ಅಖಿಲ ಭಾರತ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನ


ಕನ್ನಡ ಭಾಷೆ; ಕಣ್ಮರೆಯಾಗುವುದೇ ? ಎಂಬ ಪ್ರಶ್ನೆ ಉದ್ಭವಿಸಿರುವ ಈ ಕಾಲಮಾನದಲ್ಲಿ ಕನ್ನಡ ಸೇವೆಯಲ್ಲಿ ೯೭ ವಸಂತಗಳನ್ನು ಸಾರ್ಥಕವಾಗಿಸಿಕೊಂಡಿರುವ ಭಾಷಾ ತಜ್ಞ ಪ್ರೊ.ಜೀ.ವಿ.ಅವರನ್ನು ಅಖಿಲ ಭಾರತ ೭೭ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿರುವುದು ಸ್ತುತ್ಸಾರ್ಹವೇ ಆಗಿದೆ; ಅದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದ ಘನತೆಯನ್ನು ಹೆಚ್ಚಿಸಿದೆ. “ಪದ ಜೀವಿ” ಎಂದೇ ಹೆಸರಾಗಿರುವ ಹಿರಿಯ ವಿದ್ವಾಂಸ, ನಿಘಂಟು ತಜ್ಞ ಪ್ರೊ.ಜಿ.ವೆಂಕಟ ಸುಬ್ಬಯ್ಯ(ಜೀವಿ) ಅವರು, “ವಿಶ್ವದ ೬ ಸಾವಿರ ಭಾಷೆ ಗಳಲ್ಲಿ ೨೫ನೇ ಸ್ಥಾನದಲ್ಲಿರುವ ಕನ್ನಡ ಅತ್ಯಂತ ಸತ್ವಯುತವಾಗಿದೆ. ಹೀಗಾಗಿ “ಕನ್ನಡ ಸಾಯುತ್ತದೆ ಎಂಬ ಮಾತನ್ನು ಯಾರೂ ಆಡಬೇಡಿ” ಎಂದು ಹಿತವಚನ ನುಡಿದಿದ್ದಾರೆ. ಅವರು ಮುಂದುವರೆದು ಕನ್ನಡ ಭಾಷೆಯನ್ನು ಯಾರೂ ಉಳಿಸಬೇಕಿಲ್ಲ. ೬ ಕೋಟಿ ಜನ ಮಾತನಾಡುವ ಭಾಷೆಯದು. ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಅತ್ಯಂತ ಸತ್ವಯುತಪೂರ್ಣವಾಗಿದೆ.

ಇಂಗ್ಲೀಷ್ ಪದಗಳ ಸೇರ್ಪಡೆಗೆ ಆತಂಕ ಪಡಬೇಕಿಲ್ಲ. ಅದರಿಂದ ಕನ್ನಡ ಭಾಷೆಯೂ ಬೆಳೆಯುತ್ತದೆ. ಇದೇ ಹಿನ್ನೆಲೆಯಲ್ಲಿ ಬಂದಿದೆ; ನಾನು ಬರೆದಿರುವ ಎರವಲು ಪದಕೋಶ ಎಂದಿದ್ದಾರೆ ಪದ ಜೀವಿ ವೆಂಕಟಸುಬ್ಬಯ್ಯನವರು. ನಿಜಕ್ಕೂ ಕನ್ನಡ ನಾಡಿನ ಸಾಹಿತ್ಯ ಪ್ರೇಮಿಗಳು ಹಾಗೂ ಕನ್ನಡ ಮಾತನಾಡುವ ಜನಸಾಮಾನ್ಯರಿಗೂ ಅತ್ಯಂತ ಸಂತಸದ ವಿಷಯವೇ ಸರಿ.

ಶಿಕ್ಷಣ,ಸಾಹಿತ್ಯ,ವಿಮರ್ಶೆ, ಭಾಷಾ ಸಂಶೋಧನೆ ಮುಂತಾದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡು “ನಡೆದಾಡುವ ನಿಘಂಟು” ಎಂದು ಖ್ಯಾತರಾಗಿರುವ ಕನ್ನಡ ವಿದ್ವಾಂಸರಾದ “ಪದಜೀವಿ” ಪ್ರೊ.ವೆಂಕಟಸುಬ್ಬಯ್ಯನವರು ಕನ್ನಡ ಭಾಷಾಸಂಪತ್ತನ್ನು ಅಭಿವೃದ್ಧಿಗೊಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಅವರ ಜನಪ್ರಿಯ ಮೇರು ಕೃತಿ “ಇಗೋ ಕನ್ನಡ” ನಾಡಿನ ಜನತೆಯ ಮನೆ ಮನೆ ಮನಗಳನ್ನು ಗೆದ್ದಿದೆ; ಕನ್ನಡಭಾಷೆಯ ಕೈಗನ್ನಡಿಯಾಗಿದೆ. ಪ್ರಸ್ತುತದಲ್ಲಿ ಕನ್ನಡ ಭಾಷೆಯ ಬೆಳವಣಿಗೆ, ಅದನ್ನು ಬಳಸುತ್ತಿರುವ ಬಗೆಗೆ ಅವರು ಆಗಾಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಲೆ ಬಂದಿದ್ದಾರೆ. ನಮ್ಮ ಪ್ರಸಾರ ಮಾಧ್ಯಮಗಳಲ್ಲಿ ಕನ್ನಡ ಬಳಕೆಯಲ್ಲಾಗುತ್ತಿರುವ ತಪ್ಪುಗಳು ನಮ್ಮ ಕನ್ನಡ ಭಾಷೆಯ ಗೌರವಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ತರವಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಸರಳ ಕನ್ನಡ ಪದಗಳ ಬಳಕೆ ಮಾಡುವುದಲ್ಲದೇ, ತಪ್ಪುಗಳಾದಂತೆ ಎಚ್ಚರವಹಿಸುವುದೂ ಪ್ರಸಾರ ಮಾಧ್ಯಮಗಳ ಜವಾಬ್ದಾರಿಯೆ ಆಗಿದೆ.

ಈಗಂತೂ ದೇಶ ಮಾಹಿತಿ ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿರುವಾಗ, ಕಂಪ್ಯೂಟರ‍್ ತಾಂತ್ರಿಕ ಭಾಷೆಯನ್ನು ಕನ್ನಡಕ್ಕೆ ಅನುವಾದ ಮಾಡಬೇಕೇ ಅಥವಾ ಅದರ ನೇರ ಬಳಕೆ ಉಚಿತವೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುವುದೇ ಆಗಿದೆ.  ಕನ್ನಡಕ್ಕೆ ಹೊಂದುವ ಯಾವ ಶಬ್ದವಾದರೂ ಸರಿ ನೇವಾಗಿ ಆಯ್ಕೆ ಮಾಡಿಕೊಳ್ಳೋಣ ಎಂದು ಹೇಳುವ ಜೀವಿಯವರ ಮಾತು ಖಂಡಿತ ಸಮಂಜಸವೇ ಆಗಿದೆ. ಕಂಪ್ಯೂಟರ‍್ ವೃತ್ತಿಪರ ಶಿಕ್ಷಣವಾಗಿದೆ. ಅದರ ತಾಂತ್ರಿಕ ಪದವನ್ನು  ನೇರವಾಗಿ ಆಡುಭಾಷೆಯಲ್ಲಿ ನಮ್ಮಕನ್ನಡದೊಂದಿಗೇ ಬಳಸುವ ನಾವು, ಅದನ್ನೇ ಪಠ್ಯ ಪುಸ್ತಕ ರೂಪದಲ್ಲಿಯೂ ಬಳಸಿಕೊಳ್ಳುವುದಕ್ಕೆ ಹಿಂಜರಿಯುವುದರಲ್ಲಿ ಅರ್ಥವೇನಿಲ್ಲ. ಕನ್ನಡದಲ್ಲಿ ಕಂಪ್ಯೂಟರ‍್ ಪುಸ್ತಕಗಳನ್ನು ಬರೆದಿರುವ ನನ್ನ ಅನುಭವದಲ್ಲಿ ಹೇಳಬೇಕೆಂದರೆ, ಅದು ಅತ್ಯಂತ ಸೂಕ್ತ ವಿಚಾರವೇ ಆಗಿದೆ.  ಹಾಗೆಯೆ ನಾನೂ ಕೂಡ ನನ್ನ ಪುಸ್ತಕಗಳಲ್ಲಿ ಬಳಸಿಕೊಂಡಿದ್ದೇನೆ…

ನನ್ನ “ವಿನ್ ಕಂಪ್ಯೂಟರ‍್ಸ್ -ಕಂಪ್ಯೂಟರ‍್ ಬೇಸಿಕ್ ಪುಸ್ತಕದ (ಜನಪ್ರಿಯ ಏಳನೆಯ ಆವೃತಿ) ಲೋಕಾರ್ಪಣೆಯಲ್ಲಿ ಹೀಗೆ ಹೇಳಿದ್ದೇನೆ-
ನಾಡು ನುಡಿಗೆ ಮೀಸಲಾದ
ದೇಶಭಾಷೆಗೆ ಮಿಗಿಲಾದ
ಜ್ಞಾನದಾಹಿಗಳಿಗೆ…

ಹೌದು, ನಾವೂ ಈ ನಾಡು ನುಡಿಗೆ ಮೀಸಲಾದವರು ದೇಶ ಯಾವುದಾದರೇನು? ಭಾಷೆ ಯಾವುದಾದರೇನು? ಜ್ಞಾನದಾಹಿಗಳಾಗಬೇಕು ನಾವು. ಎಲ್ಲ ಮಡಿವಂತಿಕೆ ಬಿಟ್ಟು ನಮ್ಮ ಭಾಷೆಗೆ  ಸಾಹಿತ್ಯವೋ,  ತಾಂತ್ರಿಕವೋ ಯಾವುದೇ ಭಾಷೆಯ ಶಬ್ದವೊಂದನ್ನು ನಮ್ಮ ಭಾಷೆಗೆ ಆಯ್ಕೆ ಮಾಡಿಕೊಳ್ಳುವುದರಲ್ಲೇ ನಮ್ಮ  ಹಿತವಿದೆ. ಭಾಷೆಯ ಬೆಳವಣಿಗೆಗೆ ಅದು ಪೂರಕವೂ ಆಗಿರುತ್ತದೆ.  ಪ್ರೊ. ಜೀವಿ ಅವರು ಕನ್ನಡಕ್ಕೆ, ಹೊಸದೊಂದು ಆಧುನಿಕ ಕನ್ನಡ ವ್ಯಾಕರಣ ನಿರ್ಮಾಣ ಮಾಡಬೇಕಾದ ಅಗತ್ಯವಿದೆ ಎಂದೂ ಹೇಳಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ‍್ ೨೪ರಿಂದ ೨೬ರವರೆಗೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ೭೭ನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಾವು ಇಂದು ನೋಡುತ್ತಿರುವ ಇಂಗ್ಲೀಷ್ ಗೂ ಹಳೆಯ ಕಾಲದ ಇಂಗ್ಲೀಷ್ ಗೂ ಬಹಳ ಅಂತರವಿದೆ.  ಹಾಗೆಯೆ ಹಳೆಗನ್ನಡಕ್ಕೂ ಇಂದಿನ ಕನ್ನಡಕ್ಕೂ ಬಹಳ ಅಜಗಜಾಂತರವಿದೆಯಲ್ಲವೇ?  “ಭಾಷೆ ಎಂಬುದು ನಿಂತ ನೀರಲ್ಲ. ಅದು ಮನುಷ್ಯ ಮನುಷ್ಯರ ನಡುವೆ ನಿರಂತರವಾಗಿ ಬೆಳೆಯುವಂತಹದು. ಇದಕ್ಕೆ ಯಾವುದೇ ಚೌಕಟ್ಟಿನ ನಿರ್ಬಂಧವಿಲ್ಲ. ಇರಬಾರದು. ಅನ್ಯದೇಶದ ಶಬ್ದಗಳು ಕನ್ನಡ ಭಾಷೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತವೆಂಬ ಪ್ರೊ. ಜೀವಿಯವರ ಮಾತು ಅಕ್ಷರಶಃ ಸತ್ಯ. ಪ್ರಸ್ತುತ ಕನ್ನಡದ ಸಂದರ್ಭದಲ್ಲಿ ಇಂತಹ ಸದಾಶಯದ ಹೊನ್ನುಡಿಗಳನ್ನಾಡಿರುವ ನಾಡಿನ ಹಿರಿಯ ಭಾಷಾ ತಜ್ಞ ಪ್ರೊ.ಜಿ.ವಿಯವರಿಗೆ ವಂದನೆಗಳು ಅಭಿನಂದನೆಗಳು. ಅವರ ಬಗ್ಗೆ ಕನ್ನಡಿಗರೆಲ್ಲರೂ ಹೆಮ್ಮೆಪಡುವಂತಾಗಿದೆ.
.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s