ಪ್ರೀತಿ ಮತ್ತು ಅರ್ಥ


ಯೌವನದ ಹುಮ್ಮಸ್ಸಿನಲ್ಲಿ ಕನಸು ಕಾಣುವುದು, ಗರ್ವದಿಂದ ಬೀಗುವುದು ಸಹಜ.  ಯಾವುದೋ ಆಂತರಿಕ ಸೆಳೆತವು ಇಬ್ಬರನ್ನೂ ಒಂದುಗೂಡಿಸುತ್ತದೆ. ಪ್ರೀತಿ ಎಂಬುದು ಕೇವಲ ಬಾಹೀಕ ಕಾರಣಗಳಿಂದಲೆ ಬರುವುದಿಲ್ಲ.  ಹಾಗೆ ಬಂದರೆ ಅದು ಪ್ರೀತಿ ಎಂಬ ಭ್ರಮೆಯಷ್ಟೇ. ಯಾಕೆಂದರೆ,ಅದು ಪ್ರೇಮವಾಗಿ ಪರಿವರ್ತಿತವಾಗಲಾರದು. ಪ್ರೇಮ ಪ್ರೇಮಾನುಬಂಧವಾದರೆ, ಪ್ರೀತಿ ಸಂಬಂಧವಾಗಿರುತ್ತದೆ. ಅಂತೆಯೇ ಕೇವಲ ಕಾಮಪರವಾದ ಮೋಹಕ್ಕೆ ಆಂತರಿಕ ಸೆಳೆತವೆಂಬುದಿಲ್ಲ, ಅದು ಕೇವಲ ಬಾಹೀಕ ಆಕರ್ಷಣೆಯನ್ನೇ ಅವಲಂಬಿಸಿರುತ್ತದೆ.
*** *** ***
ಅಂತರಾಳದ ಅರ್ಥಗಳನ್ನೆಲ್ಲ ಶಬ್ದಗಳಲ್ಲಿ ಸೆರಹಿಡಿಯುವುದು ಸುಲಭ ಸಾಧ್ಯವಲ್ಲ. ಆದರೆ, ಈ ವಿಶ್ವದ ಉದ್ದಗಲಕ್ಕಿಂತ ವಿಸ್ತಾರವಾಗಿ ಅರ್ಥವಿಸಿಕೊಳ್ಳಬಲ್ಲ ಶಕ್ತಿಯೊಂದಿದ್ದರೆ, ಅದು ಆತ್ಮಶಕ್ತಿಯಲ್ಲದೇ ಬೇರೆ ಇನ್ನೇನು? ಆತ್ಮಶಕ್ತಿ ಯಾವಾಗಲೂ ಆಂತರ್ಯಕ್ಕೆ ಹತ್ತಿರವಾಗಿರುತ್ತದೆ.

*** *** ***

ಮನಸ್ಸಿನ ಭಾವನೆಗಳು.
ಮನಸ್ಸಿನ ಭಾವನೆಗಳು ನೂರಾರಾದರೆ, ಅವುಗಳಿಗೆ ಪ್ರತಿಕ್ರಿಯೆ ಸಾವಿರಾರು. ಅರ್ಥ ಮತ್ತು ವಿಪರೀತಾರ್ಥಗಳೋ  ಲೆಕ್ಕವಿಲ್ಲದಷ್ಟು!  ಆದರೇನು! ಏನೆಲ್ಲ ಭಾವನೆಗಳ ಮೂಲವೆಲ್ಲ ಒಂದೇ ಆದಾಗ ಮಾವತೆಯಿಂದ ಕೂಡಿದ ಬದುಕು ಸಾಕಾರವಾಗುತ್ತದೆ. ಬುವಿ ಸ್ವರ್ಗವಾಗುತ್ತದೆ!

**** **** ****

ಸಿಕ್ಕುವುದೆಷ್ಟೆಂಬುದಕ್ಕಿಂತಲೂ ದಕ್ಕಿಸಿಕೊಂಡದ್ದೆಷ್ಟೆಂಬುದೇ  ಲಾಭ!  ದಕ್ಕಿಸಿಕೊಳ್ಳುವುದು ಸುಲಭವಿದ್ದರೂ ದೊರೆಯದಂತೆ ಮಾಡುವುದೇ ಮೋಸ! ಹಾಗೆ ದಕ್ಕಿಸಿಕೊಳ್ಳದಾದಾಗ ಉಂಟಾಗುವುದೇ ನಷ್ಟ!
ಹೀಗೆ ಲಾಭ-ನಷ್ಟಗಳ ನಡುವೆಯೆ ಬದುಕಿನಾ ಪ್ರೀತಿಯಲ್ಲೇ ಇರಿಸುಮುರಿಸು.  ಕ್ಷಣ ಭೃಂಗುರವಾಗದಿರಲಿ ಕನಸು! ಮತ್ತೆ ಪ್ರಕೃತಿ ಸಹಜ ಸ್ನೇಹದಲಿ ಮೊಳೆತು ಮೊಗ್ಗಾಗಿ ಅರಳಲಿ ಮನಸ್ಸು; ಅದೇ ಹೂವಿನಾ ಸುಂದರತೆಯ ಸೊಗಸು!  ಆಗ ಹೊಸ ಪರಿಮಳದಲಿ ಹೊಸ ಹುಮ್ಮಸ್ಸು! ಹೊಸ ಬೆಳಕಿನಲ್ಲಿ ಹೊಸ  ಅರ್ಥ ಕಾಣುವುದು. ನಿತ್ಯನೂತನ ಬದುಕು!

ಹೌದು, ಮನಸ್ಸೇನು ಮುಗಿಲಾಚೆಗೂ ಹಾರಿಬಿಡುತ್ತದೆ. ಮನಸ್ಸಿನೊಂದಿಗೆ ಮೈಯನ್ನೂ ಹೊಂದಿಸಿಕೊಂಡು ಸಾಗಿದರೇನೆ ನಿಯಂತ್ರಣವೇನೆಂಬುದು ಗೊತ್ತಾದೀತು! ಆಗ ನಿಜಕ್ಕೂ ಮುಗಿಲ ಮೋಹ ಹಾರಿ ಹೋಗುತ್ತದೆ; ಬದುಕಿನಲ್ಲಿ ಒಂದು ಮಜಲಾದರೂ ಸಿಗುತ್ತದೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s