ಬದಲಾಗುತ್ತಿರುವ ಜೀವನ ದೃಷ್ಟಿ


ನಾಲ್ಕು ಗೋಡೆಗಳ ಮಧ್ಯೆಯೆ ಮಧ್ಯಮ ವರ್ಗದ ಜೀವನ ದೃಷ್ಟಿ.
ಅದವರ ಸ್ವಂತ ಮನೆಯೇ ಇದ್ದೀತು; ಗುಡಿಸಿ ಸಾರಿಸಿ
ಅಂಗಳದಲಿ ರಂಗವಲ್ಲಿ ಇಟ್ಟರಷ್ಟೇ ಕಾಣವುದು ಶೋಭೆ!
ಹಣದ ಮುಗ್ಗಟ್ಟಿಗೆ ಇಲ್ಲಿಲ್ಲ ಕೊರತೆ.
ಇಲ್ಲಿರುವುದೇ ಬಿಟ್ಟೂ ಬಿಡದ ಸಾಮಾಜಿಕ ನಿರ್ಬಂಧಗಳ ಒರತೆ.
ದೇವರೂ ತಲೆಬಾಗದಿದ್ದರೂ ಪೂಜೆ ಪುನಸ್ಕಾರಗಳ ನಡುವೆ
ಎಲ್ಲೆಲ್ಲೂ ಶೀಲ ಚಾರಿತ್ರ್ಯಗಳ ಮಾತು ಮಾತೇ…

**** **** ****

ಎಷ್ಟೋ ಮೇಲ್ವರ್ಗದ ಮನೆಯಲ್ಲಿ ಹಾಗಲ್ಲ;
ಇಲ್ಲಿ ಬಹುತೇಕ ಹಣವೇ ಎಲ್ಲವೂ ಎಲ್ಲಾ.
ದಿನ ಬೆಳಗಾಗುವುದರಲ್ಲಿ ಹೊಸದೊಂದು ಜೀವನ ದೃಷ್ಟಿ.
ಪೂರ್ವ-ಪಶ್ವಿಮಗಳಾಚೆಗೂ ವಿಸ್ತರಿಸುತ್ತದೆ;ಜೀವನ ಶೈಲಿ.
ಮನೆಯೋ ಬಂಗಲೆಯೋ ಅದಕೊಂದು ಹೊಸ ರೂಪ-ಹೊಸ ಕಳೆ.
ಅಂಗಳದಲಿ ನಿಲ್ಲುವವು ರಥಗಳ ಸಾಲು.
ಹಣದ ಹೊಳೆಯಲ್ಲಿ ಯಾವೊಂದು ಕಟ್ಟುಪಾಡೂ ಇನ್ನಿಲ್ಲವಾಗುವುದು.
ಹೌದು,ದೇವಾನು ದೇವತೆಗಳೂ ಏಕೋ ತಲೆದೂಗಿ ನಗುವರಿಲ್ಲಿ…!
***** **** *****

ಮನುಷ್ಯನ ಜೀವಮಾನದುದ್ದಕ್ಕೂ ಮಾನಸಿಕ ಮತ್ತು  ಭೌತಿಕ ಗುಣಗಳ ಸಂಘರ್ಷ.
ಮನಸ್ಸನ್ನು ಗೆದ್ದವನೇ ಮಹಾನುಭಾವ/ ಗೆದ್ದವಳೆ ಮಹಾಮಾತೆ.
ಭೌತಿಕ ಗುಣಗಳೆಲ್ಲವೂ ಅವನ/ಅವಳ ಕೈ ವಶ.  ಸೋಲೆಂಬ ಸೊಲ್ಲಿಲ್ಲ.
ಸುಖ ಎಂಬುದರ ಅರ್ಥ ಬೇರೆಯೆ ಇದೆ ಅಲ್ಲಿ.
ಹಣದ ಹುಚ್ಚು ಹಂಬಲಕಿಂತ ಮಿಗಿಲಾಗಿ ದೊರಕುವ ಶಾಂತಿಯಿದೆ ಅಲ್ಲಿ.
**** **** *****

ವಿಚಿತ್ರ-ವಿಲಕ್ಷಣ ಬದಲಾವಣೆಗಳು:
ಆಧುನಿಕ ಜಗತ್ತಿನಲ್ಲಿ ಅದರಲ್ಲೂ ನಮ್ಮ ದೇಶದಲ್ಲಿ ಆಗುತ್ತಿರುವ ವಿಚಿತ್ರ-ವಿಲಕ್ಷಣ ಬದಲಾವಣೆಗಳು.
ಯುವ ಜನಾಂಗದ ಮೇಳೆ ಬೀರುತ್ತಿರುವ ಪರಿಣಾಮಗಳು,  ಅದರಿಂದಾಗಿ ಉಂಟಾಗುತ್ತಿರುವ
ನೈತಿಕ ಅಧಃಪತನದ ದೃಶ್ಯ ಹಿರಿಯರನ್ನು ಕಂಗೆಡಿಸುತ್ತಿದೆ. ಸಂಪ್ರದಾಯ, ಪರಂಪರೆ,
ಸಾಮಾಜಿಕ ಕಟ್ಟುಪಾಡು, ಅವಜ್ಞೆಗೀಡಾಗಿವೆ.. ಹಳೆಯ ಮೌಲ್ಯಗಳನ್ನು ಅಲಕ್ಷಿಸುವ ಯುವಜನಾಂಗವು
ಹೊಸ ಮೌಲ್ಯಗಳು ಹೇಗಿರಬೇಕೆಂಬ ಪರಿಕಲ್ಪನೆಯನ್ನೇ ಹೊಂದಿಲ್ಲ; ಅಷ್ಟೇಕೆ ಅದರ ಬಗ್ಗೆ ತಲೆ ಕಡೆಸಿಕೊಂಡಿಲ್ಲ.
**** **** ****
ಹೊಸತು-ಹಳತರ ಸಮನ್ವಯ
ಹಾಗಾದರೆ , ಆಧುನಿಕ ಪ್ರಪಂಚದಲ್ಲಿ ಹೊಸ ಜೀವನ ಮೌಲ್ಯಗಳ ಹುಟ್ಟುಬೇಡವೇ..?
ಅವು ಶಾರೀರಿಕ ಸಂಬಂಧಗಳು ಮತ್ತು ಭೌದ್ಧಿಕ ಅವಶ್ಯಕತೆಗಳ ಜೊತೆಗೆ ಎಂತಹ ಸಂಬಂಧ ಹೊಂದಿರುತ್ತವೆ?
ವೈಭೋಗದ ಸುಖ ಬೇರೆ.  ಶರೀರ ಸುಖ ಬೇರೆ.  ಶರೀರ ಸುಖದಲ್ಲಿ ವೈವಿಧ್ಯತೆ ಕಾಣುವ ಹುಚ್ಚು.
ಅಂಥ ಸುಖಕ್ಕಾಗಿಯೆ ಹಣ ಸೂರೆಯೊಡೆವ ಹುಡುಕಾಟ ಹಾಗೂ ಹೆಣ್ಣು/ಗಂಡುಗಳ ಹುಚ್ಚಾಟವಷ್ಟೇ…?!
ನಾಳೆಯ ಗೊಡವೆಯೇಕೆ? ಎಂಬುದೂ ಲೆಕ್ಕಾಚಾರವೇ..? ಏರು ಪ್ರಾಯದಲ್ಲೇ ಎಣಿಸಲಾರದಷ್ಟು
ಹಣ, ಕುಣಿಸುವಷ್ಟು ಯೌವನ ಸುಲಭವಾಗಿ ಕೈಗೆಟುಕಿದಾಗ ಇನ್ನೇನು..!
ಆದರೆ, ಇವೆಲ್ಲವನ್ನೂ ಮೀರಿ ನಿಂತ ಯುವಜನಾಂಗದ ಇನ್ನೊಂದು ಗುಂಪೊಂದು ಇಲ್ಲೇ ಇದೆಯಲ್ಲ…
ಹೊಸತು ಹಳತು ಎರಡರ ಸಮನ್ವಯದಲ್ಲಿ ಹೆತ್ತವರು, ಹಿರಿಯರೆಲ್ಲರೂ ಬೆರಗೊಡೆವಂತೆ
ತಮ್ಮ ತನ ಉಳಿಸಕೊಂಡೇ ಮುಂದುವರೆದು ಭೇಷ್ ಎನಿಸಿಕೊಂಡವರಿವರು.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s