ಆನಂದಮಯ ಈ ಜಗದ ಹೃದಯ


ಬದುಕು ಭವಿಷ್ಯ
ಜೀವನ ಕಲಿಸುವ ಪಾಠ: ಇಲ್ಲಿ ಕಲಿತಷ್ಟೂ ಕಲಿಯುವುದಿದೆ.
ಆಯುಷ್ಯದ ಕೊನೆಯವರೆಗೂ ಇರುತ್ತದೆ.  ಆದರೆ, ಯಾವುದನ್ನು ಕಲಿಯಬೇಕೆಂಬುದೇ ಮುಖ್ಯ.
ಯಾವುದರಿಂದ ಬೆಳೆಯಬೇಕೆಂಬುದೇ ನಿತ್ಯ. ಕಲಿತು ಬೆಳೆಯುತ್ತಿರಬೇಕು. ಬೆಳೆದಂತೆಲ್ಲ ಕಲಿಯುತ್ತಿರಬೇಕು.
ತಮ್ಮೊಳಗೆ ಹೊರಗೆ ಇರುವ ಅಸುರರನ್ನು ಎದುರಿಸುತ್ತ ನಡೆಯಬೇಕು.
ಇಲ್ಲಿ ದುಃಖ ದುಮ್ಮಾನ ಹಾಗೂ ದುರಂತಗಳಿವೆ, ನಲಿವು ಗೆಲವು, ನಗೆಯೊಲವು,
ಹಾಸ್ಯದ ತಿಳಿಗೊಳದಲಿ ಮೀಯುವುದು, ಎಲ್ಲವನ್ನೂ ನಿರ್ವಿಕಾರ ಚಿತ್ತದಿಂದ ಸ್ವೀಕರಿಸುವುದು,
ಬದುಕನ್ನು ಅರ್ಥೈಸಿಕೊಳ್ಳವುದಿದೆ; ಅರಗಿಸಿಕೊಳ್ಳುವುದಿದೆ. ಅಂಥವರಿಗೆ ಮಾತ್ರ ಇಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ.
**** **** ****
ಆನಂದಮಯ ಈ ಜಗದ ಹೃದಯ
ವೈಜ್ಞಾನಿಕ ಮತ್ತು ತಾಂತ್ರಿಕ ಅನ್ಷೇಷಣೆಗಳ ಉಕ್ಕಿನ ಹಿಡಿತಕ್ಕೆ ಸಿಲುಕಿದ
ಈ ಸಾಮಾಜಿಕ ಜನಜೀವನದ ಪ್ರತಿ ಅಂಗವೂ ಯಾಂತ್ರಿಕವಾಗುತ್ತಿದೆ.
ತನ್ನ ಸರಳತೆ ಸಮಷ್ಟಿ ಭಾವದ ಕೊರತೆಯಿಂದ ನಲುಗುತ್ತಿದೆ.
ಹೌದು, ವಿಜ್ಞಾನ ತಂತ್ರಜ್ಞಾನ ಮನುಷ್ಯನನ್ನು ನಿರ್ಭಾವುಕನನ್ನಾಗಿಸುತ್ತಿದೆ.
ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯ ಹೆಚ್ಚಳ ಅದನ್ನು ಸಾಬೀತುಪಡಿಸುತ್ತಿದೆ.
ಆದರೇನು!  ಇನ್ನೊಂದೆಡೆಯಿಂದ  ಸಾತ್ವಿಕತೆಯ ಪ್ರಭಾವೀ ವಲಯ ತನ್ನ ಅಸ್ತಿತ್ವವನ್ನು ಸಾರುತ್ತಿದೆ.
ಈ ಜಗದ ಹೃದಯದಲ್ಲಿನ್ನೂ ಮಾನವೀಯತೆ ಇದೆ ಅದು ಆನಂದಮಯ ಎಂಬುದನ್ನು ಆಗಾಗ್ಗೆ ಎತ್ತಿ ತೋರಿಸುತ್ತಲೇ ಇದೆ.
**** **** ****

ಬದುಕಿನ ನಿತ್ಯನೂತನ ಅರ್ಥಗಳು
ಇಲ್ಲಿ ನೋವು ಎಂಬುದು ಆಘಾತಕ್ಕೆ ಕಾರಣವಾಗುವಂತೆಯೆ ಬದುಕಿಗೆ ನಿತ್ಯನೂತನ ಅರ್ಥಕಲ್ಪಿಸಬಲ್ಲದು.
ಮತ್ತೆ ಬದುಕನ್ನು ಪ್ರೀತಿಸುತ್ತ ಇಹ ಸಂಬಂಧಗಳೊಡನೆ ಹೊಂದಿಕೆಯಾಗಿ ಬಿಡಿಸಲಾರದ ಬೆಸುಗೆಯಾಗಬಹುದು.
ಇದು ಸೃಷ್ಟಿ ನಿಯಮ. ನಿರಂತರ ಚಲನಶೀಲ ಜೀವನಗತಿಯ ಆಯಾಮ.  ಅದನ್ನು ಮನಗಂಡಷ್ಟೂ ನಾವುಗಳು ಕಷ್ಟಸಹಿಷ್ಣುಗಳು.
**** **** **** ****
ಆದರೇನು! ಎಷ್ಟೋ ಸಂದರ್ಭಗಳಲ್ಲಿ ಬದುಕಿಗೆ ದಯೆ ಎಂಬುದಿಲ್ಲ  ಎನಿಸುವುದೂ ನಿಜವೆ.
ಹೌದು, ಬದುಕು ನಿರ್ದಯಿ ಶಿಕ್ಷಕ.  ಶಿಕ್ಷಕನಾದವನಿಗೆ ತನ್ನ ವಿದ್ಯಾರ್ಥಿಗಳಮೇಲೆ ಪ್ರೀತಿ ಇರುವುದಿಲ್ಲವೇ..?
ಹಾಗೆ ಪ್ರೀತಿ ಇರುವುದರಿಂದಲೇ ತನ್ನ ಶಿಷ್ಯನನ್ನು ಕೆಲವೊಮ್ಮೆ ದಂಡಿಸುತ್ತಲೆ ಅವನನ್ನು ಸರಿದಾರಿಗೆ ತರಲು ಬಯಸುತ್ತದೆ; ಬದುಕು.
ಬದುಕಿನ ಈ ಶಿಸ್ತಿನ ದಂಡನೆ ಅರಿತವನು ಮತ್ತೆ ಮತ್ತೆ ಬದುಕುತ್ತಾನೆ; ಬದುಕನ್ನು ಪ್ರೀತಿಸುತ್ತಾನೆ.
**** **** ****
ದಿನವೂ ಎಷ್ಟೋ ಆಸೆ-ಆಕಾಂಕ್ಷೆಗಳನ್ನು ಹುಟ್ಟಿಸುವಂತೆ ಅಷ್ಟೇ ಗೆಲವು ನಲವಿನಲ್ಲಿ ಮಿಂಚುವಂತೆ ಮಾಡುವ  ಈ ಬದುಕು,
ಮತ್ತಷ್ಟೇ ಸೋಲು ನಿರಾಸೆಗಳಲ್ಲಿಯೂ, ಹತ್ತಿರದಲ್ಲಿ ಕಂಡ ಸಾವು ನೋವುಗಳಲ್ಲಿಯೂ ತಮ್ಮ ಬದುಕಿನ ನಿರ್ಧಾರಗಳನ್ನು
ಬದಲಿಸುವಂತೆ ಮಾಡಿಬಿಡುತ್ತದೆ.  ಯಾಕೆಂದರೆ, ಒಬ್ಬರ ಸೋಲು, ಇನ್ನೊಬ್ಬರ ಗೆಲುವಿಗೆ ಸೋಪಾನವಾಗುತ್ತದೆ.
ಒಬ್ಬರ ಅರ್ಥಹಿನ ಬದುಕು ಇನ್ನೊಬ್ಬರ ಬದುಕಿಗೆ ಅರ್ಥಪೂರ್ಣತೆ ತಂದುಕೊಡುತ್ತದೆ;
ಹೊಸ ಬೆಳಕಿನಲ್ಲಿ ಹೊಸತಿರುವಿನಲ್ಲಿ ಹೊಸ ಚೈತನ್ಯವನ್ನೇ ನೀಡುತ್ತದೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s