ಧರ್ಮ ಕರ್ಮದ ಅಂಜಿಕೆ ಇಲ್ಲದಲ್ಲಿ ಭ್ರಷ್ಟಾಚಾರ ಅವ್ಯವಹಾರ ನಿಯಂತ್ರಿಸುವುದು ಅಸಾಧ್ಯ


ಯಾವು ದೇ ಕೆಲಸವನ್ನು ದುಡ್ಡು ಕೊಟ್ಟು ಮಾಡಿಸಿಕೊಳ್ಳಬಹುದಾದಲ್ಲಿ, ಅಲ್ಲಿ ಪ್ರತಿಭೆ,ಪರಿಶ್ರಮ, ಪ್ರಾಮಾಣಿಕತೆ ಉನ್ನತ ಶಿಕ್ಷಣ, ವಿದ್ಯೆ,ಪದವಿ, ಅಲ್ಲಿ ಕಾನೂನು, ಧರ್ಮ ನ್ಯಾಯಕ್ಕೆ ಬೆಲೆ ಇರುವುದಿಲ್ಲ” ಎನ್ನುತ್ತಾರೆ ನ್ಯಾಯಮೂರ್ತಿಗಳು. ಅಂದರೆ,ಸಂವಿಧಾನವೂ ಉಳಿಯಲಾರದು. ರಾಜಕೀಯದ ಕ್ಷುದ್ರ ರಾಜಕಾರಣದಲ್ಲೂ ಧನದುರಾಸೆ,ದುಡ್ಡುಮಾಡುವುದು ಏನೂ ಇಲ್ಲದೆ ರಾಜಕೀಯಕ್ಕೆ ಬಂದ ಸಾಮಾನ್ಯ ಶಾಸಕರೂ ಕರೋಡ್ ಪತಿಗಳಾಗುವುದು. ಸ್ವಿಸ್ ಬ್ಯಾಂಕ್ ನಂತ ಗೌಪ್ಯ ಕರಾಸ್ಥಾನದಲ್ಲಿ ಹಣ ಕೂಡಿಡುವುದು. ಇದೆಲ್ಲ ಇಂದು ನಮ್ಮ ಸಂವಿಧಾನ ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳು.

ನಮ್ಮ ಸಂವಿಧಾನ ಮತ್ತು ಕಾನೂನು ಕಾಯಿದೆಗಳು ಹೇಗಿವೆ ಎಂದರೆ, ಮೇಲ್ನೋಟಕ್ಕೇ ಆತ ಭಯೋತ್ಪಾದಕ ಮಹಾ ಪಾತಕಿ ಎಂದು ತಿಳಿದರೂ, Circumstantial evidences, Witnesses ಅಂತಲೋ ಮತ್ತೇನೋ ಸಾಕ್ಷ್ಯಾಧಾರಗಳು ಬೇಕೆಂತಲೂ ಅವನ ಕ್ರಿಮಿನಲ್ ಕೇಸ್ ವರುಷಾನುಗಟ್ಟಲೆ ಮುಂದೂಡಲ್ಪಡುತ್ತಲೇ ಇರುತ್ತದೆ. ಅವನು ಸೆರೆಮನೆಯಲ್ಲೇ ರಾಜಭೋಗ ಕಾಣುತ್ತಲೂ ಇದ್ದರೆ, ಆಶ್ಚಯವೇನಿಲ್ಲ…
ಇದಕ್ಕೆಲ್ಲ ಮೂಲಕಾರಣ, ದೇವರು ಧರ್ಮದ ಅಂಜಿಕೆ ಇಲ್ಲವಾಗುತ್ತಿರುವುದು. ವಿಶ್ವಮಾನವ ಪ್ರಜ್ಞೆ ಕಾಣೆಯಾಗುತ್ತಿರುವುದು.
ಪತ್ರಿಕೆಗಳೂ, ಎಲ್ಲ ಮೀಡಿಯಾಗಳೂ,ಅಷ್ಟೇಕ ಇದೀಗ ಅಕಡೆಮಿಕ್ ಲೆವೆಲ್ ಸಾಹಿತಿಗಳೆನಿಸಿಕೊಂಡವರಲ್ಲೂ, ಸಿನಿ ಸೂಪರ್ ಕಲಾವಿದರು(ಇವರು ತೆರೆಯಲ್ಲಿ ಮಾತ್ರ ದೇವರನ್ನು ಧರೆಗಿಳಿಸಿದವರು ಕಣ್ರೀ!ನಿಜ ಜೀವನದಲ್ಲಿ ಇವರೇ ಮುಗ್ಧ ಅಭಿಮಾನಿಗಳಿಗೆ ದೇವರು= ದೇವತೆಗಳಂತೆ ಕಂಗೊಳಿಸುವರು!!
ತಂತ್ರಜ್ಞಾನದ ವೇಗಗತಿಯಲ್ಲಿ ಇಂಟರ್ನೆಟ್ ಜಾಲತಾಣಗಳಲ್ಲಿ, ಮೊಬೈಲ್ ಆಪ್ಸಗಳಲ್ಲಿ ಹೆಣ್ಣು ಮನಮೋಹಕ ಸ್ವೇಚ್ಛಾಚಾರದ ದೃಶ್ಯಗಳಲ್ಲಿ ಮಾರಾಟದ ವಸ್ತುವಾಗಿರುವುದು ಹೆಣ್ಣು ಕುಲಕ್ಕೇ ಕಳಂಕವಾಗಿದೆ. ಕ್ಷಮಿಸಿ, ಎಲ್ಲ ಹೆಣ್ಣುಗಳೂ ಅಲ್ಲ. ವಿರಳವಾದರೂ ಉತ್ತಮ ಕನ್ಯೆಯರು ಸಭ್ಯ ಗೃಹಿಣಿಯರೂ ಇದ್ದಾರೆ. ಅಂತೆಯೇ ಸಭ್ಯ ಹುಡುಗರೂ ಗೃಹಸ್ಥರೂ ಇದ್ದಾರೆ.
ಇದು ತ್ರಿಗುಣಾತ್ಮಕ ಪ್ರಪಂಚ ಸ್ನೇಹಿತರೇ,
ಕೇಟ್ಟದ್ದೆಂಬುದು ಯಾವ ಕಾಲದಲ್ಲಿರಲಿಲ್ಲ ಹೇಳಿ..?
ಹಿಂದೆಯೂ ಕೆಟ್ಟದ್ದು ಇತ್ತು; ಈಗಲೂ ಇದೆ. ಮುಂದಿನ ಕಾಲಕ್ಕೂ ಇರುತ್ತದೆ.
ತ್ರಿಗುಣಾತ್ಮಕ ಪ್ರಪಂಷವೆಂದರೆ ಹಾಗೆಯೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಅಮೂರ್ತವಾಗಿ ಹೇಳಿರುವುದನ್ನು ನಾವು ಮೂರ್ತಗೊಳಿಸಿ ನೋಡುವುದರಿಂದ ಸತ್ಯವೆಂಬುದು ದೃದ್ಗೋಚರವಾಗುತ್ತದೆ.
ಅವು ಸತ್ವಗುಣ, ರಜೋಗುಣ, ತಮೋಗುಣವೆಂಬ ಗುಣತ್ರಯಗಳು.{ಗೀತೆ ಅ.14]
ಈ ವ್ಯವಹಾರಿಕ ಪ್ರಪಂಚದಲ್ಲಿ ರಜಸ್ಸಿನ ರೋಷ, ಆವೇಶ, ಕ್ರೋಧ, ಸೇಡು, ಧನಲಾಲಸೆ,
ತಮಸ್ಸಿನ ಅತಿಬೋಗಲಾಲಸೆ, ಹಿಂಸೆ ಕ್ರೌರ್ಯಗಳು ಮನುಷ್ಯ ತನ್ನ ಸತ್ವಗುಣದಿಂದ ನಿಗ್ರಹಿಸದಿದ್ದರೆ ಅಶಾಂತಿಯಿಂದ ನಿದ್ರೆಯಿಲ್ಲದೆ ಬದುಕುತ್ತಾನೆ.
ಆದ್ದರಿಂದ, ರಜಸ್ಸು ಮತ್ತು ತಮಸ್ಸು ಇವೆರಡು ಗುಣಗಳಿಗೆ ವಶರಾಗುವುದೂ ಮನುಷ್ಯನ ದೌರ್ಬಲ್ಯ ಅಲ್ಲವೇ..?
ಅದಕ್ಕೇ ಮನುಷ್ಯನಾದವನು ಸತ್ವಗುಣದಿಂದ ಬಾಹ್ಯಪ್ರಪಂಚದ ಆಸೆ ಆಮಿಷಗಳನ್ನೆಲ್ಲ ನಿಗ್ರಹಿಸಬೇಕು. ಲೈಂಗಿಕತೆಯ ಹುಚ್ಟು ಸೆಳೆತ ಬಿಟ್ಟು ಹಿತಮಿತವರಿತ ಜೀವನ ನಡೆಸಬೇಕು.
ಶ್ರೀಕೃಷ್ಣನ ಕರ್ಮಯೋಗ ಧ್ಯಾನಯೋಗ ಹೇಳುವುದು ಇದನ್ನೇ ಸ್ನೇಹಿತರೇ..
ಆದ್ದರಿಂದ, ವ್ಯವಹಾರೀಕ ಪ್ರಪಂಚದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ರಜೋ, ತಮೋಗುಣಗಳಿಗೆ ವಶರಾಗುವವರೇ ಹೇಚ್ಚುತ್ತಿರುವುದನ್ನು ಕಾಣುತ್ತಲಿದ್ದೇವೆ. ಇದಕ್ಕೆ ವಿಜ್ಞಾನದಲ್ಲಿ ಮೊಬೈಲ್, ಟ್ಯಾಬ್, ಇಂಟರ್ ನೆಟ್ ಗಳ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು.
ಆದ್ದರಿಂದ, ಮನ್ಯಷ್ಯನಾದವನಿಗೆ ಧರ್ಮ ಕರ್ಮದ ಅಂಜಿಕೆ ಇರಬೇಕು
ವಿಶ್ವದಾದ್ಯಂತ ಎಲ್ಲ ಮತೀಯಧರ್ಮದವರೂ ನಂಭಿಕೊಂಡಿರು ದೇವರು ಎಂಬ ಅಗೋಚರ ಶಕ್ತಿಯ
ಬಗ್ಗೆ ಹೆಚ್ಚು ನಾವು ಚಿಂತನ ಶೀಲರಾಗಬೇಕು.
ಸರ್ಕಾರಗಳೂ ದೈವ ನಿಂದನೆ ಮತ್ತು ಧರ್ಮ ನಿಂದನೆ ಪ್ರತಿಬಂಧಕ ಕಾಯ್ದೆಗೆ ಒತ್ತು ಕೊಟ್ಟು ಎಲ್ಲ ಪಕ್ಷಗಳೂ ಒಮ್ಮತದಿಂದ ಅದನ್ನು ಅಂಗೀಕರೀಸಬೇಕು.
ನಗುತ್ತೀರಿ ಅಲ್ಲವೇ…? ನಗುವ ವಿಷಯವಲ್ಲ.. ನಮ್ಮ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಆಗಲೇ ಬೇಕಾದುದದ್ದು.
ಅರಬ್ ದೇಶ, ಅಮೇರಿಕ ದೇಶಗಳಲ್ಲಿರುವಂತೆ ಅಪಾರಾಧಿಗಳಿಗೆ ಶಿಕ್ಷೆ ಕ್ಚಿಪ್ರಗತಿಯಲ್ಲಿ ಇತ್ಯರ್ಥವಾಗಬೇಕು.
ದೈವ ನಂಬಿಕೆ ಮತ್ತು ಧರ್ಮ ಕರ್ಮದ ಅಂಜಿಕೆ ಎಂಬುದಿಲ್ಲದೇ ದೇವರು ದೇವರು ದೇವಸ್ಥಾನ ಮಂದಿರಗಳಿಗೆ ಹೋಗುವುದೂ ನಮ್ಮ ಮಕ್ಕಳ ದೃಷ್ಟಿಯಲ್ಲಿ ಅರ್ಥ ಹೀನವಾಗತೊಡಗಿದೆ.
ಸಂವಿಧಾನ ಮಾತ್ರವಲ್ಲ ಯಾವ ಕಾನೂನು ಕಟ್ಟಳೆಗಳೂ ನಿಲ್ಲಲಾರದೇ ಹೋಗುವುವು
ನಿರಪರಾಧಿಗೂ ಶಿಕ್ಷೆಯಾದ ಸಂದರ್ಭಗಳಲ್ಲಿ ಮುಂದಿನ ಯುವ ಪೀಳಿಗೆಗೆ ಬದುಕು ಭವಿಷ್ಯವೇ ಡೋಲಾಯಮಾನವಾಗಿ, ಆತ್ಮಹತ್ಯೇಗಳಾಗುವುದು ಇದೇ ಕಾರಣಕ್ಕೇ ಅಲ್ಲವೇ..?
ನೋಡಿ, ಇವನೇನು ಮಹಾದೈವ ಭಕ್ತನೆನ್ನದಿರಿ. ಈ ಇಳಿವಯಸ್ಸಿನಲ್ಲಿ ನಾನೂ ಕೂಡ ಮಕ್ಕಳಿಗೆ ಹೇಳುವುದು ಇದನ್ನೇ ರಜೋ ಗುಣ ತಮೋಗುಣ ವಶರಾಗಿ ದೌರ್ಬಲ್ಯದಿಂದ ಹಾಳಾಗದಿರಿ. ಎಲ್ಲರಲ್ಲು ತ್ರಿಗುಣಗಳಿವೆ ಆಗಾಗ್ಗೆ ನಿಮ್ಮ ಅಂತಃ ಸತ್ವ ಎಚ್ಚರಿಸುವುದನ್ನು ಅರಿತುಕೊಳ್ಳಿ.
ಈ ಪ್ರಪಂಚದಲ್ಲಿ ಸಭ್ಯರಾಗಿ ಸಭ್ಯಗೃಹಸ್ಥರಾಗಿ ಕಷ್ಟಪಟ್ಟು ಪ್ರಮಾಣಿಕತೆಯಿಂದ ಬದುಕುವ ಕೆಳವರ್ಗದವರನ್ನು ನೋಡಿ ತಿಳಿಯಿರಿ.
ಸಿರಿಗೆರೆ ಶಿವಕುಮಾರಸ್ವಾಮಿಗಳು ಒಂದು ಅಂಕಣ ಲೇಖನದಲ್ಲಿ ಹೇಳಿದಂತೆ “ವಿದ್ಯೆ ಬಂತು ಬುದ್ಧಿ ಹೋಯ್ತು …ಢುಂ ಢುಂ ಎನ್ನುವಂತಾಗಬಾರದು. ಪ್ರಪಂಚದ ತ್ರಿಗುಣಾತ್ಮಕ ತತ್ವವೆಂದರೆ-ಎಲ್ಲ ಕಾಲಕ್ಕೂ ರಜಸ್ಸಿಗೆ ತಮಸ್ಸಿಗೆ ವಶರಾಗುವವರೇ ಎದ್ದು ತೋರುತ್ತಾರೆ; ಮೇಲ್ನೋಟಕ್ಕೆ ಅವರೇ ಪರಮ ಸುಖಿಗಳಂತೆಯೂ ಕಾಣುತ್ತಾರೆ. ದೈವ ನಂಬಿಕೆ ಧರ್ಮದ ಅಂಜಿಕೆ ಇರುವಲ್ಲಿ ನೂರಾನೆಯ ಬಲವಿರುತ್ತದೆ. ಭಗವಂತನ ಕೃಪೆಯೂ ಇರುತ್ತದೆ. ಇದು ಅನುಭವವೇದ್ಯ ಮಾತು. ಸತ್ಸಂಗ ಬೆಳಿಸಿಕೊಳ್ಳಿ, ಅಹಂಕಾರಿಗಳಿಂದ ದೂವಿರಿ.
ದೈರ್ಯದಿಂದ ಮುನ್ನುಗ್ಗಿದರೆ ಆಗುವ ಕೆಲಸಕ್ಕೆ ಸುಮ್ಮನೆ ನಿಮ್ಮ ಕಷ್ಟಾರ್ಜಿತ ದುಡ್ಡು ಚೆಲ್ಲದಿರಿ
ಈಗಾಗಲೇ ಹೇಳಿದಂತೆ ದೇವರ ನಂಬಿಕೆ ಬೇರೆಯಲ್ಲ ಧರ್ಮದ ಅಂಜಿಕೆ ಬೇರೆಯಲ್ಲ
ಕೇಳಿದ ನೀತಿ ಕರ್ಮವಾದರೆ ಮಾಡಿದ ಕೆಲಸ ಧರ್ವವಾಗುತ್ತದೆ.
ಶೋಚನೀಯ ಸಂಗತಿಯೆಂದರೆ, ನಮ್ಮ ಪ್ರಜಾಪ್ರಭುತ್ವದಲ್ಲಿ ಸಂವಿಧಾನದಲ್ಲಿ ದೈವ ನಂಬಿಕೆ ಧರ್ಮ ನಂಬಿಕೆಗೆ ಒತ್ತುಕೊಡುವ ಕಾನೂ ಕಟ್ಟಳೆಗಳು ಇಲ್ಲದೇ ಎಲ್ಲವೂ ಪುಸ್ತಕದ ಬದನೇ ಕಾಯಿಯೇ ಆಗಿರುವುದು. ಸಂವಿಧಾನ ಧರ್ಮಶಾಸ್ತ್ರ ವಾಗಬೇಕು. ರಾಜಕೀಯಸ್ಥರಿಂದ ಅಧಿಕರಾರಿಗಳಿಂದ ಹಿಡಿದು ಚಪ್ರಾಸಿವರೆಗೂ ಭ್ರಷ್ಟಾಚಾರ ಘೋರ ಪಿಡುಗಾಗಿ ಸಮಾಜದ ಶಾಂತಿ ನೆಮ್ಮದಿ ಹಾಳಾಗುತ್ತಿರುವುದೂ, ಅಪರಾಧಗಳು ಹೆಚ್ಚುತ್ತಿರುವುದೇ ದಿನ ಬೆಳಗಾದರೆ, ಪತ್ರಿಕೆಗಳಲ್ಲಿ, ಟಿ.ವಿ.ಚಾನೆಲ್ಲಗಳಲ್ಲಿ ಅವೇ ವೈಭವೀಕರಣವೆಂದರೆ ತಪ್ಪಾಗಲಾರದು.
ಧರ್ಮ ನಿಂದನೆ ದೈವನಿಂದನೆ ಪ್ರತಿಬಂಧಕ ಕಾಯ್ದೆ ತಿದ್ದುಪಡಿ ಭಾರತದ ಸಂವಿಧಾನಕ್ಕೆ ತುರ್ತಾಗಿ ಆಗಬೇಕಿದೆ. ಅಲ್ಲವೇ ನೀವೇ ಹೇಳಿ ಇಲ್ಲವಾದರೆ ಈ ಜನಾರಣ್ಯದ ಮನುಷ್ಯಮೃಗಗಳ ನಡುವೆ ಬದುಕುವುದಾದರೂ ಹೇಗೆ..?
ಭಗವದ್ಗೀತೆ, ಕುರಾನ್,ಬೈಬಲ್ ಮುಂತಾದ ಧರ್ಮಗ್ರಂಥಗಳು ನ್ಯಾಯಾಲದಲ್ಲಿ ಅತಿ ಮುಖ್ಯ ಪ್ರಾಮಾಣ್ಯವಾಗಿ ಆರೋಪಿಗಲ ಕಡತದ ವಿಚಾರಣೆ ಆರಂಭವಾಗುವುದಾಗಬೇಕು. ಆದ ಸಂವಿಧಾನಕ್ಕೂ ಅರ್ಥ ಬರುತ್ತದೆ. ಅದು ಉಳಿಯುತ್ತದೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s