ಅನರ್ಥಕಾರಿಗಳ ನಡುವೆ ಹೆಣ್ಣು…


Ritertimes image  copyಇಡೀ ಜಗತ್ತಿನಲ್ಲಿ  ಅನರ್ಥಕಾರಿಗಳೇ ಹೆಚ್ಚು ಸುಖಿಗಳಾಗಿ  ಕಾಣುತ್ತಾರೆ. ಅವರಿಗೆ ಯಾವ ಬದುಕಿನ ಅರ್ಥವೂ ಬೇಕಿಲ್ಲ. ಆರ್ಥಿಕಾನುಕೂಲತೆಯೊಂದೇ  ಸಾಕು. ಹೆಣ್ಣು ಒಂದು ಭೋಗವಸ್ತುವಾಗಿರಬೇಕು. ವಿಪರ್ಯಾಸವೆಂದರೆ,  ಇಂದಿನ ಆಧುನಿಕತೆಯ ಸೋಗಿನಲ್ಲಿ  ಎಷ್ಟೋ ಹೆಣ್ಣುಗಳು ಅದನ್ನು ಒಪ್ಫಿಕೊಂಡಿದ್ದಾರೆ.
ಅಷ್ಟಕ್ಕೂ, ಹೆಣ್ಣು ಇಂದಿನ  ತಂತ್ರಜ್ಞಾನ ಯುಗದಲ್ಲಿ ತಾನೂ ವಿಚಾರವಂತಳೆಂಬುದನ್ನು ತೋರಿಸಿಕೊಟ್ಟಿದ್ದಾಳೆ. ತನ್ನದೇ ಉನ್ನತ ಸ್ಥಾನಮಾನ  ಸಂಪಾದಿಸುವ  ಅರ್ಹತೆ ಪಡೆದಿದ್ದಾಳೆ. ಪ್ರೀತಿ-ಪ್ರೇಮ  ಸಂಬಂಧಗಳಲ್ಲಿ  ಕೇವಲ  ಭಾವುಕಳಾಗದೆ ತನ್ನ ಸುಖದಲ್ಲೇ ತನ್ನವರ ಸುಖವನ್ನೂ ಕಾಣಬಲ್ಲ ಚದುರೆಯಾಗಿದ್ದಾಳೆ.   ಇಂದಿನ ಸಮಾಜ ಪುರುಷ ಪ್ರಧಾನವಲ್ಲ;  ಸ್ತ್ರೀಪ್ರಧಾನ ಎಂಬಷ್ಟು ಮುಂದುವರೆದಿದ್ದಾಳೆ.
ಆದರೇನು! ಹೆಣ್ಣು  ಕಲಿತರೂ ಹೆಣ್ಣೇ ಎಂಬುದನ್ನೇ ಮರೆಯುತ್ತಿದ್ದಾಳೆ!  ತನ್ನ  ವಿದ್ಯೆ, ಉನ್ನತ ಹುದ್ದೇ  ಮತ್ತು ಯೌವನದ ರೂಪಾತಿಶಯದಲ್ಲಿ, ಆರ್ಥಿಕ  ಸ್ವಾತಂತ್ರ‍್ಯವನ್ನು  ಪಡೆದಿರುವೆನೆಂಬ  ಗರ್ವದಲ್ಲಿ ಬೀಗುತ್ತಾ  ತನ್ನ ಹೆಣ್ತನವನ್ನೇ ಕಳೆದುಕೊಂಡು ಬದುಕಿನಲ್ಲಿ  ಕಂಗಾಲಾಗುತ್ತಿದ್ದಾಳೆ…
ಅಂಥ  ಹೆಣ್ಣುಗಳಲ್ಲಿ  ನೀನೊಬ್ಬಳಾಗಬೇಕೇ… ಎನ್ನುವಂತಾಗಿದೆಯಲ್ಲ…

ಹೌದು, ಬದಲಾಗುತ್ತಲೆ ಇರುವ  ಸಾಮಾಜಿಕ ದೃಷ್ಟಿಯೊಂದಾದರೆ, ಪ್ರತಿಯೊಬ್ಬರಿಗೂ ಆತ್ಮನಿಷ್ಠೆಯುಳ್ಳ ಜೀವನ ದೃಷ್ಟಿಯೊಂದಿರುತ್ತದೆ. ಅದೇ ಎಂದಿಗೂ ಶ್ರೇಯಸ್ಸನ್ನು ತರುತ್ತದೆ  ಅಲ್ಲವೇ….?

ಅಂತೆಯೇ,ಹೆಣ್ಣಿಗೆ ಲಜ್ಜೆಯೇ ಭೂಷಣ ಎಂಬ ಸಂಸ್ಕೃತಿ ನಮ್ದದು. ಅದನ್ನು ಇಂದಿಗೂ ಕಾಣಬಹುದು.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s