ದೇಶ ಭಕ್ತಿಯ ಸಂಘ ಪರಿವಾರ ನಲಗದಂತೆ ಕಮಲ ಅರಳಿಸುವುದೇ…?


ನಮಸ್ತೇ ಸದಾ ವತ್ಸಲೇ ಮಾತೃ ಭೂಮಿ…
….ಹಿಂದು  ಭೂಮಿ ಸುಖಮ್ ವರ್ಜಿತೊ ಹಮ್‌
ಮಹಾ ಮಂಗಲೇ ಪುಣ್ಯಭೂಮಿ…..

-ಎಂದು ಪ್ರತಿದಿನ ಸಂಜೆ ಶಾಖೆಯಲ್ಲಿ ಕೊನೆಗೆ ವಂದನಾರ್ಪಣೆಯ ಪ್ರಾಥನೆ ಹಾಡುತ್ತಾ ಇದ್ದ  ಆ ದಿನಗಳನ್ನು ಮರೆಯಲಾದೀತೇ..
ನನ್ನ ಹದಿ ಹರೆಯದ ದಿನಗಳಲ್ಲಿ ನಾನೂ ಸಂಜೆಯ ಹೊತ್ತು ಆರ‍್.ಎಸ್.ಎಸ್. ಸಂಘಕ್ಕೆ ಹೋಗುತ್ತಿದ್ದವನೇ. ಸಂಘ ಪರಿವಾರದ ಆ ಶಿಸ್ತು, ದೇಶ ಭಕ್ತಿ ಮತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಅಭಿಮಾನ ಹೆಚ್ಚಿಸುವ ಪರಿ ಇಂದಿಗೂ ನಾನು ಮರೆಯಲಾರೆ. ನನ್ನ ಜೊತೆಯ ಹುಡುಗರು ಅಲ್ಲಿಗೆ ಹೋಗುತ್ತಿದ್ದುದು ಬಹುತೇಕ ಅಲ್ಲಿನ ಆಟಗಳು, ಹಾಗೂ ಶಾಖೆ ಮುಖ್ಯಸ್ಥರ ಮಾತುಗಳನ್ನು ಕೇಳಲಿಕ್ಕಾಗಿ.  ನಮ್ಮಲ್ಲಿ ಅದೆಷ್ಟು ಮಂದಿ ಕಟ್ಟಾ ಸ್ವಯಂಸೇವಕರಾದರೂ ಆನಂತರ ರಾಜಕೀಯಕ್ಕೂ ಪ್ರವೇಶಿಸಿದರೋ ನನಗೇನೂ ನೆನಪಿಲ್ಲ.  ಆದರೆ, ಆ ದಿನಗಳಲ್ಲಿ ನಾನು ಸಂಘಪರಿವಾರದಿಂದ ಕಂಡುಕೊಂಡ ನೀತಿ ಸಂಸ್ಕೃತಿಗಳೇನೆಂಬುದನ್ನಂತೂ ಮರೆಯಲಾರೆ.  ಶಾಖೆಯನ್ನು ನಡೆಸುತ್ತಿದ್ದ ಯುವಕರೆಷ್ಟೋ ಮಂದಿ ಬ್ರಹ್ಮಚಾರಿಗಳಾಗೇ ಉಳಿದಿದ್ದು ನಮ್ಮ ದೇಶ ಸೇವೆಗೋಸ್ಕರ ಎಂಬುದೂ ತಿಳಿದಿತ್ತು. ಅಂಥವರಲ್ಲಿ ಇದೇ ಸಂಘ ಪರಿವಾರದಿಂದ ಬಂದ ವಾಜಪೇಯಿ ಮೊದಲಿಗೆ ನೆನಪಾಗುತ್ತಾರೆ.
ಅಂಥ ಸಂಘ ಪರಿವಾರದಿಂದ ಬಂದ ರಾಜಕೀಯ ಪಕ್ಷವೇ ಜನಸಂಘ, ಆನಂತರದ ದಿನಗಳಲ್ಲಿ ಅದರ ಹೆಸರು ಬಿ.ಜೆ.ಪಿಯಾಗಿದೆ.

ಬಿ.ಜೆ.ಪಿ. ಎಂದರೆ ಪ್ರಜ್ಞಾವಂತರ, ನಿಷ್ಠಾವಂತರ ಹಾಗೂ ದೇಶಭಕ್ತರ ರಾಜಕೀಯ ಪಕ್ಷವೆಂದೇ ಜನ ಭಾವಿಸಿದ್ದ ಕಾಲವೊಂದಿತ್ತು… ಅಷ್ಟೇಕೆ, ಇತ್ತೀಚೆಗೆ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ  ಬಿ.ಜೆ.ಪಿ. ಅಧಿಕಾರಕ್ಕೆ ಬಂದಾಗ ಅದೇ ಭಾವನೆಯೇ ಇನ್ನೂ ಜನರಲ್ಲಿ ಮನೆ ಮಾಡಿತ್ತು.  ತಮ್ಮ ಸುಧೀರ್ಘ ರಾಜಕಾರಣದಲ್ಲಿ ಬಿ.ಜೆ.ಪಿಯಲ್ಲೇ ನಿಷ್ಠಾವಂತರಾಗಿದ್ದು, ಇದೀಗ ಬಿ.ಜೆ.ಪಿ ಅಧಿಕಾರಕ್ಕೆ ಬಂದಾಗ ಅದರ ನಾಯಕತ್ವ ವಹಿಸಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿಯಾದದ್ದು ನಮ್ಮ ಜನತೆ ಅವರಲ್ಲಿಟ್ಟಿದ್ದ ಪ್ರೀತಿ ವಿಶ್ವಾಸದಿಂದಲೇ..
ಆದರೆ, ಕೇವಲ ಎರಡೇ ವರ್ಷದ ಅಧಿಕಾರವಧಿಯಲ್ಲಿ ಆದದ್ದಾದರೂ ಏನು?
ಇಂದಿನ ವಿ.ಕ. (೨೩-೧೦-೨೦೧೦) ಪ್ರತಾಪ ಸಿಂಹ ಅವರ ಅಂಕಣ ಲೇಖನದ ಕೆಲವು ಮುಖ್ಯ ಅಂಶಗಳನ್ನಿಲ್ಲಿ ಪಟ್ಟಿ ಮಾಡಿದ್ದೇನೆ-

* ಮತದಾರರು ಕಾಂಗ್ರೇಸ್ ಜೆಡಿ ಎಸ್ ೬೦ ವರ್ಷ ಮಾಡಿದ್ದೇನು? ಅವರಿಗೆ ಅಧಿಕಾರ ಬಿಟ್ಟು ಕೊಡಬೇಕಾ ಎಂದು ಮುಲಾಜಿಲ್ಲದೆ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದರು…..ಈಗಂತೂ ಪರಿಸ್ಥಿತಿ ಹದಗೆಟ್ಟಿದೆ… ನಿತ್ಯವೂ ಜನರ, ಎದುರಾಳಿಗಳ ಮುಖ ನೋಡಬೇಕಾದವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು, ಅವರು ತಲೆ ಮರೆಸಿಕೊಂಡು ಓಡಾಡುವಂತಾಗಿದೆ. ಕಾಂಗ್ರೇಸ್ ಜೆಡಿಎಸ್ ನವರಿದ್ದಾಗ ನೂರಿನ್ನೂರು ರೂಪಾಯಿಯಲ್ಲಿ ಮಾಡಿಸಿಕೊಳ್ಳಬಹುದಾಗಿದ್ದ ಸರಕಾರಿ ಕೆಲಸಗಳು ಸಾವಿರ ರೂ. ಬಿಚ್ಚಿದರೂ ಆಗದಂತ ಸ್ಥಿತಿಗೆ ಹೋಗಿವೆ. ಬಿಜೆಪಿಯವರು ಕೊಳ್ಳೆ  ಹೊಡೆಯುವುದಕ್ಕೇ ನಿಂತಿದ್ದಾರೆ ಎಂದು ಮತ ಹಾಕಿದವರೇ ಹೇಳುತ್ತಿದ್ದಾರೆ. ಈ ದೇಶದಲ್ಲಿ ಭ್ರಷ್ಟಚಾರದ ಬೀಜ ಬಿತ್ತಿದವರು ಕಾಂಗ್ರಸಿಗರಾದರೂ ಯಾವ ಪರಿ ಭ್ರಷ್ಟಾಚಾರ ಮಾಡ ಬಹುದು ಎಂಬುದನ್ನು ತೋರಿಸಿಕೊಡುತ್ತಿರುವುದು ಮಾತ್ರ ಬಿಜೆಪಿ.
*  ಇಷ್ಟಾಗಿಯೂ ಜನರ ಮಧ್ಯೆಯೆ ಇರುವ, ನಿತ್ಯವೂ ಪಕ್ಷದ-ಸಂಘದ ನಿಷ್ಠಾವಂತರ ಮನೆಗೆ ಊಟಕ್ಕೆ ಹೋಗುವ, ಊರೂರುಗಳಲ್ಲಿ ಶಾಖೆ ನಡೆಸುವ ಆರೆಸ್ಸೆಸ್ಸಿಗೆ ಈ ಯಾವ ಅಂಶಗಳೂ ಅರಿವಿಗೆ ಬಂದಿಲ್ಲವೇ..?….
* ಅಷ್ಟಕ್ಕೂ ನೀತಿನಿ ಗಡ್ಕರಿ ಎಂಬ ಮುಖಪರಿಚಯವೇ ಇಲ್ಲದ ವ್ಯಕ್ತಿಯನ್ನು ಏಕಾಏಕಿ ಬಿಜಿಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ಸಾಮರ್ಥ್ಯ ಸಂಘ ಪರಿವಾರಕ್ಕಿದೆ ಎನ್ನುವುದಾದರೆ, ರಾಜ್ಯ ಬಿಜೆಪಿ ಸರಕಾರಕ್ಕೆ ಕಿವಿ ಹಿಂಡುವುದಕ್ಕೂ ಆಗುವುದಿಲ್ಲವೇ..?
* ಹಾಗಾದರೆ, ಬಿಜೆಪಿ ಸರಕಾರವನ್ನು ಟೀಕಿಸುವ ಪರಂಪರೆಯೇ ಸಂಘ ಪರಿವಾರದಲ್ಲಿಲ್ಲವೇ ಎಂದು ಯೋಚಿಸ ಹೋದರೆ ಗುಜರಾತ್ ನರೇಂದ್ರ ಮೋದಿಯವರು ಕಣ್ಣಿಗೆ ಬರುತ್ತಾರೆ. ಸಂಘಪರಿವಾರದಿಂದಲೇ ಹೋಗಿ ಇವತ್ತು ಜನಪ್ರಿಯ ಮುಖ್ಯ ಮಂತ್ರಿ ಅಷ್ಟೇ ಅಲ್ಲದೇ ರಾಷ್ಟ್ರೀಯ ಸ್ತರದ ನಾಯಕರಾಗಿ ಬೆಳದಿರುವವರು ಮೋದಿ.  ಸಂಘ ಪರಿವಾರ ಪ್ರತಿಪಾದಿಸುವ ಹಿಂದುತ್ವದ ಬಗ್ಗೆ ಅಚಲ ಶ್ರದ್ಧೆ ಇರುವ ಬಿಜೆಪಿಗರನ್ನು ಪಟ್ಟಿ ಮಾಡಲು ಹೋದರೆ ನರೇಂದ್ರ ಮೋದಿ ಅಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ವರ್ಚಸ್ಸು ಹೊಂದಿರುವವರು. *

….ಇಂಥ ಮೋದಿ ಈಗೊಂದು ಎರಡು ವರ್ಷಗಳ ಹಿಂದೆ ರಸ್ತೆ ಪಕ್ಕ ನಿಂತಿರುವ ನಿರ್ಮಾಣಗಳ ಪೈಕಿ ಮುಸ್ಲಿಮರಿಗೆ ಸೇರಿದ್ದ ಜಾಗಗಳಿದ್ದವು.  ಹಾಗೆಯೇ ೯೦ ದೇಗುಲ ಗುಡಿಗಳೂ
ನೆಲಸಮವಾದವು.  ಅವುಯಾವುವೂ ಚಾರಿತ್ರಿಕ ಮಹತ್ವ ಹೊಂದಿರುವಂಥವಲ್ಲ ಎಂಬುದು ನಿರ್ವಿವಾದ.
(ಹೀಗೆ ಚಾರಿತ್ರಿಕ ಮಹತ್ವ ಹೊಂದಿರದವು ಇನ್ನೆಷ್ಟೋ…, ಮೊದಲೇ ಇಕ್ಕಟ್ಟಾದ ರಸ್ತೆ ನಟ್ಟ ನಡುವೆಯೇ  ಮುಸ್ಲಿಮರ ಸಮಾಧಿ ಮತ್ತು ಹಿಂದೂಗಳ ಮಾರಮ್ಮನ ಗುಡಿಗಳೆಷ್ಟೋ ನಮ್ಮ ಕರ್ನಾಟಕದಲ್ಲೇ ಇವೆಯಲ್ಲ!  ಉದಾಹರಣೆಗೆ ಹಾಸನಕ್ಕೆ ಬನ್ನಿ ಹೊಸಲೈನ್ ಅಡ್ಡ ರಸ್ತೆಗಳ ತಿರುವು ಜೈನ ಬಸದಿಯ ಅತಿ ಕಿರಿದಾದ ರಸ್ತೆಗಳಲ್ಲಿ  ಅಷ್ಟೇಕೆ ಬೆಂಗಳೂರಿನ ಸಿ.ಟಿ. ಮಾರುಕಟ್ಟೆಯ ಫುಟ್ ಪಾತ್ ನಲ್ಲೇ ಒಮ್ಮೆ ಸಂಚರಿಸಿ ನೀವು ನೋಡಬೇಕು.. ನಮ್ಮ ದೇವರುಗಳು ಈ ಸ್ಥಿತಿಯಲ್ಲಿ ಇಕ್ಕಾಟ್ಟಾದ ರಸ್ತೆಗಳ ಗಲೀಜು ಗದ್ದಲಗಳ ಫುಟ್ ಪಾತ್ ಗಳಲ್ಲೇ ಕುಳಿತಿರುವುದನ್ನು ನೋಡಿದಾಗ ಹಿಂದೂಗಳಾದ ವರಿಗೆ “ಅಯ್ಯೋ ನಮ್ಮ ದೇವರುಗಳೇ…’’ ಎನಿಸದಿರದು. ಇನ್ನು ಇಲ್ಲಿಗೆ ಭೇಟಿ ನೀಡುವ ವಿದೇಶಿಯರಿಗೆ  ನಮ್ಮ ದೇವರುಗಳ ಬಗ್ಗೆ ಏನನ್ನಿಸಬೇಡಾ…)

* ಆ ಸಂದರ್ಭದಲ್ಲಿ ವಿಎಚ್ ಪಿ, ಬಜರಂಗ ದಳ ಹಾಗೂ ಇನ್ನಿತರ ಕೇಸರಿ ಸಂಘಟನೆಗಳು ಅದ್ಯಾವ ಪರಿ ಆಕ್ರೋಶ ವ್ಯಕ್ತಪಡಿಸಿದವು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ತಲೆ ಎತ್ತಿದ ಗುಡಿಗಳೂ ಹಿಂದುತ್ವದ ಹೆಗ್ಗುರುತುಗಳು ಎಂಬಂತೆ ಗುಜರಾತ್ ನ ವಿಎಚ್ ಪಿ ರಾಜ್ಯ ಕಾರ್ಯದರ್ಶಿ ರಾಂಚೋಡ್ ಭಾರದ್ವಾಜ್ ಅವರು, ಮೋದಿ ಧ್ವಂಸಗೊಳಿಸುತ್ತಿರುವುದು ದೇಗುಲಗಳನ್ನಲ್ಲ, ಹಿಂದುತ್ವವನ್ನು ಎಂದು ಅಬ್ಬರಿಸಿದ್ದರು….
* ನರೇಂದ್ರ ಮೋದಿಯವರ ಬದ್ಧತೆಯನ್ನು ಪ್ರಶ್ನಿಸುವುದಕ್ಕೆ ಸಂಘಕ್ಕೆ ಧ್ವನಿ ಇದೆ.  ಆದರೆ, ಕರ್ನಾಟಕ ರಾಜ್ಯ ಸರಕಾರದ ಧೋರಣೆ ಬಗ್ಗೆ ಒಂದು ಹೇಳಿಕೆ ನೀಡುವುದಕ್ಕೂ ಅದಕ್ಕೆ ಶಕ್ತಿಯಿಲ್ಲವೇ….?
* ಇವತ್ತು ಆರೆಸ್ಸೆಸ್ ಪ್ರಮುಖರು ಹೇಳಬೇಕು, ಯಾವುದು ಸಂಸ್ಕೃತಿ ಅಂತ? ದೇಶ ಭಕ್ತಿ-ಸಂಘ ಪರಿವಾರ ಎಂದರೆ ಕೆಜಿಗೆಷ್ಟು ಎಂದು ಕೇಳುವ ಮನಸ್ಥಿತಿ ಇರುವವರನ್ನು ಖರೀದಿಸಿ ತಂದು ಕಮಲ ಅರಳಿಸುವುದೇ…
* ಯಾವ ಶಿಸ್ತಿನ ಮೂಲಕವೇ ಐಡೆಂಟಿಟಿ ಗಳಿಸಿಕೊಳ್ಳಲಾಗಿತ್ತೋ ಅದರ ತಲೆ ಮೇಲೇ ಹೋಡೆಯುವಂತೆ ಸಂಪುಟದ ಶಾಸಕರು ವ್ಯಭಿಚಾರ ವಿನೋದಾವಳಿಯಲ್ಲಿ ನಿರತರಾಗಿರುವುದನ್ನು ಸುಮ್ಮನೇ ನೋಡಿಕೊಂಡಿರುವುದೇ… ಈ ಹಂತದಲ್ಲಾದರೂ ಸಂಘ ಪರಿವಾರ ಮಾತನಾಡಬೇಕು.

-ಎಂದು ಬರೆಯುತ್ತಾರೆ ಪತ್ರಕರ್ತ ಪ್ರತಾಪ ಸಿಂಹ. ಅವರು ತಮ್ಮೀ ಲೇಖನದ ಮೂಲಕ  ರಾಜ್ಯದ ರಾಜಕೀಯ ಅನಾಚಾರ-ಅಸ್ತಿರತೆಯ ಬಗ್ಗೆ  ಎಚ್ಚರಿಸಿದ್ದಾರೆ. ತನ್ನ ಹೊಕ್ಕುಳು ಬಳ್ಳಿಯಾದ ಬಿಜೆಪಿಯನ್ನ ಸಂಘಪರಿವಾರ ಎಚ್ಚರಿಸದಿದ್ದರೆ ರಾಷ್ಟ್ರದ ಇತರ ಸಮಸ್ಯೆಗಳ ಬಗ್ಗೆ ಮಾತನಾಡುವ ಹಕ್ಕನ್ನೇ ಸಂಘ ಕಳೆದು ಕೊಳ್ಳ ಬೇಕಾಗುತ್ತದೆ ಎನ್ನುತ್ತಾರೆ.
ಇಂತಹ ಲೇಖನ ನೀಡಿ ಶಾಸಕರಾದವರೂ ಮತ್ತು ಜನಸಾಮಾನ್ಯರೂ  ಚಿಂತಿಸುವಂತೆ ಮಾಡಿರುವ ಪ್ರತಾಪ ಸಿಂಹ ಅವರಿಗೆ ಧನ್ಯವಾದಗಳು.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s