ಸತ್ಯ ಹೇಳಿಲಿಕ್ಕೆ ಹೋದರೆ ಸತ್ತಂತೆಯೇ… ಇವನೇನ್ ಮಹಾ ಸತ್ಯ ಹರಿಶ್ಚಂದ್ರನೋ…


ಸತ್ಯ ಹೇಳಿಲಿಕ್ಕೆ ಹೋದರೆ ಸತ್ತಂತೆಯೇ… ಇವನೇನ್ ಮಹಾ ಸತ್ಯ ಹರಿಶ್ಚಂದ್ರನ ಮರಿಮಗ ಕಣಯ್ಯ…. ಎಂಬೋ ಜನಜನಿತ ಮಾತನ್ನು ಕೇಳಿರುತ್ತೀರಿ. ಅಲ್ಲಾ, ಹಾಗಾದರೆ, ಸತ್ಯ ಹೇಳುವವರು ಅಂದ್ರೆ ಸತ್ಯವಂತರು ಈ ನಮ್ಮ ವ್ಯವಹಾರೀಕ ಪ್ರಪಂಚದಲ್ಲಿ ಇಲ್ಲವೇ ಇಲ್ಲ ಎನ್ನುವುದು ಸಾಧ್ಯವೇ.?

ನ್ಯಾಯವಾಗಿಯೇ ದುಡಿದು ಉನ್ನತಮಟ್ಟಕ್ಕೆ ಬಂದು ಸ್ಥಿತಿವಂತರಾದರವರೂ ಇದ್ದೇ ಇರುತ್ತಾರೆ ಅಲ್ಲವೇ…?  ಹಾಗಾದರೆ, ಹಾಗೇಕೆ ಹೇಳ್ತಾರೇಂತಿರಾ…. ಈ ಪ್ರಪಂಚದಲ್ಲಿ ಯಾವಾಗಲೂ ಸತ್ವ, ರಜಸ್ಸು ಮತ್ತು ತಮಸ್ವು ಇವು ಮೂರು ಗುಣಗಳು ಎಲ್ಲರಲ್ಲಿದ್ದರೂ  ಬಹುತೇಕ ಜನರಲ್ಲಿ ರಜೋ ಮತ್ತು ತಮೋಗುಣಗಳ ದೌರ್ಬಲ್ಯಕ್ಕೊಳಗಾದವರಿರುವುದೂ ಸತ್ಯ ನಿಷ್ಠೂರ ಸಂಗತಿಯಾಗಿದೆ. ಇವೆರಡು ವರ್ಗದ ಜನರು ರೋಶಾವೇಶದಿಂದಲೋ, ಕ್ರೋಧದಿಂದಲೋ , ಜೀವನದಲ್ಲಿ ಜಿಗುಪ್ಸೆ ಹತಾಶೆಯಿಂದಲೋ  ಕ್ರುದ್ಧರಾಗಿ ನಿರ್ದಯಿಗಳಾಗಿ ಮಾನವಿಯತೇ ಇಲ್ದೇ ರಕ್ಕಸರಂತೇ ಆಗಿದ್ದು, ಅವರ ಸಂಖ್ಯೆಯೇ ಎಲ್ಲಕಾಲಕ್ಕೂ ಹೆಚ್ಚಿರುವುದು ಕಂಡು ಬರುತ್ತದೆ. ಆದ್ದರಿಂದ, ಸತ್ಯವಂತರಿಗಿದು ಕಾಲವಲ್ಲ… ಎಂದರಷ್ಟೇ ಹರಿದಾಸರು. ಅದನ್ನು ತಪ್ಪಾಗಿ ಅರ್ಥೈಸ ಬಾರದಷ್ಟೇ. ಇನ್ನೊಂದು ಭಾಗ ಸತ್ವಗುಣ ವರ್ಗದ ಜನ ಸಾತ್ವಿಕ ಸಭ್ಯಜೀವನ ನಡೆಸುವವ ರೂ ಹಾಗೂ ಸಂತರೂ ಇರುತ್ತಾರೆ.
ಹಾಗೆ ನೋಡಿದರೆ, ಆಧುನಿಕತೆಯಲ್ಲಿ ಮುಂದುವರೆದಂತೆಲ್ಲಾ  ಜನಸಂಖ್ಯೆಯೂ ಹೆಚ್ಚುತ್ತಲೇ ಇರುತ್ತದೆಯಲ್ಲ!  ಅಷ್ಟೇ ಹೆಚ್ಚು ಹೆಚ್ಚು ಕೆಡುಕಿನ ಸೋಗಿನ ಥಳುಕಿನ ಹುಳುಕಿನ ಪ್ರಪಂಚವಿದೆನಿಸುತ್ತಲೇ ಇರುತ್ತದೆ. ಹೀಗಿರುವಾಗ ಈ ಪ್ರಪಂಚದಲ್ಲಿ ನಾವುಗಳು ಸಾತ್ವಿಕರಾಗಿ ಸತ್ಯವನ್ನು ಬಿಟ್ಟುಕೊಡದೇ ಬದುಕುವುದು ಹೇಗೆ ಎನ್ನುವಿರಾ…?

ಸತ್ಯ ಹರಿಶ್ಚಂದ್ರನ ಕತೆಯನ್ನೇ ತೆಗೆದುಕೊಳ್ಳಿ, ರಾಜ ಸತ್ಯ ಹರಿಶ್ಚಂದ್ರ ಮಹಾ ಧರ್ಮಬೀರು ಮತ್ತು ಸತ್ಯವನ್ನಲ್ಲದೇ ಎಂದೂ ಸುಳ್ಳನ್ನು ಹೇಳಿದವನಲ್ಲ. ಅವನು ಮಾತುಕೊಟ್ಟರೆ ಅದರೆಂತೆಯೇ ನಡೆದುಕೊಳ್ಳುವವನೆಂದೇ ಹೆಸರಾದವನು. ಅವನ ಆಸ್ಥಾನಕ್ಕೆ ವಿಶ್ವಾಮಿತ್ರ ಮಹರ್ಷಿ ಈ ರಾಜಾ ಹರಿಶ್ಚಂದ್ರ ಸತ್ಯಪರಾಯಣನೇ ಎಂಬುದನ್ನು ಪರೀಕ್ಷಿಸಲು ಬರುತ್ತಾನೆ. ಕೇಳಿದ್ದನ್ನು ಕೊಡುವ ಸತ್ಯ ಹರಿಶ್ಚಂದ್ರನಿಗೆ,  ಒಂದು ಬಲು ಎತ್ತರದ ಆನೆಯ ಮೇಲೆ ಆಜಾನು ಬಾಹುವೊಬ್ಬನು ನಿಂತು ಒಂದು ಕವಡೆಯನ್ನು ಎಸೆದರೆ ಅದೆಷ್ಟು ಎತ್ತರಕ್ಕೆ ಹೋಗುವುದೋ ಅಷ್ಟು ಮುತ್ತುರತ್ನ ಗಳು ಮತ್ತು ಹೊನ್ನಿನರಾಶಿಯನ್ನು ದಾನವಾಗಿ ಕೊಡಲು ಕೇಳುತ್ತಾನೆ.  ಅಂದು ರಾಜಹರಿಶ್ಚಂದ್ರನ ರಾಜ್ಯ ಅತ್ಯಂತ ಸುಭಿಕ್ಷವಾಗಿದ್ದುದರಿಂದ ವಿಶ್ವಾಮಿತ್ರ ಕೇಳಿದಂತೆಯೇ ಮುತ್ತು ರತ್ನಗಳ ಜೊತೆಗೆ ಹೊನ್ನಿನ ರಾಶಿಯನ್ನೇ ಎದುರಿಗೆ ಸುರಿಸಿಬಿಡುತ್ತಾನೆ. [ ಉದಾ:ತಿರುವಾಂಕೂರು(ತಿರುವಂಡ್ರಮ್)ನ ಅನಂತ ಶಯನ ಸ್ವಾಮಿಯ ದೇಗುಲದ ನೆಲಮಾಳಿಗೆ ನೆನಪಿಸಿಕೊಳ್ಳಿ ಸಾಕು. ಅಂದರೆ, ಆಗಿನ ಕಾಲಕ್ಕೆ ಇನ್ನೂ ಅಷ್ಟು ಸುಭಿಕ್ಷವಾಗಿತ್ತು ನಮ್ಮ ದೇಶವೆಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ].
ಆದರೇನು! ಹರಿಶ್ಚಂದ್ರನ ಕೊಡುಗೈಗೆ ವಿಶ್ವಮಿತ್ರನೂ ಕೂಡ ಬೆರಗಾಗುತ್ತಾನೆ. ಆದರೂ ಮತ್ತೂ ಪರೀಕ್ಷಿಸದೇ ಬಿಡಬಾರದೆಂದೇ ಇನ್ನೊಂದು ಉಪಾಯ ಹೂಡಿ, “ರಾಜಾ, ಇದನ್ನೆಲ್ಲ ಸಧ್ಯಕ್ಕೆ ನಿನ್ನಲ್ಲೇ ರಕ್ಷಿಸಿಟ್ಟುಕೋ. ನಾನು ಮತ್ತೆ ಬಂದು ಕೇಳಿದಾಗ ಕೊಡುವೆಯಂತೆ” ಎನ್ನುತ್ತಾನೆ.

ಆಗಿನ ಕಾಲವೋ ಮಹರ್ಷಿಗಳ ಕೃಪಾಶೀರ್ವಾದಕ್ಕೆ ಮಹಾರಾಜರುಗಳು ಬಹಳ ಪ್ರಾತಿನಿಧ್ಯ ಕೊಡುತ್ತಿದ್ದ ಕಾಲ. ರಾಜರುಗಳು ತಮ್ಮ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಮಹರ್ಷಿಗಳೊಡನೆ ಸಮಾಲೋಚನೆ ನಡೆಸುತ್ತಿದ್ದರು. ಅವರ ಆಜ್ಞೆ ಯನ್ನು ಶಿರಸಾವಹಿಸುತ್ತಿದ್ದರು. ಮಹರ್ಷಿಗಳ ತಪಃಶಕ್ತಿ ಬ್ರಹ್ಮತೇಜಸ್ಸಿಗೆ ಭಯಭಕ್ತಿಯಿಂದ ತಲೆಬಾಗುತ್ತಿದ್ದರು.  ಆದಕಾರಣ, ಋಷಿ ವಿಶ್ವಾಮಿತ್ರನ ಕೋರಿಕೆಗೆ ರಾಜಾ ಹರಿಶ್ಚಂದ್ರ ಒಪ್ಪಿಕೊಂಡು ಬಿಡುತ್ತಾನೆ. ಆತನ ಮಂತ್ರಿ ಇದು ತರವಲ್ಲ ಮುಂದೆ ಭವಿಷ್ಯದಲ್ಲಿ ಏನಾಗುತ್ತದೋ ಯಾರು ಬಲ್ಲರು? ಕ್ಷಾಮ ಡಾಮರಗಳೋ ಏನೋ… ಎಂದು ಅನುಮಾನ ವ್ಯಕ್ತ ಪಡಿಸುವುದಲ್ಲದೇ ,ಆಡಿದ ಮಾತಿನಂತೆ ಈಗಿಂದೀಗಲೇ ಹೊನ್ನಿನ ರಾಶಿಯನ್ನು  ಕೊಟ್ಟು ಋಣ ತೀರಿಸಿಕೋ ಮಹಾರಾಜಾ ಎಂದೂ ಸೂಚ್ಯವಾಗಿ ಹೇಳುತ್ತಾನೆ. ಸತ್ಯಹರಿಶ್ಚಂದ್ರ ಮಹರ್ಷಿಗಳ ಮಹದಾಜ್ಞೆಯನ್ನು ತಿರಸ್ಕರಿಸಲಾರೆನೆಂದು ಬಿಡುತ್ತಾನೆ.
ಮುಂದಿನ ರಾಜಾಹರಿಶ್ಚಂದ್ರನ ಆತನ ಸಹಧರ್ಮಿಣಿ ಕಣ್ಣೀರ ಕಥೆ ನಿಮಗೆ ಗೊತ್ತೇ ಇದೆಯಲ್ಲ….!
 
ಆ ಕಥೆ ಕೇಳಿದ ನಾವು ಈಗಿನ ಕಾಲಕ್ಕೆ ತಕ್ಕಂತೆ ಸತ್ಯವಂತರಾಗಿದ್ದುಕೊಂಡೇ ಬದಲಾಗುವುದ್ಹೇಗೆ ಎಂದರೆ ಹೇಗೇಂತಿರಾ….?

ಆ ಸಂದರ್ಭದಲ್ಲಿ ಕೂಡಲೇ ರಾಜಾಹರಿಶ್ಚಂದ್ರ ತನ್ನ ಮಂತ್ರಿವರ್ಯರು ಸೂಚಿಸಿದ ಸೂಕ್ತ ಸಲಹೆಯನ್ನೇ  ಪಾಲಿಸಿದ್ದಿದ್ದರೆ ಮುಂದಿನ ಕತೆಯೇ ನಡೆಯುತ್ತಿರಲಿಲ್ಲ ಸುಖವಾಗಿರುತ್ತಿದ್ದ ಅಲ್ಲವೇ..?  ಆದ್ದರಿಂದ, ನಾವುಗಳು ಸತ್ಯಹರಿಶ್ಚಂದ್ರರಾಗುವುದು ಬೇಕಿಲ್ಲ ಆದರೆ ಸತ್ಯವನ್ನು ಬಿಡದೇ ರೂಢಿಸಿಕೊಂಡೇ ಯಾವಾಗಲೂ ಮುಂಜಾಗ್ರತೆಯಿಂದ ಇದ್ದರೆ, ದುಃಖಿಗಳಾಗುವ ಸಂದರ್ಭವೇ ಬರುವುದಿಲ್ಲ. 

ಅಂದರೆ,  ‘ಸಾಲ ತೆಗೆದುಕೊಳ್ಳುವಾಗ ಹಾಲೋಗರುಂಡಂತೆ ಸಾಲಿಗನು ಬಂದದ್ದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ’ ಎಂಬುದನ್ನೂ ಕೇಳಿರುತ್ತೀರಿ.ಸಾಲವನ್ನು ತೆಗೆದುಕೊಳ್ಳಲೂ ಬಾರದು. ಕೊಡಲೂ ಬಾರದು. ಸಾಲವನ್ನೂ ಮತ್ತ್ಯಾವುದೋ ಋಣವನ್ನು ಮೊದಲುಕೊಟ್ಮ ಮಾತಿತಿನಂತೇ ಉಳಿಸಿಕೊಂಡು ಅದನ್ನು ಸಕಾಲದಲ್ಲಿ ತೀರಿಸಿಬಿಡುವುದೇ ಲೇಸು.  ಆಸ್ತಿ ಹಕ್ಕು ಮತ್ತಿತರೆ ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಕರಾರುಗಳಿಗೆ ಸಹಿಹಾಕುವುದೆಂದರೆ,  ಸಾಲಕ್ಕೋ ಮತ್ಯಾಯಾವುದಕ್ಕೋ ಸ್ನೇಹಿತರಿಗೆ ಜಾಮೀನು ಆಗುವುದೆಂದರೆ ಸುಧೀರ್ಘವಾಗಿ (ನಿಮ್ಮ ಲೈಫ್ ಸೆಕ್ಯೂರಿಟಿಯ ಬಗ್ಗೆ) ಮುಂದಾಲೋಚಿಸಿಯೆ ಬುದ್ಧಿವಂತಿಕೆಯಿಂದ ಮುಂದುವರೆದರೆ ನೀವು ಸತ್ಯವನ್ನು ಬಿಡದೇ ಪಾಲಿಸಿದಂತೆಯೇ… ಅಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿಯೂ “ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್” ಎಂಬಂತೆ ಸತ್ಯ ಅಪ್ರಿಯವೇ ಆದರೂ ನಿಮ್ಮ ಬದುಕಿನ ಭದ್ರತೆಗಾಗಿ ಅದಕ್ಕೆ ನೀವು ಒಪ್ಪುವುದಿಲ್ಲವೆಂಬುದನ್ನು ನಯವಾಗಿ ಹಾಗೂ ಪ್ರಿಯವಾಗುವಂತೆ ಹೇಳಿ ನೀವು ನಿಮ್ಮ ಕ್ಷೇಮ ನೋಡಿಕೊಂಡು ಉಳಿದುಕೊಳ್ಳುವುದಷ್ಟೇ ಅಲ್ಲವೇ..?

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s