ಸುಖ-ದುಃಖ ಒಂದರ ಬೆನ್ನ ಹಿಂದೆ…


ಸುಖ-ದುಃಖ ಒಂದರ ಬೆನ್ನ ಹಿಂದೆ ಮತ್ತೊಂದು. ಮನುಷ್ಯನಿಗೆ ಜೀವನ ಸಹ್ಯವೆನಿಸುವುದು ಸಖದಿಂದಲೋ ಅಥವಾ ಮನಸ್ಸಿನ ಸಮಾಧಾನದಿಂದಲೋ ಎಂಬುದು ಜೀವಮಾನದುದ್ದಕ್ಕೂ ಕಾಡುವುದೇ ಯಾಕೆಂದರೆ, ಈಗಿನ ಕಾಲದಲ್ಲಿ ಮನಸ್ಸಿನ ಸಮಾಧಾನವೆಂಬುದು ಅರ್ಥ ಮತ್ತು ಕಾಮ ಇವೆರಡರ ನಡುವೆಯಲ್ಲೊ ಇರುವಂತೆ ತೋರುತ್ತದೆ. ಧರ್ಮ ಮತ್ತು ಮೋಕ್ಷ ಮಾರ್ಗಗಳಲ್ಲಿ ಅದು ಇರುವುದು ನಿಜವೆಂದು ತಿಳಿದರೂ ಅವುಗಳು ದೈಹಿಕ ಸುಖವನ್ನು ತರಲಾರವು ಎಂಬ ಭಾವನೆಯೆ ಕಾಡುತ್ತದೆ. ಈ ಲೋಕದಲ್ಲಿ ಧರ್ಮ ಬುದ್ಧಿಯುಳ್ಳವರಿಗೆ ಜೀವನ ಸುಖ ಕ್ಷುಲ್ಲಕ-ಕ್ಷಣಿಕವೆನಿಸುತ್ತದೆ. ಅಡಿಗಡಿಗೂ ಅದರ ಬೆಂಬತ್ತಿದಷ್ಟು ಜೀವನ ತಲ್ಲಣಗಳು ನೋವಿಗೆಡೆಮಾಡುತ್ತವೆ;ಸುಖ ಮರೀಚಿಕೆಯಾಗುತ್ತದೆ. ಅಂಥವರಿಗೆ ಮತ್ತದೇ ತಾತ್ವಿಕತೆ; ಸಮಾಧಾನವಷ್ಟೇ. ಆದರೆ, ಹೇರಳ ಹಣ ಮತ್ತು ಸುಂದರ ಹೆಣ್ಣು ಜತೆಯಲ್ಲಿದ್ದರೂ ಸಹ ಸುಖವೆಲ್ಲೋ ಕಳೆದುಹೋಗುವ ಅಥವಾ ಇಲ್ಲವಾಗುವ ಸಂದರ್ಭಗಳೂ ಇರುತ್ತವೆಯಲ್ಲ! ಹಾಗಾದರೆ, ಸುಖ ಇರುವುದಾದರೂ ಎಲ್ಲಿ? ದುಃಖ ಧುತ್ತನೆ ಆವರಿಸಿಕೊಳ್ಳುವುದಾದರೂ ಎಲ್ಲಿಂದ?  ಎಲ್ಲದಕ್ಕೂ ನಿರ್ಲಿಪ್ತರಾಗಿರುವುದನ್ನು ಕಲಿಯುವುದೆಂದರೆ ಯಾವುದಕ್ಕೆ ಮೊರೆಹೋಗಬೇಕು…? ಉತ್ತರ ನಮ್ಮೊಳಗೇ ಇದೆಯಲ್ಲವೇ…?

ಬಡತನ-ಶ್ರೀಮಂತಿಕೆ

ಈ ಲೋಕದಲ್ಲಿ ಬಡವರಿಗೆ ಬದುಕು ಒಂದು ಶಾಪ. ಶ್ರೀಮಂತರಿಗೆ ಅದು ವರದಾನ ಎಂಬ ಮಾತನ್ನು ಅಲ್ಲಗೆಳೆಯುವುದೇನೂ ಸುಲಭವಲ್ಲ. ಶ್ರೀಮಂತಿಕೆ ಪೂರ್ವಜನ್ಮದ ಪುಣ್ಯವೆನಿಸಿದರೆ ಬಡತನ ಹಿಂದಿನ ಜನ್ಮದ  ಪಾಪವೆನಿಸಿವುದೂ ಇದೆ. ಹಾಗಾದರೆಮ ಪುಣ್ಯವಂತರಾಗಿ ಜನಿಸಿ ಬಂದ ಹಣವಂತರಲ್ಲಿಯೆ ಹೆಚ್ಚು ಪಾಪಕೃತ್ಯಗಳೇಕೆ? ದೌರ್ಜನ್ಯ ದಬ್ಬಾಳಿಕೆಗಳೇಕೆ? ಅಷ್ಟಕ್ಕೂ ಪೂರ್ವಜನ್ಮದ ಕಲ್ಪನೆಯೊಂದಿದೆ ಎಂಬುದನ್ನು ತಿರಸ್ಕರಿಸುವವರೇ ಹೆಚ್ಚುತ್ತಿದ್ದಾರೆ. ಕಡುಬಡವನಾಗಿ ಮೋಸ ವಂಚನೆಗೊಳಗಾದವನು ಕ್ರುದ್ಧನಾಗುತ್ತಾನೆ; ಕೊಲೆಗಾರನೂ ಆದಾನು. ಇಲ್ಲಾ  ವಿರಾಗಿಯೂ ಆಗಿಬಿಡುವನು.  ಏನೇ ಆಗಲಿ, ತನ್ನ ಬಡತನ ತನ್ನ ಪಾಪಕ್ಕೆ ಪ್ರಾಯಶ್ಚಿತವೆಂದು ಅದನ್ನೇ ಅನುಭವಿಸುತ್ತ ಕೂತರೆ  ಅಥವಾ ಕ್ರುದ್ಧರಾದರೆ ಅವನು ಈ ಜನ್ಮದಲ್ಲಿ ಶ್ರೀಮಂತ ನಾಗುವುದಿಲ್ಲ; ಶ್ರೀಮಂತನಾದರೂ ನೆಮ್ಮದಿಯಿಂದಿರುವುದಿಲ್ಲ; ಅಲ್ಲವೇ…?

ನಮ್ಮ ಸ್ವಭಾವಗಳೇ ನಮಗೆ ಮುಳುವಾಗುತ್ತವೆ.

ನಮ್ಮ ಸ್ವಭಾವಗಳೇ ನಮಗೆ ದುಃಖ ತರುತ್ತವೆ. ತಂದೆ-ತಾಯಿಗಳ ದೋಷದ ಫಲ ಮಕ್ಕಳು ಅನುಭವಿಸುತ್ತಾರೆ.  ಮಕ್ಕಳು ಮಾಡಿದ ದೊಡ್ಡ ತಪ್ಪುಗಳನ್ನು ತಂದೆ-ತಾಯಿಗಳು ಸರಿಪಡಿಸಲು ಹೆಣಗಬೇಕಾಗುತ್ತದೆ. ಇಲ್ಲಿ ಮಾತ್ರ ಹಣದ ಪ್ರಶ್ನೆ ಉದ್ಭವಿಸುವುದಿಲ್ಲ. ಏಕೆ? ಹಾಗಾದರೆ ಜೀವನ ನಿರ್ವಹಣೆಯಲ್ಲಿ ಹಣಗಳಿಕೆಯೇ ಪ್ರಧಾನವಲ್ಲವೆಂಬುದೂ ನಿಜ. ಅದೇ ಪ್ರಧಾನ್ಯವಾಗಿಬಿಟ್ಟರೆ ಜೀವನದಲ್ಲಿ ಪ್ರಮಾದಗಳಾಗುವುದೂ ತಪ್ಪಿದ್ದಲ್ಲ. ಮನುಷ್ಯನಿಗೆ ಜೀವನದ ಉದ್ದೇಶ ಹಣ ಮತ್ತು ಹೆಣ್ಣು ಮಾತ್ರವಲ್ಲ ಬೇರೆಯದೇ ಆದ ಮುಖ್ಯ ಗುರಿಯೊಂದಿದೆ. ಅದನ್ನು ಸ್ವತಃ ಕಂಡುಕೊಳ್ಳಬೇಕು. ಮನುಷ್ಯ ಅಮರನಲ್ಲ. ಅವನು ಮಾಡುವ ಕೆಲಸಗಳು ಅಮರವಾಗುವ ಸಾಧ್ಯತೆ ಇವೆ. ಸಾವು ಅವನ ಬೆಂಬತ್ತುತ್ತಲೇ ಇರುತ್ತದೆ. ನೋವು ಬೇಡವೆಂದರೂ ಬಾಧಿಸುತ್ತಲೇ ಇರುತ್ತದೆ. ಸುಖ ಸಿಕ್ಕರೂ ಸಿಗದಿರುವಂತೆಯೇ ಭಾಸವಾಗುತ್ತಲೇ ಇರುತ್ತದೆ.
ಇಲ್ಲ ನಾವು ಮಾಡುವ (ಮಾಡಿದ) ವ್ಯವಹಾರವಿದೆ. ಮನಸ್ಸು ಮಾಡುವ ವ್ಯಾಪಾರವಿದೆ. ವ್ಯವಸ್ಥೆಯನ್ನು ಸಂಪೂರ್ಣ ಬದಲಾಯಿಸಲಾಗದಿದ್ದರೂ ಕಾಲಕಾಲಕ್ಕೆ ಅದರಲ್ಲಿ ಅಷ್ಟಿಷ್ಟು ಬದಲಾವಣೆಗಳು ಕಂಡುಬರುತ್ತವೆ. ಅವು ಮನಸ್ಸಿನ ವ್ಯಾಪಾರವನ್ನು ಬದಲಿಸುತ್ತವೆ. ಮತ್ತು ಮನಸ್ಸಿನ ಮೇಲೇ ಪರಿಣಾಮ ಬೀರುತ್ತವೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s