ಕಂಪ್ಯೂಟರ‍್ ಕಲಿಕೆಯಲ್ಲಿ…


WinComputers 2014  For netಶತ ಶತಮಾನಗಳಿಂದ ಮನುಷ್ಯ ಪ್ರಕೃತಿ ಪರಿಸರದಿಂದ ಪ್ರೇರಣೆ ಪಡೆಯುತ್ತಾ ಸತತ ವೈಜ್ಞಾನಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ದಿನ ದಿನಕ್ಕೂ ವಿಜ್ಞಾನ ಬೆಳಕಿನೊಡನೆ ಸ್ಪರ್ಧಿಸುತ್ತಾ, ಅಣುವಿನಿಂದ ಮಹತ್ತಾಗುತ್ತಲೆ ಸಾಗಿದೆ. ತಿರುಗುವ ಚಕ್ರಗಳಾಚೆಗೂ ಮಿಗಿಲಾಗಿ ಹೊಸ ಹೊಸ ಆವಿಷ್ಕಾರಗಳತ್ತ ವೇಗವಾಗಿ ಮುನ್ನಡೆದಿದೆ. ಹಾಗೆ ನೋಡಿದರೆ ಕಂಪ್ಯೂಟರ್ ಕೂಡ ಮನುಷ್ಯನಿಗೆ, ಅವನ ಮಿದುಳಿಗೆ ಪರ್ಯಾಯವಾಗಿ ಹೋಲಿಸಿ ತಯಾರಾದ ಒಂದು ಅದ್ಭುತ ಉಪಕರಣವೇ ಆಗಿದೆ. ಆದರೂ ಮನುಷ್ಯನ ಮಿದುಳಿನ ಸಂಪೂರ್ಣ ರಹಸ್ಯ ವಿಜ್ಞಾನಿಗಳಿಗೆ ತಿಳಿದೇ ಇಲ್ಲವೆನ್ನುತ್ತಾರೆ…ಅಲ್ಲವೇ?

ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜನಜೀವನದ ಪರಿಕಲ್ಪನೆಯನ್ನೇ ಬದಲಿಸಿದೆ; ನಿತ್ಯ ಬದುಕಿನ ವಿಧಾನವೇ ಅದಾಗಿದೆ. ಒಂದು ಕಾಲಕ್ಕೆ ಉನ್ನತ ಶಿಕ್ಷಣ ಪಡೆದವರಿಗೆ ಹಾಗೂ ಅತ್ಯುನ್ನತ ವೈಜ್ಞಾನಿಕ ಕೇಂದ್ರ ಗಳಿಗೆ ಮಾತ್ರ ಮೀಸಲಾಗಿದ್ದ ಕಂಪ್ಯೂಟ ರ್, ಇದೀಗ ಪ್ರಾಥಮಿಕ ಶಾಲೆಗಳಿಗೆ ಕಾಲೇಜುವ ವಿದ್ಯಾರ್ಥಿಗಳಿಗೆ, ವ್ಯವಹಾರಸ್ಥರಿಗೆ, ಉದ್ಯೋಗಗಳಿಗೆ ಹಾಗೂ ಕಾರ್ಮಿಕ ವರ್ಗದವರಿಗೂ ಸಹ ಅತ್ಯಗತ್ಯವಾಗಿ ಬಳಸುವ ಸಾಧನವಾಗಿದೆ. ವೇಗವಾಗಿ ಮುಂದುವ ರೆದ ನಾಗರೀಕ ಸಮಾಜದ ಅವಿಭಾಜ್ಯ ಅಂಶವೇ ಅದಾಗಿದೆ. ಇಂದಿನ ದೈನಂದಿನ ವಿದ್ಯಮಾನ-ವ್ಯವಹಾರ ಮತ್ತು ಔದ್ಯೋಗಿಕ ಕೆಲಸ ಕಾರ್ಯಗಳಲ್ಲಿ ದುಡಿಮೆಗೆ, ಕಂಪ್ಯೂಟರ್ ಕಲಿಕೆಯು ಪ್ರತಿಯೊಬ್ಬ ರಿಗೂ ಅನಿವಾರ್ಯವೆನಿಸಿದೆ.

1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟ ರ್, ಇಂದಿಗೆ ಎ.ಟಿ.ಎಮ್. ಮೂಲಕ ಹಣ ಕೊಡುವಂಥ ಹೆಮ್ಮ ರವಾಗಿ ನಿಂತಿದೆ. ನಮ್ಮಅಂಗೈಯಲ್ಲಿರುವಮೊಬೈಲ್-ಸೆಲ್ ಫೋನ್ ಸಹ ಪುಟ್ಟ ಕಂಪ್ಯೂಟರ್ ನಂತೇ ಬಳಕೆ ಬಂದಿದೆ. ನಾವು ವಿದ್ಯಾವಂತರಾಗಿಕಂಪ್ಯೂಟರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೂ ಆದ್ಯ ಕರ್ತವ್ಯವೇ ಆಗಿರುತ್ತದೆ.

ಕಂಪ್ಯೂಟ ರ್ ಇತಿಹಾಸ-
ಕಂಪ್ಯೂಟ ರ್ ಗೂ ಕೂಡ ಮನುಷ್ಯನಂತೆಯೇ ಎರಡು ಸ್ಮೃತಿಗಳಿವೆ-

1.ಶಾಶ್ವತ ಸ್ಮೃತಿ –(Read only Memory)
ಇದು ಕಂಪ್ಯೂಟರ್ ನ ಅದಾನ ಪ್ರದಾನ ವ್ಯವಸ್ಥೆಯಲ್ಲಿ (Basic Input Output System) ಅಡಕವಾಗಿರುತ್ತದೆ.
2. ತಾತ್ಕಾಲಿಕ ಸ್ಮೃತಿ –(Random Access Memory)
ನೀವು ಗಮನಿಸಿ, ನೀವು ಬೆಳಿಗ್ಗೆ ಹಾಸಿಗೆಯಿಂದ ಎದ್ದನಂತರ ರಾತ್ರಿ(ಪುನಃ ನಿದ್ರಿಸುವವರೆಗೆ) ನೋಡುವುದೇನೆಲ್ಲವೂ ನಿಮ್ಮ ತಾತ್ಕಾಲಿಕ ಮೆಮೊರಿಯಲ್ಲಿರುತ್ತದೆ. ನೀವು ಇಚ್ಛಿಸಿದರೆ ಮಾತ್ರ ನೋಡಿದುದನ್ನು ನಿಮ್ಮ ಸ್ಮೃತಿಯಲ್ಲಿ ಶಾಶ್ವತ ಸಂಗ್ರಹಿಸಲಿಕ್ಕಾಗಿ ಉಳಿಸಿಕೊಳ್ಳುತ್ತೀರಿ/ಸೇವ್ ಮಾಡಿಕೊಳ್ಳುತ್ತೀರಿ.
3.ಚಿಕ್ಕ ಮಗುವಿಗೆ ಹುಟ್ಟಿದ ಆನಂತರದ ದಿನಗಳಲ್ಲೇ ಸ್ವೀಕರಿಸುವ ಮತ್ತು ಪ್ರತಿಕ್ರಿಯಿಸುವಂತ(ನೋಡಿ ಗುರುತಿಸುವ, ನಗುವ/ಅಳುವ) ವ್ಯವಸ್ಥಿತವಾದ ಪ್ರಾಥಮಿಕ ಅರಿವು ತಾನೆ ಮೂಡಿ ಬಂದರೆ ಮಾತ್ರ, ಈ ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗಿರಬೇಕೆಂಬುದು ಮತ್ತು ನಾವು ನೀಡುವ ಸೂಚನೆ ಆದೇಶಗಳೆಲ್ಲವನ್ನೂ ಅದು ಗ್ರಹಿಸುತ್ತಲೆ ಬೆಳೆಯಲು ಸಾಧ್ಯವಾಗುತ್ತದೆ.(ಮಾನವ ಸಹಜ ಅನುಕರಣೆ ಹೊರತಾಗಿ). ಅಂತಹ ಅದಾನ ಪ್ರದಾನ ವ್ಯವಸ್ಥೆಯು (Basic Input Output System) ಚಿಕ್ಕಮಗುವಿಗೆ ಆರಂಭಿಕವಾಗಿ ಕ್ರಿಯಾಶೀಲವಾಗದಿದ್ದರೆ ಡಾಕ್ಟರೂಗಳೂ ನಿಸ್ಸಹಾಯಕರೇ ಆಗಿಬಿಡುತ್ತಾರೆ.
4. ಕಂಪ್ಯೂಟ ರ್ ನ ಬೈನರಿ ಭಾಷೆ 0- 1 ಹೀಗೆ ದ್ವಿಮಾನ ಪದ್ಧತಿಯ ಸಂಖ್ಯಾ ರೂಪಕಗಳು, ಸಂಜ್ಞೆಗಳಿಂದಾಗಿದೆ.
5 .ಕಂಪ್ಯೂಟರ್ ನ ಬಿಡಿಭಾಗಗಳೆ ಹಾರ್ಡ್ ವೇರ್ ,
ಅದರ ತಂತ್ರಾಂಶಗಳು- ಸಾಫ್ಟ್ ವೇರ್

6. ಪ್ರದಾನ ನಿಯಂತ್ರಣ ತಂತ್ರಾಂಶವೆಂದರೆ- ಆಪರೇಟಿಂಗ್ ಸಿಸ್ಟಂ-(Master Control Program) ಸಾಮಾನ್ಯವಾಗಿ ಬಹುತೇಕ ಬಳಕೆದಾರರಂತೇ ನೀವು ಬಳಸುವ ವಿಂಡೋಸ್ XP/ ವಿಂಡೋಸ್ 7…. ಈ ಓ.ಎಸ್ ನ್ನೇ ಅವಲಂಬಿಸಿ ಕ್ರಿಯೆಯಲ್ಲಿ ತೊಡಗುವ ಇತರೆ ಎಂ.ಎಸ್. ವರ್ಡ್, ಫೋಟೋಷಾಪ್, ಪೇಜ್ ಮೇಕರ್, ಕೊರೆಲ್ ಡ್ರಾ ಮುಂತಾದ ತಂತ್ರಾಂಶಗಳೆಲ್ಲವೂ ಅಪ್ಲಿಕೇಷನ್ ಸಾಫ್ಟ್ ವೇರ್ ಅಥವಾ ಅಪ್ಲಿಕೇಷನ್ಸ್ ಪ್ರೋಗ್ರಾಂಸ್.

ಎಷ್ಟೇ ಆಗಲಿ, ಮನುಷ್ಯನ ಸ್ವಂತಿಕೆ, ಆಲೋಚನೆ, ಬುದ್ಧಿವಂತಿಕೆ, ಸೃಜನಾತ್ಮಕ ಶಕ್ತಿ, ಸೂಕ್ಷ್ಮ ಪ್ರಜ್ಷೆ, ಪ್ರತಿಕ್ರಿಯಾಶೀಲತೆ ಮುಂತಾದ ಸಾಮರ್ಥ್ಯಕ್ಕೆ ಕಂಪ್ಯೂಟರ್ ಸರಿ ಸಾಟಿಯಾಗಲಾರದು. ಆದರೇನು! ವಿಜ್ಞಾನಿಗಳು, ತಂತ್ರಜ್ಞರು ಕಂಪ್ಯೂ ಟ ರಗೆ ಕೃತಕ ಆಲೋಚನೆ ಮತ್ತು ಬುದ್ಧಿವಂತಿಕೆಯನ್ನು ಅಳವಡಿಸುವತ್ತ ಸಾಗಿದ್ದಾರೆ.

ಮನುಷ್ಯನ ಆಪರೇಟಿಂಗ್ ಸಿಸ್ಟಂ ಯಾವುದು ಗೊತ್ತೇ…?
ಮನುಷ್ಯ ತನ್ನ ದೈಹಿಕ ನಿಯಂತ್ರಣದೊಂದಿಗೇ, ಈ ಸಮಾಜದಲ್ಲಿ ತಾನು ನೈಸ್ ಜಂಟಲ್ ಮೆನ್ / ನೈಸ್ ವಿಮೆನ್ ಆಗಿ ವರ್ತಿಸುವುದನ್ನೇ ಓ.ಎಸ್. ಎನ್ನಬಹುದಾಗಿದೆಯಲ್ಲವೇ…?
ಅವನು ಬೆಳೆದಂತೆ(ಅನುಕರಣೆ, ಆಲೋಚನೆಯ ಹೊರತಾಗಿ) ಕಲಿತದ್ದು ವಿದ್ಯೆ ಹಾಗೂ ಅಳವಡಿಸಿಕೊಂಡ ಉದ್ಯೋಗ ಇವುಗಳೆಲ್ಲವೂ ಅಪ್ಲಿಕೇಷನ್ ಪ್ರೋಗ್ರಾಂಸ್ ಆದೀತಲ್ಲವೇ…
ಮನುಷ್ಯನ ದೇಹಿಕ ಅಂಗಾಂಗಗಳೇ ಹಾರ್ಡ್ ವೇರ್, ಅವನು ಬುದ್ಧಿವಂತಿಕೆಯಿಂದ ಅಳವಡಿಸಿಕೊಂಡ ದ್ದೆಲ್ಲವೂ ಸಾಫ್ಟ್ ವೇರ್ ಅಲ್ಲವೇ…

ನೀವು ತಿಳಿದಿರುವಿರಾ…
* ಕಂಪ್ಯೂಟರ್ ಗೂ ಸ್ವೀಕರಿಸುವ ಮತ್ತು ಪ್ರತಿಕ್ರಿಸುವ ಹಾಗೆ ಒಂದು ಭಾಷೆ ಇದೆ. ಅದನ್ನೇ “ಬೈನ ರಿ ಭಾಷೆ” ಎನ್ನುತ್ತಾರೆ.
* ನೀವು ಕಂಪ್ಯೂಟರ್ ತೆರೆಯಲ್ಲಿ ನೋಡುವುದೆಲ್ಲವೂ ತಾತ್ಕಾಲಿಕ ಮೆಮೊರಿಯಲ್ಲಿರುತ್ತದೆ.
* ಕಂಪ್ಯೂಟರ್ ಹ್ಯಾಂಗ್ ಆದ ರೆ(ಸ್ತಗಿತಗೊಂಡರೆ) ರಿಸ್ಟಾರ್ಟ್ ಮಾಡುವುದರಿಂದಲೇ ಬಹುತೇಕ ಸಂದರ್ಭಗಳಲ್ಲಿ ಸರಿಹೋಗುತ್ತದೆ.
* ಕಂಪ್ಯೂಟ ರ್ ಶಿಕ್ಷಣ ಆರಂಭವಾಗುವುದೇ ಪರ್ಸನಲ್ ಕಂಪ್ಯೂಟರ್ ನಲ್ಲಿ..
* ಲ್ಯಾಪ್ ಟಾಪ್ ಎಂದರೆ ಒಂದು ದೊಡ್ಡ ಮೊಬೈಲ್ ಕಂಪ್ಯೂಟರ್ ಇದ್ದಂತೆಯೇ ಮರೆಯದಿರಿ.
* ಮನೆಗೊಂದು ಕಂಪ್ಯೂಟ ರ್ ಎಂದ ರೆ ಡೆಸ್ಕ್ ಟಾಪ್ ಕಂಪ್ಯೂಟ ರ್, ಲ್ಯಾಪ್ ಟಾಪ್ ಅಗತ್ಯವೆನಿಸಿದರೆ ಆನಂತರದ ಆಯ್ಕೆ..
ನಾನು ಕಂಪ್ಯೂಟರ್ ಶಿಕ್ಷಕನಾದದ್ದು…

ನಾನು ಕನ್ನಡ ಲೇಖಕನಾಗಿ ಒಂದು ರವಷ್ಟು ಹೆಸರು ಮಾಡುತ್ತಿದ್ದಂತೆಯೆ ಪತ್ರಿಕೆಗಳಿಗೆ ಕಳುಹಿಸುವುದಕ್ಕಾಗಿ ನನ್ನ ಹಸ್ತ ಪ್ರತಿ ತಯಾರಿಸಲು 1998 ರಲ್ಲಿ ಮನೆಗೆ ಕಂಪ್ಯೂಟರ್ ತಂದೆ. ಇಲಾಖೆಯಲ್ಲಿದ್ದಾಗ ಅದಕ್ಕೆ ಸಂಬಂಧ ಪಟ್ಟಂತೆ ಕಂಪ್ಯೂಟರ್ ಟ್ರೈನಿಂಗ್ ಪಡೆದಿದ್ದೆ. ಆದರೆ, ಅಲ್ಲಿ ಕನ್ನಡ ಎಂಬುದಿರಲಿಲ್ಲ; ಅಷ್ಟಕ್ಕೂ, ಆಗ ಕಂಪ್ಯೂಟರ್ ನಲ್ಲಿ ಕನ್ನಡ ಇನ್ನೂ ಬೆಳವಣಿಗೆ ಕಂಡಿರಲಿಲ್ಲ. ನನ್ನ ಮಕ್ಕಳಿಗೆ ಮನೆಯಲ್ಲಿ ನಾನು ಕಂಪ್ಯೂಟರ್ ಪಾಠ ಹೇಳಿಕೊಟ್ಟು ತಯಾರು ಮಾಡಿದ್ದನ್ನು ಕಂಡ ನನ್ನ ಸ್ನೇಹಿತರು, ನನ್ನನ್ನು ಅವರ ಮಕ್ಕಳಿಗೂ ಮನೆ ಪಾಠ ಹೇಳಿಕೊಡಲು ಒತ್ತಾಯಿಸಿದರು. ಸರಿ, ಒತ್ತಾಯಕ್ಕೆ ಕಟ್ಟು ಬಿದ್ದು ವಾರಕ್ಕೆ ಮೊರು ದಿನ ಮಾತ್ರ ಪಾಠ ಎಂದು ಹೇಳಿ ಆರಂಭಿಸಿದೆ. ಹೀಗೆ ಅನಿರೀಕ್ಷಿತವಾಗಿಯೆ ಕಂಪ್ಯೂಟರ್ ಶಿಕ್ಷಕನಾದೆ. ಮುಂದೆ ಓದಿ…>>>

ಇವು ಮೂರು ನನ್ನ ಕನ್ನಡ ಕಂಪ್ಯೂಟರ್ ಪುಸ್ತಕಗಳು-
ಸಿ.ಡಿ. ಇಲ್ಲದೇನೆ ಯಾರೆಲ್ಲರೂ ಕಲಿಯಲು ಅತ್ಯಂತ ವಿಶ್ವಾಸರ್ಹವೆನಿಸಿವೆ….
1. ವಿನ್ ಕಂಪ್ಯೂಟರ್ಸ-ಕನ್ನಡ ಕಂಪ್ಯೂಟರ‍್ ಕಲಿಕೆ ಕೈಪಿಡಿ (Software Made Simple)
10 ನೇ ಆವೃತಿ ೨೦೧೪ ಇದೀಗ ಬಂದಿದೆ

ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣ-ಪಾಠಗಳ ನನ್ನ ಇನ್ನಷ್ಟು ಧ್ವನಿವಾಹಿನಿಯೊಂದಿಗೆ ಕೇಳಿ-
ಈ ಬಗ್ಗೆ ಅಪ್ ಡೇಟ್ ಮಾಡಲಾಗಿದೆ

ವಿನ್ ಕಂಪ್ಯೂಟರ್ಸ…ಇಲ್ಲಿ ನೋಡಿ >>>>

WinComputers 2014 For net

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s