ಹೊರದೇಶಕ್ಕೆ ಹೋಗ ಬಯಸುವ ಯವಕರ ಮನಸ್ಸಿನ “ದ್ವಂದ್ವ”


ಹೊರದೇಶಕ್ಕೆ ಹೋಗ ಬಯಸುವ  ಯವಕರ  ಮನಸ್ಸಿನ “ದ್ವಂದ್ವ”

ನಾನು ಇತ್ತೀಚೆಗೆ ಓದಿ ಮೆಚ್ಚಿಕೊಂಡ “ಮನು” ಅವರ “ಕಥೆಯೊಳಗಿನ ಕಥೆ”- ಒಂದು ಸಾಹಿತ್ಯಕ ಆತ್ಮ ಕಥನದಲ್ಲಿ ಸಾಹಿತಿ ಮನು(ಪಿ.ಎನ್.ರಂಗನ್ ಇವರು ಇಂಜಿನಿಯರ್ ಆಗಿದ್ದು  ಆ ಕ್ಷೇತ್ರದಲ್ಲಿಯೆ ಕೆಲಸ ಮಾಡುತ್ತ, ಉನ್ನತ ಹುದ್ದೆಯಲ್ಲಿದ್ದೂ, ಎಂ.ಎ.ಪದವಿಯನ್ನೂ ಗಳಿಸಿ, ಹಿಂದಿ, ಇಂಗ್ಲೀಷ್, ಸಂಸ್ಕೃತ ಮತ್ತು ಶಾಸನ ಶಾಸ್ತ್ರ ಇವುಗಳಲ್ಲಿ ಪ್ರಾವಿಣ್ಯತೆ ಪಡೆದ ಘನ ವಿದ್ವಾಂಸರು). ಇಂಗ್ಲೀಷ್ ಭಾಷೆಯ ಮೇಲೆ ಅವರು ಪಡೆದ ಹಿಡಿತವೇನೆಂಬುದರ ಬಗ್ಗೆ ಅವರ ಮಾತುಗಳಲ್ಲೇ ಕೇಳಿ-

“ಅಷ್ಟೇಕೆ ಇಂಗ್ಲೀಷಿನ ತವರು ಮನೆಯಾದ ಇಂಗ್ಲೆಂಡಿನಲ್ಲಿ ನಮ್ಮ ಇಂಗ್ಲೀಷನ್ನು ಗೌರವಿಸತ್ತಾರೆ. ಲಂಡನ್, ಬಿರ್ಮಿಂಗ್ ಹ್ಯಾಮ್, ಬ್ರಿಸ್ಟಲ್ ಗಳಲ್ಲಿ ಓಡಾಡುವಾಗ ನಮ್ಮ ರೀತಿಯ ಭಾಷೆಯಿಂದ ನನಗೆ ಗೌರವ ಸಿಕ್ಕಿದೆ. ಷೆಫೀಲ್ಡ್ ನ ಒಂದು ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅವರು ‘ಯು ಸ್ಪೀಕ್ ಸೋ ವೆಲ್’  ಎಂದು ಶ್ಲಾಘಿಸಿದರು. “I cannot say the same thing of British English these days” ಎಂಬ ದಾಷ್ಟ್ಯದ ಮಾತುಗಳನ್ನಾಡಿದ್ದೆ”

ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾಗುವುದೇ ನಮ್ಮ ಯುವಜನಾಂಗದಲ್ಲಿ ಬಹಳ ಹಿಂದಿನಿಂದಲೂ ಕಂಡು ಬಂದಿದೆ.  ಈಗಂತೂ ಟಿ.ವಿ.ಸೆಟಲೈಟ್ ಹಾಗೂ ಸಿನಿಮಾ ಜೀವನ ಶೈಲಿಯ ಪ್ರಭಾವವೇ.  ಇಂಥ ಆಕರ್ಷಣೆಯೆ ಅವರಿಗೆ ಹೆಚ್ಚು ಮನಮೋಹಕವಾಗುತ್ತಿದೆ. ಇಂಡಿಯನ್ ಇಂಗ್ಲೀಷ್ ಎಂದರೆ ಅಸಡ್ಡೆ  ಪಡುವವರೇ  ಬಹಳ ಮಂದಿ ನಮ್ಮ ನಡುವೆ ಇದ್ದಾರೆ! ಯಾಕೆಂದರೆ, ನಮ್ಮ ಸಂಸ್ಕೃತಿಯಲ್ಲಿನ ಸಾಮಾಜಿಕ ಕಟ್ಟು ಪಾಡುಗಳು, ಪಾಶ್ಚಿಮಾತ್ಯರ ಸ್ವಚ್ಛಂದ ಪ್ರವೃತ್ತಿಯ ನಡೆ ನುಡಿಗಳು, ಸ್ವೇಚ್ಛ ಜೀವನ ಪದ್ಧತಿಗಳು.  ಅವುಗಳ ಅನುಕರಣೆಗೆ ಮಾರುಹೋಗುವವರೇ ಬಹಳ(ಕೆಲವರು ಈ ಮಾತಿಗೆ ಅಪವಾದ; ಅವರನ್ನು ಮೆಚ್ಚಲೇ ಬೇಕಲ್ಲ). ಸಹಜವಾಗಿ ಎಂಥ ಯುವ ಮನಸ್ಸುಗಳೂ ತತ್ ಕ್ಷಣ ದ್ವಂದ್ವದಲ್ಲಿ ಸಿಲುಕಿ ಬಹಳ ಒದ್ದಾಡುವುದೂ ಇದೆ.

ನಮ್ಮ ಯುವಕರು ವಿದೇಶಕ್ಕೆ ಹೋಗುತ್ತಿರುವುದೂ ಅಲ್ಲೇ ನೆಲೆಸಲಿಚ್ಛಿಸುವುದರ ಬಗ್ಗೆ , ಯವಕರ  ಮನಸ್ಸಿನ “ದ್ವಂದ್ವ” ದ  ಬಗ್ಗೆ ಮನು ಅವರು ಆತ್ಮ ಕಥನದಲ್ಲಿ ಮುಂದುವರೆದು ಹೀಗೆ ಬರೆಯುತ್ತಾರೆ- ”ತಂಡೋಪ ತಂಡವಾಗಿ  ವಿದೇಶಕ್ಕೆಹೋಗುವವರಿಗೆ ಎಲ್ಲವೂ ಹೂವಿನಂತೆ ಮೃದುವಾಗಿರುವುದಿಲ್ಲ ಎಂದು ನನಗೆ ತಿಳಿಸಬೇಕಾಗಿತ್ತು. ಹಾಗಾಗಿ ಅಮೆರಿಕೆಗೆ ಹೋದವರ ಪರಿಸ್ಥಿತಿಗಳನ್ನು ಕಲೆಹಾಕಿ, ನಕಾರಾತ್ಮಕವಾದ ಮಿನಿ ಕಾದಂಬರಿ “ದ್ವಂದ್ವ”ವನ್ನು ಬರೆದೆ. ಅದನ್ನು ಓದಿದ ಗೆಳೆಯ ಶೇಷಗಿರಿರಾಯರು ನನಗೆ ಕಣ್ಣೀರು ತಡೆಯಲಾಗಲಿಲ್ಲ.” ಎಂದರು.

-ಅವರ ಈ ಮಿನಿ ಕಾದಂಬರಿ ಪ್ರಕಟವಾಗಿ ನಾಲ್ಕಾರು ತಿಂಗಳನಂತರ ಪುಣೆಯಲ್ಲಿದ್ದ ಅವರ ಮನೆಗೆ ಹಿರಿಯರೊಬ್ಬರು ಫೋನ್ ಮಾಡಿ ನಿಮ್ಮನ್ನು ಕಾಣಬೇಕು ಅಂತಿದ್ದೀನಿ ಎಂದಾಗ, ಮನು ಅವರು ತಮ್ಮ ಮನೆಯ ವಿಳಾಸವನ್ನು ಅವರಿಗೆ ತಿಳಿಸಿದರು.

ಆ ಹಿರಿಯರು ಅವರ ಮನೆಗೆ ಬಂದರು. ಉಭಯ ಕುಶೋಲೋಪರಿಯನಂತರ, ತಮ್ಮ ಏಕೈಕ ಪುತ್ರ ಟಾಟಾ ಇನ್ಸ್ ಟಿಟ್ಯೂಟ್ ನಲ್ಲಿ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಡಿಗ್ರಿ ಮಾಡಿದವ, ಅಮೆರಿಕೆಗೆ ಹೋಗುತ್ತೇನೆಂದ. ಅವನು ಹೋಗುವುದು ನಮಗೆ ಇಷ್ಟವಿರಲಿಲ್ಲ, ಅವನು ಇಲ್ಲೇ ಏನಾದರೂ ಉದ್ಯೋಗ ದೊರಕಿಸಿಕೊಂಡು ನಮ್ಮ ಕಣ್ಮುಂದೆ ಇರಬೇಕೆಂಬುದೇ ನಮ್ಮ ಆಸೆ. ಹೋಗಲೇ ಬೇಕೆಂದು ಹಠ ಹಿಡಿದ. ಪಾಸ್ ಪೋರ್ಟ್ ವೀಸಾ ಎಲ್ಲ ಸಿದ್ಧತೆ ಮಾಡಿಕೊಂಡ. ಇನ್ನೇನು ವಾರದಲ್ಲಿ ಅಮೆರಿಕೆಗೆ ಹಾರುತ್ತಾನೆ ಎಂದಿದ್ದಾಗ, ಅಪ್ಪ ನಾನು ಹೋಗುವುದಿಲ್ಲ, ನಾನು ಇಲ್ಲೇ ಇರುತ್ತೇನೆ ಎಂದ. ನನಗೆ ತುಂಬಾ ಸಂತೋಷವಾಯಿತು. ಅವನು ಕಾರಣವನ್ನೂ ಹೇಳಲಿಲ್ಲ. ನಾನೂ ಕೇಳಲಿಲ್ಲ.

ಇದಾಗಿ ಸುಮಾರು ದಿನಗಳ ಮೇಲೆ ನಾನು ಪುಣೆಗೆ  ಕೆಲಸದ ನಿಮಿತ್ತ ಹೋಗಬೇಕೆಂದಾಗ, ಅಪ್ಪಾ ಅಲ್ಲಿ ಮನು ಅವರನ್ನು ಕಂಡು ಭೇಟಿ ಮಾಡಿ ಬಾ ಎಂದ. ನನಗೆ ಆಶ್ಚರ್ಯವಾಯಿತು. ಯಾರೋ ಅವರು ಎಂದು ಕೇಳಿದಾಗ, ಇಲ್ಲಿದೆ ನೋಡಿಕೋ ಎಂದ ತುಷಾರವನ್ನು ಕೈಯಲ್ಲಿಟ್ಟ.  ತುಷಾರದ  ಆ ಕಾಪಿ ಬಿಡಿಸಿ ನೋಡಿದೆ.  ನಾನೂ ದ್ವಂದ್ವ ಓದಿದೆ. ಮನು ಅವರಿಗೆ ಕೃತಜ್ಞತೆ ತಿಳಿಸಲು ಬಂದೆ ಎಂದು ಹೇಳುತ್ತಾರೆ ಆ ಹಿರಿಯರು.

ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾಗುವುದೇ ನಮ್ಮ ಯುವಜನಾಂಗದಲ್ಲಿ ಬಹಳ ಹಿಂದಿನಿಂದಲೂ ಕಂಡು ಬಂದಿದೆ.  ಈಗಂತೂ ಟಿ.ವಿ.ಸೆಟಲೈಟ್ ಹಾಗೂ ಸಿನಿಮಾ ಜೀವನ ಶೈಲಿಯ ಪ್ರಭಾವವೇ.  ಇಂಥ ಆಕರ್ಷಣೆಯೆ ಅವರಿಗೆ ಹೆಚ್ಚು ಮನಮೋಹಕವಾಗುತ್ತಿದೆ. ಯಾಕೆಂದರೆ, ನಮ್ಮ ಸಂಸ್ಕೃತಿಯಲ್ಲಿನ ಸಾಮಾಜಿಕ ಕಟ್ಟು ಪಾಡುಗಳು, ಪಾಶ್ಚಿಮಾತ್ಯರ ಸ್ವಚ್ಛಂದ ಪ್ರವೃತ್ತಿಯ ನಡೆ ನುಡಿಗಳು, ಸ್ವೇಚ್ಛ ಜೀವನ ಪದ್ಧತಿಗಳು.  ಅವುಗಳ ಅನುಕರಣೆಗೆ ಮಾರುಹೋಗುವವರೇ ಬಹಳ(ಕೆಲವರು ಈ ಮಾತಿಗೆ ಅಪವಾದ; ಅವರನ್ನು ಮೆಚ್ಚಲೇ ಬೇಕಲ್ಲ). ಸಹಜವಾಗಿ ಎಂಥ ಯುವ ಮನಸ್ಸುಗಳೂ ತತ್ ಕ್ಷಣ ದ್ವಂದ್ವದಲ್ಲಿ ಸಿಲುಕಿ ಬಹಳ ಒದ್ದಾಡುವುದೂ ಇದೆ.

ನಮ್ಮ ಯುವಕರು ವಿದೇಶಕ್ಕೆ ಹೋಗುತ್ತಿರುವುದೂ ಅಲ್ಲೇ ನೆಲೆಸಲಿಚ್ಛಿಸುವುದರ ಬಗ್ಗೆ , ಯವಕರ  ಮನಸ್ಸಿನ “ದ್ವಂದ್ವ” ದ  ಬಗ್ಗೆ ಮನು ಅವರು ಆತ್ಮ ಕಥನದಲ್ಲಿ ಮುಂದುವರೆದು ಹೀಗೆ ಬರೆಯುತ್ತಾರೆ- “ತಂಡೋಪ ತಂಡವಾಗಿ  ವಿದೇಶಕ್ಕೆಹೋಗುವವರಿಗೆ ಎಲ್ಲವೂ ಹೂವಿನಂತೆ ಮೃದುವಾಗಿರುವುದಿಲ್ಲ ಎಂದು ನನಗೆ ತಿಳಿಸಬೇಕಾಗಿತ್ತು. ಹಾಗಾಗಿ ಅಮೆರಿಕೆಗೆ ಹೋದವರ ಪರಿಸ್ಥಿತಿಗಳನ್ನು ಕಲೆಹಾಕಿ, ನಕಾರಾತ್ಮಕವಾದ ಮಿನಿ ಕಾದಂಬರಿ “ದ್ವಂದ್ವ”ವನ್ನು ಬರೆದೆ. ಅದನ್ನು ಓದಿದ ಗೆಳೆಯ ಶೇಷಗಿರಿರಾಯರು ನನಗೆ ಕಣ್ಣೀರು ತಡೆಯಲಾಗಲಿಲ್ಲ.” ಎಂದರು.

“ ‘ದಂದ್ವ’  ಈ ಪದವೇ ಹೇಳುವಂತೆ ಜೀವನದ ದ್ವಂದ್ವವನ್ನು ಪ್ರತಿ ಬಿಂಬಿಸುತ್ತದೆ. ಇಲ್ಲಿ ಒಂದು ಕಡೆ ಅಮೆರಿಕೆಯಂತಹ ವೈಭವೋಪೇತ ಜೀವನದ ಸೆಳೆತ, ಇನ್ನೊಂದು ಕಡೆ ಆ ಬ್ರಹ್ಮಾಂಡ ಸಾಗರದಲ್ಲಿ ನಮ್ಮ ತನವನ್ನು ಕಳೆದುಕೊಳ್ಳುವ ಭಯ, ವೈಯಕ್ತಿಕ ಸಂಬಂಧಗಳು ಏನಾಗುತ್ತವೆಯೋ ಎಂಬ ಶಂಕೆ-ಈ ಎಲ್ಲ ಹೋರಾಟಗಳು, ನನ್ನ ಕಳೆದು ಹೋದ ಸ್ನೇಹಿತನನ್ನು ಕೇಂದ್ರವಾಗಿಟ್ಟುಕೊಂಡು ಇದನ್ನು ಚಿತ್ರಿಸಿದ್ದೆ.” ಎನ್ನುತ್ತಾರೆ ಮನು. .

ಅವರ ಈ ಮಿನಿ ಕಾದಂಬರಿ ಪ್ರಕಟವಾಗಿ ನಾಲ್ಕಾರು ತಿಂಗಳನಂತರ ಪುಣೆಯಲ್ಲಿದ್ದ ಅವರ ಮನೆಗೆ ಹಿರಿಯರೊಬ್ಬರು ಫೋನ್ ಮಾಡಿ ನಿಮ್ಮನ್ನು ಕಾಣಬೇಕು ಅಂತಿದ್ದೀನಿ ಎಂದಾಗ, ಮನು ಅವರು ತಮ್ಮ ಮನೆಯ ವಿಳಾಸವನ್ನು ಅವರಿಗೆ ತಿಳಿಸಿದರು.

ಮನು ಅವರು ಹೇಳುತ್ತಾರೆ- ” ಇದನ್ನು ಇಷ್ಟು ವಿವರವಾಗಿ ಬರೆಯುವುದಕ್ಕೆ ಕಾರಣ ಸಾಹಿತ್ತ ಬೀರಬಲ್ಲ ಪ್ರಭಾವ ಎಷ್ಟು ಅಗಾಧವಾದದ್ದು ಎಂದು ತಿಳಿಸಲು. ಒಬ್ಬ ಮನುಷ್ಯನನ್ನು ಅದು  ಮನುಷ್ಯನನ್ನಾಗಿಸಬಹುದು, ಇಲ್ಲ ದಾನವನನ್ನಾಗಿಯೊ ಮಾಡಬಹುದು. ಒಬ್ಬನಿಗೆ ಜೀವ ಕೊಡಬಹುದು. ಧೈರ್ಯ ಕೊಡಬಹುದು, ಅಂಗವಿಕಲನನ್ನು ಸತ್ವಶಾಲಿ ಯುವಕನನ್ನಾಗಿ ಮಾಡ ಬಹುದು. ಹಾಗೆಯೆ ಜೀವಿಗೆ ಪ್ರಾಣಭಯವನ್ನೂ ತರಬಹುದು. ಹಾಗಾಗಿ ಸಾಹಿತ್ಯ ಕಾರನ ಕೆಲಸ ಬಹಳ ಗುರುತರ ವಾದದ್ದು.”

ನನಗನಿಸುತ್ತದೆ- ಟಿ.ವಿ.,ಸಿನಿಮಾ ಈ ದೃಶ್ಯ ಮಾಧ್ಯಮಗಳಂತು ಅತ್ಯಂತ ಪ್ರಭಾವೀ ಮಾಧ್ಯಮಗಳು. ಇವುಗಳು ಇಂದು ಬಹುತೇಕ ಮಾಡುತ್ತಿರುವುದೇನು ? ಇವುಗಳನ್ನೇ ಪುಟ್ಟ ಮಕ್ಕಳಾದಿಯಾಗಿ ಯುವಕರು,ವೃದ್ಧರೂ ಸಹ ನೋಡುತ್ತ ಓದುವುದನ್ನೇ ಬಿಟ್ಟಿರುವವರೂ ಬಹಳ ಮಂದಿ ಇದ್ದಾರೆ. ಹೀಗೆ ನಮ್ಮ ಸಮಾಜದ ಮೇಲೆ ಅವುಗಳು ಬೀರುವ ಪ್ರಭಾವ ಅದೆಷ್ಟು ಪರಿಣಾಮಕಾರಿಯಾಗಬಹುದು? ತಮಗೂ ಗುರುತರ ಜವಬ್ದಾರಿ ಇದೆ; ಹಣ ಮಾಡುವುದೇ ಮುಖ್ಯವಲ್ಲ ಎಂಬುದನ್ನು ಅವುಗಳ ನಿರ್ಮಾತೃ-ನಿರ್ದೇಶಕರುಗಳು ಅರಿತು ಕೊಳ್ಳುವರೇ.

ಮುಂದುವರೆದು ಮನು ಹೇಳುತ್ತಾರೆ- ನಂತರದ ದಿನಗಳಲ್ಲಿ ನಾನು ಬಹಳಷ್ಟು ಘಟನೆಗಳನ್ನು ಪ್ರಸಂಗಗಳನ್ನು ಅಮೆರಿಕೆಯಲ್ಲಿ ನೆಲೆಸಿರುವವರ ವಿಷಯದಲ್ಲಿ ಕೇಳಿದ್ದೆ. ಇದೆಲ್ಲದರೆ ಕೇಂದ್ರ ಬಿಂದು ಮತ್ತದೇ “ದ್ವಂದ್ವ” ನಾವು ಭಾರತೀಯರೇ, ಅಥವಾ ಅಮೆರಿಕನ್ನರೇ, ನಾವು ಭಾರತೀಯ ಸಂಸ್ಕೃತಿಗೆ ಬೆಲೆಕೊಡಬೇಕೇ? ಅಮೆರಿಕೆಯ ಸಂಸ್ಕೃತಿಗೇ ಬೆಲೆ ಕೊಡಬೇಕೇ? ಈ ದ್ವಂದ್ವ ವಿಶೇಷವಾಗಿ ಭಾರತೀಯ ಸಂಜಾತ ಮಕ್ಕಳಲ್ಲಿ ಕಂಡು ಬರುತ್ತಿತ್ತು. ಎನ್ನುವ ಅವರು ಹಾಗಾಗಿ ಅದನ್ನೇ ಕೇಂದ್ರವಾಗಿಟ್ಟು ಕೊಂಡು ದ್ವಂದ್ವ ದ ಎರಡನೆಯ ಮತ್ತು ಮೊರನೆಯ ಭಾಗವನ್ನೂ ಬರೆದರು.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s