ನೀವೂ ಟ್ವಿಟ್ಟರ್ ಖಾತೆ ತೆರೆಯಿರಿ…


ಕೇಳ್ರಪ್ಪೋ ಕೇಳ್ರಿ “ನೀವೂ ಟ್ವಿಟ್ಟರ್ ಖಾತೆ ತೆರೆಯಿರಿ. ಯಾಕೆಂದು ಕೇಳುವ ಸಮಯ ಇದಲ್ಲ” ಎಂದು ಕ.ಪ್ರ.ಸಂ. ಮಾನ್ಯ ವಿಶ್ವೇಶ್ವರ.ಭಟ್ರು ಒಂದು ಪುಟದ ದೊಡ್ಡ ಅಂಕಣವನ್ನೇ ಬರೆದಿದ್ದಾರೆ. ಭಟ್ರು ಕೊಟ್ಟಿರುವ ಉದಾಹರಣಗಳಲ್ಲಿ ಕೆಲವು ಹೀಗಿವೆ-  ಉತ್ತರ ಪ್ರದೇಶದ ಪಿಯುಸಿ ಓದೋ ಹುಡುಗಿಯೊಬ್ಬಳು ಕಾಲುಮುರಿದುಕೊಂಡಳು. ಹೊರಗೆ ದಡಿಯುತ್ತಲೇ ತನ್ನ ಓದೂ ಮುಂದುವರೆಸಿ ಮನೆಗೆ ಆಧಾರವಾಗಿದ್ದ ಆ ಹುಡುಗಿ ತನ್ನ ದಯನೀಯ ಪರಿಸ್ಥಿತಿ ಹೇಳಿಕೊಂಡು ಪ್ರಧಾನಿಗೆ ಟ್ವೀಟ್ ಮಾಡುತ್ತಲಿದ್ದವಳು, ಕಡೆಗೂ ಪ್ರಧಾನಿಯವರ ಪರಿಹಾರ ನಿಧಿಯಿಂದ ಸಹಾಯ ಪಡೆದಳು. ಪುಟ್ಟ ಬಾಲೆಯೊಬ್ಬಳು ಕಿಟಕಿಯಲ್ಲಿ ಮೊಬೈಲ್ ಇಟ್ಟು ಹೊರಗಿನ ವಿದ್ಯಮಾನಗಳ ಫೋಟೋ ತೆಗೆದು ಟ್ಟೀಟ್ ಮಾಡಿ ಟಿ.ವಿ. ಮಾಧ್ಯಮಗಳಿಂದ ಹೊರ ಜಗತ್ತಿನ ಗಮನಸೆಳೆದು ಸುದ್ದಿಯಾದಳೆಂದಳೆನ್ನುತ್ತಾರೆ. ಮೊನ್ನೆ ಕಾಶ್ಮೀರದಲ್ಲಿ ಪ್ರವಾಹ ಬಂತಲ್ಲ. ಆ ಸಂದರ್ಭದಲ್ಲಿ ಸುಮಾರು ಹತ್ತು ಲಕ್ಷ ಟ್ವೀಟ್ ಸಂದೇಶಗಳು ಹರಿದಾಡಿದವಂತೆ! ಪ್ರವಾದಲ್ಲಿ ಸಿಕ್ಕಿಕೊಂಡಿದ್ದ ಒಬ್ಬಾತ ಮಾಡಿದ ಟ್ಟೀಟ್ ನಿಂದಾಗಿ ಅವನೊಂದಿಗೆ ಎಷ್ಟೋ ಜನರ ಪಾಲಿಗೆ ಜೀವದಾನವಾಯಿತೆನ್ನುತ್ತಾರೆ.

ಟ್ವಿಟ್ಟರ್ ಬಳಸಿಕೊಳ್ಳುವುದೂ ಒಂದು ಬುದ್ಧಿವಂತಿಕೆರೀ.. ಸಲೆಬ್ರೆಟಿಗಳು, ಸಿನಿಮಾ ನಟರು, ಕೆಲವು ರಾಜಕಾರಣಿಗಳು ಸಚಿವರು ಟ್ವೇಟ್ ಮಾಡಿದ್ರೆ ಫಾಲೋಯರ್ಸ್ ಹುಟ್ಟುಕೊಳ್ಳುವುದರಲ್ಲಿ ಏನೂ ಆಶ್ಚರ್ಯವಿಲ್ಲ ಬಿಡಿ! ಅದೇ ಕ.ಪ್ರ. ಕಳೆದ ಸಂಚಿಕೆಯೊಂದರಲ್ಲಿ ಮುಖಪುಟದ ಸುದ್ದಿಯೊಂದಿತ್ತು- “ನಮ್ಮದು ಹೈಟೆಕ್ ರಾಜ್ಯ ಲೋಟೆಕ್ ರಾಜಕಾರಣಿಗಳು!” ಅಂದರೆ, ನಮ್ಮ ಮಾನ್ಯ ಸಚಿವರಲ್ಲಿ ಬಹಳಷ್ಟು ಮಂದಿಗೆ ಇ-ಮೇಲ್ ಬಳಸುವುದೇ ಗೊತ್ತಿಲ್ಲವಂತೆ!. ಎಸ್.ಎಮ್.ಎಸ್ ನೋಡಿ ರಿಪ್ಲೇ ಮಾಡಿದರೇನೆ ದೊಡ್ಡ ಸಂಗತಿ! ಅಂತಾರೆ. ಇತ್ತೀಚೆಗೆ ನಮ್ಮ ಕೆಲವು ಸಚಿವರು ಹಾಗೂ ಮಾನ್ಯ ಮು.ಮಂ. ಸಿದ್ಧರಾಯಮಯ್ಯನೋರು ಟ್ವಿಟ್ಟರ್ ಖಾತೆ ತೆರೆದಿದ್ದಾರೆಂದು ಎಲ್ಲೋ ಓದಿದ ನೆನಪು! ಅದನ್ನ ಅವರ ಸಕೆಟ್ರಿಗಳು ಮೇಂಟೇನ್ ಮಾಡಿ ಏನು ಟ್ವೀಟ್ ಸಂದೇಶಗಳು ಬರುತ್ತಿವೆ ಎಂಬುದನ್ನು ಅವರುಗಳ ಗಮನಕ್ಕೆ ತಂದರದಷ್ಟೇ ಪುಣ್ಯ ಅಲ್ವೇನ್ರಿ! ಏನೇ ಆಗಲಿ, ನಮ್ಮ ಜನಪ್ರಿಯ ಪ್ರಧಾನಿಯವರು ಟ್ವಿಟ್ಟರ್ ಮತ್ತು ಅವರ ನಮೋ ಸುದ್ದಿಯಿಂದ ಇಂಟರ್ ನೆಟ್ ಬಳಸಿಕೊಂಡು ಜನರನ್ನು ತಲುಪುವುದು ಅವರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹೇಗೆಂಬುದನ್ನು ತೋರಿಸಿಕೊಟ್ಟು ದೇಶಕ್ಕೇ ಮಾದರಿಯಾಗಿದ್ದಾರೆ.

ಹೌದುರೀ, ಎಲ್ರೂ ಟ್ವಿಟ್ಟರ್ ಖಾತೆ ತೆರೆಯಬೇಕೂರಿ. ಆದರೆ, ಟ್ವೀಟ್ ಮಾಡೋದಕ್ಕೆ ಸಮಯ ಪ್ರಜ್ಞೆ ಬೇಕಲ್ಲ! ಯಾಕೇಂತಿರಾ.. ಅದೂ ಒಂದು ಆರ್ಟ್ ಹಾಗೂ ಕ್ರಾಫ್ಟ್ ಕಣ್ರಿ.  ನನ್ನನ್ನೇ ತೆಗೆದುಕೊಳ್ರಿ ಟ್ಟಿಟ್ಟರ್ ಖಾತೆ ತೆರೆದು ಸುಮಾರು ೧೦-೧೨ ವರುಷವಾಯ್ತು.  ನನಗೆ ಹನ್ನೆರಡು ಜನರಷ್ಟೇ ಫಾಲೋಯರ್ಸ! ಅದನ್ನು ಬಳಸಿಕೊಳ್ಳುವುದನ್ನೇ ಕಲಿತಿಲ್ಲವೋ ಅಥವಾ ನನ್ನ ಬರಹಗಳು ಇರುವುದೇ ಹಾಗೋ ಏನೋ..ಆದರೂ ಯಾರೇ ಓದಲಿ ಬಿಡಲಿ, ನನ್ನ ಮನಸ್ಸಿಗೆ ತೋಚಿದ್ದನ್ನ ಹೀಗೇ ಗೀಚತ್ತಾ ಇರ್ತೀನಿ. ಇಲ್ಲಿ ಇನ್ನೊಂದು ವಿಷಯ ನಮಗೆ ಮುಕ್ತ ಸ್ವಾತಂತ್ರ್ಯವಿರುತ್ತೇರೀ. ನೀವು ಮಾನ್ಯ ಸಂಪಾದಕರಿಗೆ ಪತ್ರ ಬರೆದರೆ ಕ.ಬು.ಗೆ ಹಾಕಬಹುದು. ಇ-ಮೇಲ್ ಮಾಡಿದ್ರೆ ಜಂಕ್ ಅಥವಾ ತ್ರ್ಯಾಷ್ ಗೆ ಎಸೆಯೋದೋ ಇಲ್ಲವೇ ಡಿಲೀಟ್ ಮಾಡಿಯೇ ಬಿಡ್ಬಹುದೂರಿ. ಟ್ವಿಟ್ಟರ್ ನಲ್ಲಿ ನೀವು ಏನು ಬರೆದರೂ ನಡೆಯುತ್ತೇನ್ನಿ.  ಹಾಗಂತ ಮಿತಿ ಮೀರಿ ಹೋದ್ರೇ…. ಕಾನೂನು ಎಂಬ ಕತ್ತೆ ಇದೆಯಲ್ಲ! ಅದರ ಮೂಗುದಾರ ಹಾಕಿ ಮುಂದಿನೋರು/ಮೇಲ್ ನೋರು ಎಳೆದರೆ, ನೀವು ಅದರ ಹಿಂದಾಗಡೆ ನಿಂತ್ಕೊಂಡ್ ಎಳೀಬೇಕಾಗುತ್ತೇರಿ ಅಯ್ಯೋ ಜೋಕೆ !!

Advertisements

2 thoughts on “ನೀವೂ ಟ್ವಿಟ್ಟರ್ ಖಾತೆ ತೆರೆಯಿರಿ…”

  1. ಟ್ವಿಟ್ಟರ್ ಬಂದು ೧೦ ವರ್ಷ ಆಗಿಲ್ಲ. ಆಗಲೇ ನೀವು ಖಾತೆ ತೆಗೆದು ೧೦-೧೨ ವರ್ಷ ಆಯ್ತು ಅಂತಿದ್ದೀರಲ್ಲ. ಅದು ೧-೨ ಆಗಬೇಕಿತ್ತೆ?

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s