ಮುಸ್ಲಿಂ ಜನಮತ ಸಾಂದ್ರತೆ ಹೆಚ್ಚಿದ ಮಾತ್ರಕ್ಕೇ ಕಾಶ್ಮೀರವನ್ನು ಬಿಟ್ಟುಕೊಡಬೇಕೇ…?!!.


ಅರುಂಧತಿ ರಾಯ್  ಅವರ ವಿವಾದಾಸ್ಪದ ಹೇಳಿಕೆ ಕುರಿತು ಇಡೀ  ನಮ್ಮದೇಶವೇ ಆಕ್ರೋಶ ವ್ಯಕ್ತಪಡಿಸಿದೆಯೆಂದರೆ ಉತ್ಪ್ರೇಕ್ಷೆಯೇನಿಲ್ಲ. ಅಲ್ಲ, ಕಾಶ್ಮೀರ ಎಂದೂ ಭಾರತದ ಭಾಗವಾಗಿರಲಿಲ್ಲ ಎನ್ನುವ ಈ ಅರುಂಧತಿ ರಾಯ್ ಯಾರು? ಮುಸ್ಲಿಂ ಜನಮತ ಸಾಂದ್ರತೆ ಹೆಚ್ಚಿದ ಕಾರಣಕ್ಕಾಗಿಯೇ ಕಾಶ್ಮೀರವನ್ನು ಬಿಟ್ಟುಕೊಡಬೇಕೇ…?!!.ಇಲ್ಲ, ಪುರಾಣೇತಿಹಾಸವನ್ನು ತಿರುವಿ ನೋಡಿದರೆ ಹಾಗೆನಿಸುವುದಿಲ್ಲ. ಅಷ್ಟೇಕೆ ಪ್ರಸ್ತುತ ಭಾರತದಲ್ಲಿ, ಭಾ಼ಷಾವಾರು ಪ್ರಾಂತ್ಯಗಳು ಆಯಾ ಭಾಷೆಯನ್ನಾಡುವ ಜನಮತ ಗಣನೆ ಸಾಂದ್ರತೆಯ ಆಧಾರದ ಮೇಲೇ ಇವೆಯಾದರೂ ಭಾವೈಕ್ಯತೆ ವಿಷಯಕ್ಕೆ ಬಂದರೆ ಭಾರತ ಐಕ್ಯಮತ್ಯಕ್ಕೆ ದೊಡ್ಡ ಹೆಸರಾಗಿದೆ; ಮಾದರಿಯೆನಿಸಿದೆ.  ಸ್ವಾತಂತ್ರ‍್ಯಾನಂತರದ ಭಾರತದ ಸಣ್ಣ ಪುಟ್ಟ ರಾಜ್ಯಗಳನ್ನು ಒಂದುಗೂಡಿಸಿ ಸರ್ದಾರ‍್ ವಲ್ಲಭಾಯ್ ಪಟೇಲರು ಹಾಕಿದ ಭದ್ರ ಬುನಾದಿಯ ಮೇಲೇ ಇಂದಿಗೂ ನಮ್ಮ ಭಾರತದ ಗಣರಾಜ್ಯ ನಿಂತಿದೆ.  ಆದರೇನು! ಅಂದಿಗೂ ಇಂದಿಗೂ ಪ್ರತ್ಯೇಕತಾ ವಾದವೆಂಬುದು ಅಲ್ಲಲ್ಲಿ ಭುಗಿಲೇಳುವುದೂ ಕಂಡುಬರುತ್ತಲೇ ಇದೆ.  ಈ ದಿಸೆಯಲ್ಲಿ ಕಾಶ್ಮೀರವಂತೂ ಸ್ವಾತಂತ್ರ‍್ಯನಂತರ ದೇಶವಿಭಜನೆಯಾದ ೧೯೪೭ರಿಂದಲೂ ಅದರದೊಂದು ಬಗೆಹರಿಯದ ಜ್ವಲಂತ ಸಮಸ್ಯೆಯೇ ಆಗಿಬಿಟ್ಟಿದೆ!
ಕಾಶ್ಮೀರ ಭಾರತಕ್ಕೆ ಸೇರಿದ್ದು, ಅದೆಂದೂ ಪಾಕೀಸ್ತಾನದ ಭಾಗವಾಗಲಾರದೆಂದು ಸ್ಪಷ್ಟಪಡಿಸುತ್ತಾ ಬರೆಯುತ್ತಾರೆ- ಅಂಕಣಕಾರ ಪ್ರತಾಪ ಸಿಂಹ( ವಿ.ಕ.೩೦-೧೦-೨೦೧೦). ಅವರ ಲೇಖನದ ಕೆಲವು ಮುಖ್ಯ ಅಂಶಗಳನ್ನಿಲ್ಲಿ ಸಂಗ್ರಹಿಸಿದ್ದೇನೆ-
ಹೌದು, ಕಾಶ್ಮೀರದ ಸೌಂದರ್ಯಕ್ಕೆ ಅಲ್ಲಿನ ಪ್ರಕೃತಿ ಸಿರಿಯ ವಿಹಂಗಮ ನೋಟಕ್ಕೆ ಬೆರಗಾದವರೇ ಇಲ್ಲ.  ಹಿಂದೂ ಸಂಸ್ಕೃತಿ ಪರಂಪರೆಯಲ್ಲಿ ಕಾಶ್ಮೀರಕ್ಕೆ ಅದರದೇ ಐತಿಹ್ಯವಿದೆ; ಅದಕ್ಕೇ ಅತ್ಯಂತ ಪ್ರಾಧಾನ್ಯತೆ ಇದೆ. ಕಾಶ್ಮೀರ ಎಂಬ ಹೆಸರಲ್ಲೇ ಹಿಂದುತ್ವದ ಕುರುಹುಗಳಿವೆ. ಕಾಶ್ಮೀರ ಕಣಿವೆಯಲ್ಲಿನ ವಿಶಾಲವಾದ ’ಸತಿಸರ‍್’ ಕೊಳವನ್ನು ಸತಿ ದೇವಿಯ (ಶಿವನ ಪತ್ನಿಯಾದ ಪಾರ್ವತಿ)ಕೊಳವೆಂದೂ ಕರೆಯಲಾಗುತ್ತದೆ. ಇದನ್ನು ಕಶ್ಯಪ ಋಷಿಗಳು ಉದ್ಧಾರಗೊಳಿಸಿದರು ಎಂದು ಪುರಾಣ ಕಥೆಗಳು ಹೇಳುತ್ತವೆ. ಪುರಾಣಕಾಲದಲ್ಲಿ ಇದನ್ನು ಕಶ್ಯಪಾಮರ‍್ ಎಂದೂ ಕರೆಯಲಾಗುತ್ತಿತ್ತು. ಈ ಹೆಸರೇ ಮುಂದೆ ಕಾಶ್ಮೀರವಾಯಿತು.
ಕಾಶ್ಮೀರ ಕುರಿತು ಕಲ್ಹಣ ಬರೆದಿರುವ ಇತಿಹಾಸದಲ್ಲಿ ಸಿಗುವ ಮೊದಲ ದಾಖಲೆ ಮಹಾಭಾರತ ಕಾಲದ್ದು. ಕ್ರಿ.ಪೂ. ೩ನೇ ಶತಮಾನದಲ್ಲಿ ಚಕ್ರವರ್ತಿ ಅಶೋಕ ಬೌದ್ಧಮತವನ್ನು ಕಾಶ್ಮೀರ ಕಣಿವೆಯಲ್ಲಿ ಪ್ರಚುರಪಡಿಸಿದ. ಕ್ರಿ.ಶ. ೯ನೇ ಶತಮಾದ ಹೊತ್ತಿಗೆ ಕಾಶ್ಮೀರವು ಹಿಂದೂ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತು.
ಇಂತಹ ನಿತ್ಯ ಮನೋಹರವಾದ ಕಾಶ್ಮೀರದಲ್ಲಿ ೧೩೪೬ರವರೆಗೂ ಹಲವಾರು ಹಿಂದೂ ಮಹಾರಾಜರು ಆಳ್ವಿಕೆ ನಡೆಸಿದರು. ಮುಸ್ಲಿಮರು ಕಾಶ್ಮೀರದ ಮೇಲೆ ಆಕ್ರಮಣ ನಡೆಸಿದ್ದು ೧೩೪೬ರಲ್ಲಿ.  ಈ ಅವಧಿಯಲ್ಲಿ ಹತ್ತಾರು ಹಿಂದೂ ದೇವಾಲಯಗಳನ್ನು ನಾಶಪಡಿಸಲಾಯಿತು.  ಹಾಗೂ ಹಿಂದೂಗಳು ಬಲವಂತವಾಗಿ ಇಸ್ಲಾಂ ಅಪ್ಪಿಕೊಳ್ಳುವಂತೆ ಮಾಡಲಾಯಿತು. ಮೊಘಲರು ೧೫೮೭ರಿಂದ ೧೭೫೨ರವರೆಗೂ ಕಾಶ್ಮೀರದಲ್ಲಿ ಆಡಳಿತ ನಡೆಸಿದರು.  ಈ ಅವಧಿ ಶಾಂತಿ ಮತ್ತು ಸುವ್ಯವಸ್ಥೆಯಿಂದ ಕೂಡಿತ್ತು. ಕಾಶ್ಮೀರದ ಪಾಲಿಗೆ ೧೭೫೨ರಿಂದ ೧೮೧೯ರವರೆಗೂ ಕತ್ತಲೆಯ ಯುಗ. ಈ ಅವಧಿಯಲ್ಲಿ ಆಫ್ಘನ್ ಸರ್ವಾಧಿಕಾರಿಗಳು ಕಾಶ್ಮೀರವನ್ನು ಆಳಿದರು. ಸುಮಾರು ಐನೂರು ವರ್ಷಗಳ ಕಾಲ ಕಾಶ್ಮೀರದಲ್ಲಿ ಮುಸ್ಲಿಮರ ಆಳ್ವಿಕೆ ನಡೆಯಿತು.
೧೮೧೯ರಲ್ಲಿ ಸಿಖ್ಖರ ಸಾಮ್ಯಾಜ್ಯವಾದ ಪಂಜಾಬ್ ಗೆ ಕಾಶ್ಮೀರ ಸೇರ್ಪಡೆಯಾಗುವುದರೊಂದಿಗೆ ಕಾಶ್ಮೀರದಲ್ಲಿ ಮುಸ್ಲಿಮರ ಆಳ್ವಿಕೆ ಕೊನೆಗೊಂಡಿತು.
೧೮೪೬ರಲ್ಲಿ ನಡೆದ ಮೊದಲ ಸಿಖ್ ಯುದ್ಧದ ಬಳಿಕ ಕಾಶ್ಮೀರ ಈಗಿರುವ ಸ್ವರೂಪದಲ್ಲಿ ಹಿಂದೂ ಡೋಗ್ರಾ ಸಾಮ್ಯಾಜ್ಯದ ಭಾಗವಾಯಿತು. ಡೋಗ್ರಾ ಆಡಳಿತಗಾರರಾದ ಮಹಾರಾಜ ಗುಲಾಬ್ ಸಿಂಗ್ (೧೮೪೬ರಿಂದ ೧೯೫೭), ಮಹಾರಾಜ ರಣಬೀರ‍್ ಸಿಂಗ್ (೧೮೫೭ರಿಂದ ೧೮೮೫), ಮಹಾರಾಜಾ ಪ್ರತಾಪ್ ಸಿಂಗ್ (೧೯೨೫-೧೯೫೦)
ಆಧುನಿಕ ನಮ್ಮು ಮತ್ತು ಕಾಶ್ಮೀರಕ್ಕೆ ಬುನಾದಿಯನ್ನು ಹಾಕಿದರು.
ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಕಾಶ್ಮೀರ ರಾಜನಿಗೆ ತಾನು ಯಾವ ದೇಶವನ್ನು ಸೇರಬೇಕೆಂಬ ನಿರ್ಣಯ ಕೈಗೊಳ್ಳುವ ಸ್ವಾತಂತ್ರ‍್ಯವನ್ನು ನೀಡಲಾಗಿತ್ತು. ಬಹು ಸಂಖ್ಯಾತ ಮುಸ್ಲಿಂ ರಾಜ್ಯದ ಹಿಂದೂ ಮಹಾರಾಜನಾಗಿದ್ದ ಹರಿಸಿಂಗ್, ಕೆಲ ತಿಂಗಳ ಹೊಯ್ದಾಟದ ಬಳಿಕ ೧೯೪೭ರ ಅಕ್ಟೋಬರ‍್ ನಲ್ಲಿ ಭಾರತದೊಂದಿಗೆ ಒಪ್ಪಂದವನ್ನು ಮಾಡಿಕೊಂಡು, ವಿಲೀನಕ್ಕೆ ಮುಂದಾದರು.  ಇದು ಧರ್ಮದ ಆಧಾರದ ಮೇಲೆ ಪ್ರತ್ಯೇಕ ರಾಷ್ಟ್ರ ಪಡಕೊಂಡಿದ್ದ ಪಾಕಿಸ್ತಾನದ ನಾಯಕರನ್ನು ಕೆರಳಿಸಿತು.
ಮುಸ್ಮಿಮರು ಬಹುಸಂಖ್ಯಾತರಾಗಿರುವ ಭಾರತದ ಪ್ರದೇಶಗಳು ತಮ್ಮ ನಿಯಂತ್ರಣಕ್ಕೆ ಒಳಪಡಬೇಕೆನ್ನುವುದು ಪಾಕೀಸ್ತಾನದ ಅಭಿಪ್ರಾಯವಾಗಿತ್ತು.
೧೯೪೮ರಲ್ಲಿ ಜಮ್ಮು ಮತ್ತು ಕಾಶ್ಮೀರದ ಮೇಲೆ ಪಾಕ್ ಆಕ್ರಮಣ ನಡೆಸಿತು,…
ಭಾರತದ ಜೊತೆ ವಿಲೀನಗೊಳಿಸುವ ಒಪ್ಪಂದಕ್ಕೆ ಮಹಾರಾಜ ಹರಿಸಿಂಗ್ ಸಹಿಹಾಕಿದರು, ಭಾರತ ತನ್ನ ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿತು.
ಮೊಟ್ಟಮೊದಲ ಪರಮವೀರ ಚಕ್ರ ವಿಜೇತ ಸೂಮನಾಥ್ ಶರ್ಮಾ ಅವರಂತಹ ವೀರಕಲಿಗಳು ಪ್ರಾಣಕೊಟ್ಟು ಕಾಶ್ಮೀರವನ್ನು  ಉಳಿಸಿದರು.
ಆ ವೇಳೆಗಾಗಲೇ ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನ ಕಬಳಿಸಿತ್ತು. ಕೊನೆಗೂ ಪಾಕಿಸ್ತಾನದ ಮುನ್ನಡೆಯನ್ನು ತಡೆಯುವಲ್ಲಿ ಭಾರತ ಯಶಸ್ವಿಯಾಯಿತು. ಅದರ ಬೆನ್ನಲ್ಲೇ ಜವಹರಲಾಲ ನೆಹರು ಎಂಬ “ಮಹಾನ್’ ಪ್ರಧಾನಿ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿದ್ದಲ್ಲದೇ ವಿಶ್ವಸಂಸ್ಥೆಯ ಭದ್ರತಾ ಮಂಡಲಿಗೆ ದೂರು ನೀಡಿದರು. ಆಕ್ರಮಣ ನಡೆಸಿದ ಆರೋಪಕ್ಕೆ ಪಾಕಿಸ್ತಾನ ಗುರಿಯಾಯಿತು.  ಜಮ್ಮು ಮತ್ತು ಕಾಶ್ಮೀರದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಪಾಕಿಸ್ತಾನಕ್ಕೆ ತಾಕೀತು ಮಾಡಲಾಯಿತು. ಜನಮತಗಣನೆಯ ಮೇಲೆ ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಬೇಕೇ ಅಥವಾ ಪಾಕಿಸ್ತಾನಕ್ಕೆ ಸೇರಬೇಕೇ ಎಂಬ ನಿರ್ಣಯವನ್ನು ಯುಎನ್ ಐ ಅಂಗೀಕರಿಸಿತು. ಆದರೆ, ಪಾಕಿಸ್ತಾನವೇ ವಿಶ್ವಸಂಸ್ಥೆಯ ನಿರ್ಣಯವನ್ನು ಒಪ್ಪಿಕೊಳ್ಳಲಿಲ್ಲ. ಅಂತರಾಷ್ಟ್ರೀಯ ಸಮುದಾಯ ಈ ವಿಷಯವಾಗಿ ಯಾವುದೇ ನಿರ್ಣಯಾಕ ಪಾತ್ರವಹಿಸುವಲ್ಲಿ ವಿಫಲವಾಯಿತು.
ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಒಂದು ವಿವಾದಿತ ಗಡಿ ಪ್ರದೇಶ’ ಎಂದು ಕರೆಯಿತು.
ಹೌದು, ಈವತ್ತಿಗೂ ಅದು ವಿವಾದಿತ ಪ್ರದೇಶವೇ ಆಗಿದೆ. ಅಂದ ಮಾತ್ರಕ್ಕೆ ಕಾಶ್ಮೀರ ಈ ದೇಶದ ಅವಿಭಾಜ್ಯ ಅಂಗವಾಗದೇ ಹೋಗಿಬಿಡುತ್ತದೆಯೇ… ಇತಿಹಾಸದುದ್ದಕ್ಕೂ ಭಾರತದ ನಿಯಂತ್ರಣದಲ್ಲಿರುವ ಕಾಶ್ಮೀರ ಈ ದೇಶದ ಅಂಗವಲ್ಲದೇ ಮತ್ತೇನು?
ಇತಿಹಾಸದ ಅರಿವಿಲ್ಲದೇ ಕಾಶ್ಮೀರದ ಬಗ್ಗೆ ನಾಲಗೆ ಹರಿಯಬಿಡುತ್ತಿರುವ  ಅರುಂಧತಿ ರಾಯ್ ಅವರ ಮೂರ್ಖತನಕ್ಕೆ ಏನನ್ನಬೇಕು?
೧೯೪೮ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಣ್ವಸ್ತ್ರ ಪರೀಕ್ಷೆ ನಡೆಸಿ ದೇಶದ ಆತ್ಮಸ್ಥೈರ್ಯ ಹೆಚ್ಚಿಸಿದ ಕ್ಷಣದಲ್ಲೂ ಇನ್ನು ಮುಂದೆ ನಾನು ಭಾರತದ ನಾಗರಿಕಳೇ ಎಂಬರ್ಥದಲ್ಲಿ “I hereby declare myself an independent, mobile republic” ಎಂದು ಘೋಷಣೆ ಮಾಡಿಕೊಂಡಿದ್ದಾಕೆಗೆ ಭಾರತದ ಸಮಗ್ರತೆ, ಸಾರ್ವಭೌಮತೆ ಬಗ್ಗೆ ಮಾತನಾಡುವ ಹಕ್ಕಾದರೂ ಏನಿದೆ? …..ಭಾರತ ಅಣು ಪರೀಕ್ಷೆ ಮಾಡಿದ ಕೂಡಲೇ ತನ್ನ ಪಾಲಿಗೆ ಜಗತ್ತೇ ಸತ್ತುಹೋಯಿತು ಎಂದು ಔಟ್ ಲುಕ್ ಪತ್ರಿಕೆಯಲ್ಲಿ ಬರೆದುಕೊಂಡಿದ್ದ ಆಕೆಯಂತಹ ತಿಳಿಗೇಡಿಗಳನ್ನು ಏಕೆ ಸುಮ್ಮನೆ ಬಿಡಬೇಕು? The End of Imagination ಎಂಬ ಹೆಸರಿನಡಿ ಬರೆದ ಮಾರುದ್ದದ ಲೇಖನದಲ್ಲಿ  “The bomb is India. India is the bomb. Not just India, Hindu India” ಎಂದು ಭಾರತದ ಹಿಂದೂಗಳೆಲ್ಲ ಕೋಮುವಾದಿಗಳೆಂಬಂತೆ ಚಿತ್ರಿಸಿದ್ದ ಸಿರಿಯನ್ ಕ್ರಿಚ್ಚಿಯನ್ನಳಾದ ಅರುಂಧತಿ ರಾಯ್‌ರನ್ನು ಎಷ್ಟು ದಿನ ಸಹಿಸಿಕೊಳ್ಳಬೇಕು… ವಾಕ್ ಸ್ವಾತಂತ್ರ‍್ಯದ ಹೆಸರಿನಲ್ಲಿ ಆಕೆ ಬಾಯಿಗೆ ಬಂದಂತೆ ಮಾತನಾಡಬಹುದಾದರೆ ಕಾಶ್ಮೀರ ಉಳಿಸಿಕೊಳ್ಳಲು ಮೇಜರ‍್ ಸೋಮನಾಥ್ ಶರ್ಮಾ, ವಿಕ್ರಂ ಭಾತ್ರಾ, ಸುಧೀರ‍್ ವಾಲಿಯಾ ಮುಂತಾದ ವೀರ ಸೈನಿಕರು ಯಾಕಾಗಿ ಪ್ರಾಣತೆರಬೇಕಿತ್ತು…?
-ಎಂದು ಬರೆಯುತ್ತಾರೆ ಪ್ರತಾಪ ಸಿಂಹ. ಕಾಶ್ಮೀರದ ಇತಿಹಾಸವನ್ನೇ ತೆರೆದಿಡುವ ಅವರ ಒಂದು ಲೇಖನ ನಿಜಕ್ಕೂ ಅರ್ಥಪೂರ್ಣವಾಗಿದೆ. ಇಂದಿನ ಯುವ ಪೀಳಿಗೆ ತಿಳಿಯಲೇಬೇಕಾದ ಅಂಕಿ ಅಂಶಗಳು ಅದರಲ್ಲಿವೆ. ಇಂತಹ ಲೇಖನ ಕೊಟ್ಟ ಅವರಿಗೆ ಅಭಿನಂದನೆಗಳು.

ಅರುಂಧತಿ ರಾಯ್ ಅವರಿಗೆ ಇಂಥ ಸಲ್ಲದ  ಹೇಳಿಕೆಯಿಂದ ಅಗ್ಗದ ಪ್ರಚಾರ ಪಡೆಯುವ ಉದ್ದೇಶವಷ್ಟೇ… ಈ ದಿನದ ವಿ.ಕ.ದಲ್ಲಿ  ಅಭಿವ್ಯಕ್ತಿ    ಈಗಾಗಲೇ  ಮಹಾನ್  ಪ್ರಸಿದ್ದಿ ಪಡೆದಿರುವ ಈ  ಮಹಿಳೆಯ ಘನ  ಉದ್ದೇಶವೂ ಅದೇ ಎನ್ನುತ್ತದೆ  ಚೈತನ್ಯ ಹೆಗಡೆಯವರ ಲೇಖನ(31-11-10)

ಅಷ್ಟಕ್ಕೂ, ಅರುಂಧತಿ ರಾಯ್ ಹೇಳಿಕೆಯಿಂದ ನಮ್ಮ ಭಾರತಕ್ಕೇನೂ ಆಗಲಾರದು. ಅದು  ಇನ್ನಷ್ಟು ಬಲಿಷ್ಟವಾಗುತ್ತದೆ. ಕಾಶ್ಮೀರವನ್ನು ಉಳಿಸಿಕೊಳ್ಳಲು ಹೋರಾಡುತ್ತದೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s