ರಭುದೇವ್ ಜಿ.ಡಿ.
    ಕಂಪ್ಯೂಟರ್ ಟೀಚರ್, ತ ರಳಬಾಳು ಮಠ,
    ಸಿರಿಗೆರೆ ಪೋಸ್ಟ್, ಚಿತ್ರದುರ್ಗ ಡಿಸ್ಟ್ರಿಕ್ಟ್
    -G D Prabhudev
    (via E-mail)

    1. ತಂತ್ರಜ್ಞಾನದಲ್ಲಿ ಎಲ್ಲವನ್ನೂ ಕನ್ನಡದಲ್ಲೇ ಪಡೆಯಲಾಗುವುದಿಲ್ಲ. ದೇಶ ಭಾಷೆಗೆ ಮಿಗಿಲಾದ ಜ್ಞಾನದಾಹ ನಮ್ಮದಾಗಬೇಕಲ್ಲ.

  4. ಡಿಯರ್ ಸರ್

    ನಿಮ್ಮ ಬ್ಲಾಗ್ ಗಳಿಗೆ ಬೇಟಿ ಕೊಟ್ಟಿ, ನಿಮ್ಮ ಸಾದನೆ ಕ್ರಿಯಾಶೀಲತೆ ಕಂಡು ಬೆರಗಾದೆ. ವಿಜ್ಞಾನ ದಿಂದ ಹಿಡಿದು ವೇದದ ವರೆಗೂ ಬರೆದಿರುವ ನಿಮ್ಮ ಜ್ಞಾನವನ್ನು ಕಂಡು ಆಶ್ಚರ್ಯಗೊಂಡೆ. ಅದು ಕೂಡ ಕನ್ನಡದಲ್ಲಿ ಕಂಪ್ಯೂಟರ್ ಬಗ್ಗೆ ಬರೆದಿರುವ ನಿಮ್ಮ ಬಗ್ಗೆ ನನಗೆ ಅತಿಯಾದ ಗೌರವ ಮೂಡಿದೆ

    ನಮಸ್ಕಾರ ಗಳೊಂದಿಗೆ

    ಮನೋಹರ್ ಬಿ ಎಸ್ಸ್
    {Via Email]

Leave a reply to sathyakumar Cancel reply

Ritertimes- New Light;New Dimension