ಪ್ರಾಮಾಣಿಕ ರಕ್ಷಕರು ಸೇವಕರು ಮತ್ತು ಹೋರಾಟಗಾರರು ಇದ್ದಾರೆಯೇ…?


ಹೌದಲ್ಲ! ಈ ಶಾಸಕರು ಸಚಿವರುಗಳಿಗೆ ಸಾವಿರಾರು ಕೋಟಿ ಬಂದಿದ್ದಾದರೂ ಹೇಗೆ ಎಲ್ಲಿಂದ?
ಅವರ ಶಾಸಕರ ಅಥವಾ ಸಚಿವರ ಸಂಬಳದಿಂದ ಅಷ್ಟೆಲ್ಲಾ ಹೇರಳ ಆಸ್ತಿ ಪಾಸ್ತಿ ಸಂಪಾದಿಸಲು ಸಾಧ್ಯವೇ ?
ಇಲ್ಲಾ ಅದೆಲ್ಲವೂ ಅವರೆಲ್ಲರೂ ಕಷ್ಟಪಟ್ಟು ಸಂಪಾದಿಸಿದ ಸ್ವಯಾರ್ಜಿತವೇನು?
ಅದು ಅವರೆಲ್ಲರಿಗೂ ಅವರ ತಂದೆ-ತಾತಂದಿರಿಂದ ಬಂದದ್ದೇನು ?

ನೋಡಿದ್ದೀರಿ ನೀವೂ..ಕೆಲವೇ ಕಲವರ್ಷಗಳೇ ಸಂಸದನೋ ಶಾಸಕನೋ, ಮಂತ್ರಿಯೋ ಮುಖ್ಯ ಮಂತ್ರಿಯೋ ಆದವನು, ಏನೂ ಓದಿಲ್ಲದದಿದ್ದರೂ, ಗತಿಯಿಲ್ಲದಿದ್ದರೂ ಏನೆಲ್ಲ ಆಗಿಬಿಡುತ್ತಾನೆ!
ಆತ ಈಗ ಮಹಾನ್ ರಾಜಕೀಯ ವ್ಯಕ್ತಿ!  ಸುಧಾರಕ ಮಾತ್ರವಲ್ಲ ಸಾವಿರಾರು ಕೋಟಿಗಳ ಸರದಾರ ಸಾಹುಕಾರ ?
ಹೇಗೇ ಎಂದು ನಾನೂ ಎಷ್ಟೋ ಬಾರಿ ತಲೆಕೆಡಿಸಿಕೊಂಡಿದ್ದೇನೆ. ಬಹುಶಃ ನೀವೂ ಕೂಡ…

ಅಂದೊಮ್ಮೆ, ದೇವಸ್ಥಾನ ಒಂದರ ಮುಂದೆ ಅಂಥ ಮಹಾನ್ ಶಾಸಕ ಮಹೋದಯರು ಬರುತ್ತಾರೆ, ನಿಮಗೆ ಈಗ ಇಲ್ಲಿ ಪ್ರವೇಶವಿಲ್ಲ ಎಂದಾಗ ನನಗೆ ಏನಾಯತೋ ಏನೋ..ರಾಜಾ ರೋಷಾಗಿ ಎಲ್ಲ ನೆರೆ ಜನರು ಪೋಲೀಸರ ಎದುರಿನಲ್ಲೇ ಮೇಲೆ ಹೇಳಿದಂತೆಯೇ ಕೂಗಿ ಹೇಳಿದ್ದೇನೆ…ಅಯ್ಯೋ ನನ್ನಂಥ ಶ್ರೀಸಾಮಾನ್ಯನೊಬ್ಬ ಹಾಗೆ ಹೇಳಿದರೆ, ನೋಡಿ ಸುಮ್ಮನೆ ನಕ್ಕುಬಿಡುತ್ತಾರಷ್ಟೇ…

ಅದೇ  ನೋಡಿ ನಮ್ಮ ನಡವೆ ಇದ್ದಾರೆ; ನಮ್ಮ ಕರ್ನಾಟಕ ರಕ್ಷಕರು ಸೇವಕರು ಎಂದು ಕರೆಸಿಕೊಳ್ಳುವ ಜನ. ಇವರೆಲ್ಲ ಯಾರು? ನಿಜಕ್ಕೂ ಇವರಲ್ಲಿ ಪ್ರಾಮಾಣಿಕ ಚಳವಳಿಗಾರರು ಹೋರಾಟಗಾರರು ಇದ್ದಾರೆಯೇ…? ಅಲ್ಲಾ, ಇವರೆಲ್ಲ ಬರೀ ತರಲೆ ಜನರೇ ಚಳವಳಿ ಘೆರಾವ್ ಮಾಡುವುದೆಲ್ಲ ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕಷ್ಟೇನೇ…ನಿಜಕ್ಕೂ ಹೇಳಿ, ಅವರಲ್ಲಿ ಅದೆಷ್ಟು ಮಂದಿ ಬುದ್ಧಿವಂತರು ವಿದ್ಯಾವಂತರು, ಸಾಹಿತ್ಯಾಸಕ್ತರಿದ್ದಾರೆ ಎಂಬುದನ್ನು ಮೇಲ್ನೋಟಕ್ಕೆ ಅವರುಗಳ ಮುಖ ಟಿ.ವಿಯಲ್ಲಿ ನೋಡಿದರೇನೆ ತಿಳಿಯದಿರದಲ್ಲವೇ….
ಅಂಥವರಿಗೆ ಕನ್ನಡವೆಂದರೇ ಸಿನಿಮಾ ಮಾಧ್ಯಮವೊಂದೇ ಪ್ರಧಾನವಾಗಿ ಕಾಣುವುದು. ಅಷ್ಟಕ್ಕೂ ಈಗೀಗ ಕನ್ನಡ ರಾಜ್ಯೋತ್ಸವಗಳಿಗೆ ಕನ್ನಡ ಸಾಹಿತಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸುವುದೇ ತೀರ ಅಪರೂಪವಾಗಿ ಬಿಟ್ಟಿದೆ!. ಅಲ್ಲಿ ಸಿನಿಮಾ ನಟರೇ ಹಾಗೂ ಮಹಾನ್ ಸಂಸದರೇ ಆಹ್ವಾನಿತರು ಅಲ್ಲವೇ..? ಯಾಕಾಗಿ ಹೇಳಿ…?

“ಅಂದಹಾಗೆ, ನಿನಗೆ ವಿದ್ಯೆ ತಲೆಗೆ ಹತ್ತಲಿಲ್ಲವೆಂದರೆ, ಯಾವುದಾದರೂ ಒಂದು ರಾಜಕೀಯ ಪಕ್ಷದ ಕಾರ್ಯಕರ್ತನಾಗು ಇಲ್ಲವೇ ಸಂಘ ಸಂಸ್ಥೆ ಸೇವೆಗೆ ಸೇವಕನಾಗಿ ಗುರುತಿಸಿಕೋ, ಮುಂದೆ ಬರುತ್ತೀಯಾ, ಒಂದು ದಿನ ರಾಜಕೀಯಕ್ಕೂ ಧುಮುಕುತ್ತೀಯ. ಹಣವನ್ನೂ ಚೆನ್ನಾಗಿ ಕಮಾಯಿಸುತ್ತೀಯ ಹೆಸರೂ ಮಾಡುತ್ತೀಯ…” ಎಂಬ ಉಪದೇಶ ಓದು ಬೇಡಬವಾಗಿರುವವನಿಗೆ ಏನೂ ಮಾಡಲು ಗೊತ್ತಿಲ್ಲದವನಿಗೆ ಹೇಳಿದರೆ ತುಂಬಾ ಖಷಿಯಾಗದಿರುತ್ತದೆಯೇ..ಹೇಳಿ?

ಅಲ್ಲಾ, ಭ್ರಷ್ಟರೇ ತುಂಬಿರುವ ವ್ಯಭಿಚಾರಗಳಲ್ಲೂ ತೊಡಗಿ ಮಜಾಮಾಡುತ್ತಿರುವ ಶಾಸಕರು ಸಚಿವರುಗಳು ನಮಗೆ ಬೇಡವೇ ಬೇಡ ಎಂದೇಕೆ ನಮ್ಮ ಕರ್ನಾಟಕವನ್ನು ರಕ್ಷಿಸಲು “ಕಂಕಣ” ತೊಟ್ಟಿರುವ ಈ ರಕ್ಷಕರು ಸಂಘಟನೆಗಳ ಸೇವಕರೇಕೆ ಪ್ರಾಮಾಣಿಕವಾಗಿ ಚಳವಳಿ ಆರಂಭಿಸ ಬಾರದು? ಸಂಸತ್ ಕಟ್ಟಡದ ಮುಂದೆ, ಅಂಥ ಸಂಸದರ ಸಚಿವರ ಮನೆ ಮುಂದೆ ಧರಣಿ ಕೂರಬಾರದು?
ಅವರಿಗೆ ಅಷ್ಟೆಲ್ಲಾ ಸಾವಿರಾರು ಕೋಟಿ ಸಂಪಾದಿಸಲು ಹೇಗೆ ಸಾಧ್ಯವಾಯಿತೆಂಬುದನ್ನು ಸಂಸತ್ತಿನಲ್ಲೇಕೆ ಚರ್ಚೆಗೆ ಬರುವಂತೆ ಮಾಡಬಾರದು..? ಯಾಕೆಂದರೆ, ಏಲ್ಲರೂ ಕಳ್ಳರೇ, ಯಾರಿಂದ ಏನೂ ಆಗುವುದಿಲ್ಲ ಎಂದೇ..? ಉಹೂಂ., ಅಂತಹ ಪ್ರಾಮಾಣಿಕತೆ ತೋರುವ ಚಳವಳಿ ಸಂಘಟನೆಗಳಿವೆಯೇ ಇದ್ದಿದ್ದರೆ ನಮ್ಮ ರಾಜ್ಯ ನಮ್ಮ ದೇಶ ಹೀಗಿರುತ್ತಿರಲಿಲ್ಲ ಅಲ್ಲವೇ…?
ಸುಮ್ಮನೆ ತರಲೆ ಎಬ್ಬಿಸಿ ಪ್ರಚಾರ ಗಿಟ್ಟಿಸುವಂಥ ತಾವೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವಂತ  ಸಂಘ ಸಂಘನೆಗಳೇ ತುಂಬಿವೆಯಲ್ಲ..!

ಇನ್ನು ಹೆಂಡ, ಸೀರೆ , ಎಂಜಲು ಕಾಸು ಪಡೆದು ಓಟು ಹಾಕುವ ದರಿದ್ರ ಜನಗಳಿದ್ದಾರಲ್ಲ; ಅವರಿಗಾದರೂ ಜ್ಞಾನೋದಯವಾಗುವುದಾದರೂ ಯಾವಾಗ? ಅವರಾದರೂ ಇಂಥವರಿಗೆ ಓಟು ಕೊಟ್ಟು ಚುನಾಯಿಸಿದ್ದು ಭೂಮಿ ಕಬಳಿಸಲು, ಕೋಟಿ ಕೋಟಿ ಗಳಿಸಲು, ತಮ್ಮ ಊರುಗಳ ಸುತ್ತ ಮುತ್ತಲ್ಲಲೂ ತಮ್ಮ ತಮ್ಮ ಕುಟುಂಬದವರ ಹೆಸರಿನಲ್ಲೆ ಸಿಕ್ಕಾಪಟ್ಟೆ ಆಸ್ತಿ ಮಾಡಿಕೊಳ್ಳುವುದಕ್ಕಲ್ಲ ಎಂದು ಕೂಗಿ ರೊಚ್ಚಿಗೇಳಬಾರದೇಕೇ…?
ಹೌದು, ಬಡವನ ಸಿಟ್ಟು ದವಡೆಗೆ ಮೂಲವೆನ್ನುತ್ತಾರೆ.
ಆದರೇನು!  ಅದೇ ಬಡವರು ರೊಚ್ಚಿಗೆದ್ದರೆ ಕಾಡ್ಗಿಚ್ಚೂ ಹೆದರಿ ಹಿಮ್ಮೆಟ್ಟುತ್ತದೆಯಂತೆ!

ಅಂತಹ ಕಾಲ ಬರುವುದೆಂತು? ಉಹೂ೦, ಅದು ಸಿನಿಮಾದಲ್ಲಷ್ಟೇ…ಎನ್ನವಿರೇನು?
ಅಂತು ಭ್ರಷ್ಟರೇ ಹೆಚ್ಚುತ್ತಿರುವ ಈ ಕಾಲಮಾನದಲ್ಲಿ, ಅವರಿಂದ ನಮ್ಮ ಕರ್ನಾಟಕವನ್ನು ರಕ್ಷಿಸಲಾರದ ಮಹಾನ್ ರಕ್ಷಣಾ ವೇದಿಕೆ ಜನ, ಸಾಹಿತ್ಯ ವೇದಿಕೆಯೊಂದರಲ್ಲಿ  ನಮ್ಮ ರಾಜ್ಯದ ಬಗ್ಗೆ ದೇಶದ ಬಗ್ಗೆ ವ್ಯಥೆಯಿಂದ ವಿಷಾದದಿಂದ ಇದ್ದದ್ದು ಇದ್ದಂತೆಯೇ ಸಾತ್ವಿಕ ಕೋಪದಿಂದ ಸಮಾಜದ ಓರೆಕೋರೆಗಳನ್ನು ತಮ್ಮ ಬರಹಗಳಲ್ಲೂ ಮೂಡಿಸಿರುವ ದೇಶ ವಿದೇಶಗಳಲ್ಲಿ ಜನಪ್ರೀತಿಯನ್ನು ಹೊಂದಿರುವ ಖ್ಯಾತ ಸಾಹಿತಿಯೊಬ್ಬರು ನುಡಿದ ಮಾತ್ರಕ್ಕೇ ಅವರ ಮನೆ ಮುಂದೆ ಕೂಗಾಟ ಮಾಡುವುದು ನಿಜಕ್ಕೂ ಖಂಡನೀಯ…

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s