ಬದುಕು, ಪ್ರೀತಿ, ನೋವು, ಸೋಲು ಮತ್ತು ಸೆಳೆತ…


ಬದುಕಿಗೆ  ದೆಯೆ ಎಂಬುದಿಲ್ಲ.  ದಿನವೂ  ಎಷ್ಟೋ ಆಸೆ-ಆಕಾಂಶೆಗಳನ್ನು
ಹುಟ್ಟಿಸುವಂತೆಯೆ ಅಷ್ಟೇ ಸೋಲು ನಿರಾಸೆಗಳಲ್ಲಿ ನಿರ್ಧಾರಗಳನ್ನು  ಬದಲಿಸುವಂತೆ ಮಾಡುತ್ತದೆ.

ಕಷ್ಟ ಸಹಿಷ್ಣುಗಳು

ಇಲ್ಲಿ ನೋವು  ಎಂಬುದು ಆಘಾತಕ್ಕೆ ಕಾರಣವಾಗುವಂತೆ ಬದುಕಿನ ಸಂಬಂಧಗಳಿಗೆ ನಿತ್ಯನೂತನ ಅರ್ಥವನ್ನೂ ಕಲ್ಪಿಸಬಲ್ಲದು; ಮತ್ತೆ ಹೇಗೋ ಹೊಂದಿಕೊಳ್ಳಲು  ಬೆಸುಗೆಯೂ ಆಗಬಲ್ಲದು. ಇದು ಸೃಷ್ಟಿ  ನಿಯಮ.  ಇದನ್ನು ಮನಗಂಡಷ್ಟೂ  ನಾವು  ಕಷ್ಟಸಹಿಷ್ಣುಗಳು.

ಸೋಲುಗೆಲುವಿನಲ್ಲಿದೆ ನಮ್ಮ ಬದುಕು

ಒಬ್ಬರ ಸೋಲು  ಇನ್ನೊಬ್ಬರ ಗೆಲುವಿಗೆ  ಸೋಪಾನವಾಗುತ್ತದೆ. ಇನ್ನೊಬ್ಬರ ಅರ್ಥಹೀನ ಬದುಕು ಮತ್ತೊಬ್ಬರಿಗೆ  ಅರ್ಥಪೂರ್ಣತೆ  ತಂದುಕೊಡುತ್ತದೆ! ಇದೂ ಬದುಕಿನ ವಿಪರ್ಯಾಸವೇ…

ಯೌವನದ ಹುಮ್ಮಸ್ಸಿನಲಿ…

ಯೌವನದ ಹುಮ್ಮಸ್ಸಿನಲಿ ಭವಿಷ್ಯದ ಕನಸು ಕಾಣುತ್ತ ಗರ್ವದಿಂದ ಬೀಗುವುದು ಸಹಜ. ವಯಸ್ಸು  ಅರಿವಿಲ್ಲದೇ ಕಳೆದುಹೋದಂತೆ ಅಷ್ಟೇ ಬೇಗ ಹುಮ್ಮಸ್ಸು ಇಳಿಯುವುದೂ  ಸಹಜ.

ಪ್ರೀತಿ ಎಂಬುದು ಆಂತರಿಕ ಸೆಳೆತ….

ಅದಾವುದೋ ಆಂತರಿಕ ಸೆಳೆತ ಇಬ್ಬರನ್ನೂ ಒಂದುಗೂಡಿಸುತ್ತದೆ. ಪ್ರೀತಿಯೆ ಆದರೆ ಅದು ಕೇವಲ ಬಾಹ್ಯಕಾರಣಗಳನ್ನು ಅವಲಂಬಿಸಿರುವುದಿಲ್ಲ. ಅಷ್ಟೇ ಕಾಮಪರವಾದ  ಮೋಹಕ್ಕೆ ಆಂತರಿಕ  ಸೆಳೆತವೆಂಬುದಿಲ್ಲ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s