ಪತ್ರಿಕೋದ್ಯಮದ ರಹಸ್ಯ..?


* ಬಸುರಿ ಬಲಿಕೊಟ್ಟರೆ ಮು.ಮಂ.ಯಡ್ಡಿಯೂರಪ್ಪಬಚಾವ್. ಅಂತೆಯೇ ಯಡ್ಡಿಯವರ ತವರು ಜಿಲ್ಲೆ ಶಿವಮೊಗ್ಗಾದಲ್ಲಿ ಗರ್ಭಿಣಿ  ಹೆಂಗಸನ್ನ ಇದೇ ಕಾರಣಕ್ಕೆ  ಬಲಿಕೊಟ್ಟದ್ದು ನಿಜವೇ…?
* ಹಿರಿಯ ನಟಿ ಲೀಲಾವತಿಯವರ ತೋಟಕ್ಕೆ ಬೆಂಕಿ….
ಇವು ತುಂಬಾ ಕುತೂಹಲಕಾರಿ ಸುದ್ದಿಯಲ್ಲವೇ… ?
ನಟಿ ಲೀಲಾವತಿಯವರ ತೋಟಕ್ಕೆ ಬೆಂಕಿ ಬಿದ್ದದ್ದನ್ನು ಟವಿ೯ ಸುದ್ದಿ ಮಾಡಿತ್ತೆನ್ನಿ.  ಆದರೆ, ಇವುಗಳಲ್ಲಿ ಸತ್ಯ ವಿರುವುದೇ ಆದರೂ  ಯಾವೊಂದೂ ಸ್ಟ್ಯಾಂಟರ‍್ಡ್ ಪತ್ರಿಕೆಗಳಾದ ವಿ.ಕ., ಕ.ಪ್ರ., ಉ.ವಾ. ಇತ್ಯಾದಿಗಳಲ್ಲಿ ಸುದ್ದಿಯಾಗುವುದೇ ಇಲ್ಲವಲ್ಲ ಯಾಕೆ….!!  ಇವು ಎಲ್ಲರ ನಾಲಿಗೆಯ ಮೇಲೇ ಮಾತ್ರ ನಲಿವ ಸುದ್ದಿಗಳೇ..!!
ಇವೆಲ್ಲಾ ಹಾಯ್  ಬೆಂ. ನಂಥ ಟ್ಯಾಬ್ ಲಾಯ್ಡ್ ಪತ್ರಿಕೆಗೆ ಸುದ್ದಿಯ ಹೂರಣ; ಹಣಮಾಡುವ ಮಾಡುತ್ತಲೇ ಬೆಳೆಯಲು ಹೋರಾಡುವ ಹೆಸರು ಮಾಡುವ ಹಾಗೂ ಬೆಳೆಯುತ್ತ ದುಡ್ಡು ಮಾಡುವ ಇವು ಪತ್ರಿಕೋದ್ಯಮದ “ಪೀತ ಪತ್ರಿಕೆಗಳು”.  ಆದರೇನು! ಅವೂ ಪ್ರಸಿದ್ಧ ಪತ್ತಿಕೆಗಳೇ..
ಅವುಗಳ ಸಂಪಾದಕರಲ್ಲಿ ಪ್ರಾಯಶಃ ನನಗೆ ತಿಳಿದಂತೆ ಕನ್ನಡದಲ್ಲಿ ಪೀತ ಪತ್ರಿಕೆಗೊಂದು ಹೊಸ ಆಯಾಮವನ್ನೇ ಕೊಟ್ಟು ಹೆಸರು ಹಣ ಎರಡನ್ನೂ ಮಾಡಿದ ದಿಗ್ಗಜ ಎಂದರೆ ಲಂಕೇಶ್ ಅವರು.  ಅವರ ಲಂಕೇಶ್ ಪತ್ರಿಕೆಯ ಮಾದರಿಯಲ್ಲಿ ಇಂದಿಗೆ ಹೆಚ್ಚು ಯಶಸ್ಸಿಯಾಗಿರುವುದೆಂದರೆ ರವಿ ಬೆಳಗೆರೆಯವರ “ಹಾಯ್ ಬೆಂಗಳೂರು” ಎಂದು ಯಾರು ಬೇಕಾದರೂ ಹೇಳುತ್ತಾರೆ ಅಲ್ಲವೇ…  ?
ಅಲ್ಲಾ ಇವುಗಳೆಲ್ಲ ಮಡಿವಂತ ಸ್ಟ್ಯಾಂಡರ‍್ಡ್‌ ಪತ್ರಿಕೆಗಳಲ್ಲಿ ಯಾಕೆ ಸುದ್ದಿಯಾಗೊಲ್ಲ…? ಅದೇನಿದ್ದೀತು.. ಪತ್ರಿಕೋದ್ಯಮದ ರಹಸ್ಯ..? ನಮ್ಮಂಥ ಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ. ಆಂ! ಅರ್ಥವಾಗುವುದೇ ಬೇಡಾಂತೀರಾ….

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s