ಮದಿರೆಯೂ ಅಧಿಕಾರವೂ…


ರಾಜ್ಯದಲ್ಲಿ ಸಂಪೂರ್ಣ ಪಾನ ನಿರೋಧ ಜಾರಿ ಬಗ್ಗೆ ಸದನದಲ್ಲಿ ಚರ್ಚೆ:-

“ಮಠಾಧಿ ಪತಿಗಳು ಮಧ್ಯದ ವಿರುದ್ಧ ನಡೆಯುತ್ತಿರುವ ಚಳುವಳಿ ನೇತೃತ್ವ ವಹಿಸಿರುವುದು ಒಳ್ಳೆಯ ಸೂಚನೆ”

“ಮನುಷ್ಯನಿಗೆ ನಿಷೆ ಅಥವಾ ನಿಷಾ ಬರುವುದು ಮದ್ಯದಿಂದಲೇ ಅಲ್ಲ ಕೆಲವೊಮ್ಮೆ ಮಠಾಧಿಪತಿಗಳು ಮಾಡುವ ಬೋಧನೆಗಳು, ಧರ್ಮ, ಭಾಷೆ, ಜಾತಿ ಯಾವುದು ಬೇಕಾದರೂ ಆಗಬಹುದು ನಿಷೆ ಏರಿಸುತ್ತದೆ.”
“ಕೆಲವರಿಗೆ ಅಧಿಕಾರದಿಂದ ಅಮಲು ಪಿತ್ತ ಏರುತ್ತದೆ”

“ಅಧಿಕಾರದ ಪಿತ್ತವನ್ನು ಕಡಿಮೆ ಮಾಡಿಕೊಳ್ಳಲಿ ಎಂದೇ ಮಂತ್ರಿಗಳಿಗೆ  ಮತ್ತು ಇತರ ಅಧಿಕಾರದಲ್ಲಿರುವವರ ಕೈಗೆ ಜನರು ನಿಂಬೆ  ಹಣ್ಣು ಕೊಡುವುದರ  ಹಿಂದಿನ ಉದ್ದೇಶ” ಎಂದರು ಸಭಾಧ್ಯಕ್ಷರು.

“ಹಿಟ್ಲರ‍್, ಚರ್ಚಿಲ್ ಅವರು ಮದ್ಯ ಸೆವನೆ ಮಾಡುತ್ತಿರಲಿಲ್ಲ. ಆದರೆ, ಇಂಥವರು ಮಾನವ ಕುಲದ ಮೇಲೆ ಮಾಡಿರುವ ಆಘಾತಗಳನ್ನು ಮರೆಯಬಾರದು ಎಂಬುದಷ್ಟೇ ನನ್ನ ಮಾತಿನ ಮೂಲ ಉದ್ದೇಶ” ಎಂಬ ವಿವರಣೆ ಸಭಾಧ್ಯಕ್ಷರಿಂದ.

“ಕೆಲವರಿಗೆ   ತಾನು ಗಂಡು ಅಥವಾ ಹೆಣ್ಣು ಎಂಬುದರಿಂದಲೂ ಅಮಲು ಏರುತ್ತದೆ” ಮಹಿಳಾ ಸದಸ್ಯರೊಬ್ಬರಿಂದ.

“ಚರ್ಚೆ ಬೇರೆ ದಾರಿ ಹಿಡಿಯುತ್ತಿದೆ….ಮದ್ಯಪಾನದಿಂದ  ಸಮಾಜದ ಮೇಲೆ ಕುಟುಂಬಗಳ ಮೇಲೆ ನೈತಿಕವಾಗಿ ಆರ್ಥಿಕವಾಗಿ ಆಗುತ್ತಿರುವ ದುಪ್ಪರಿಣಾಮಗಳ ಬಗ್ಗೆ ಸೀಮಿತವಾಗಿರಲಿ ಚರ್ಚೆ…
ಇನ್ನೊಂದು ಸಂದರ್ಭದಲ್ಲಿ ಬೇಕಾದರೆ ಅಧಿಕಾರದಿಂದ ಅಮಲು ಬರುತ್ತದೆಯೋ ಇಲ್ಲವೋ ಬಂದರೆ ಯಾವ ಪಕ್ಷದವರಿಗೆಷ್ಟು ಬರುತ್ತದೆಎ? ಎಂಬುದರ ಬಗ್ಗೆ ವಿವರವಾಗಿ ಚರ್ಚಿಸೋಣ” ಎಂದರು ಇನ್ನೊಬ್ಭ ಮಹಿಳಾ ಸದಸ್ಯೆ.

ಹೀಗೆ ಹಿಂದೆಲ್ಲ ಸದನದಲ್ಲಿ ಹಾಸ್ಯರಸದಿಂದ ಕೂಡಿದ ಆರೋಗ್ಯಕರ ಚರ್ಚೆ  ನಡೆಯುತ್ತಿತ್ತು. ಈಗ..? ಅಬ್ಬರ ಅಟ್ಟಹಾಸಗಳಿಂದ… ಕೆಲವೊಮ್ಮೆ ಪೇಪರ‍್ -ವೈಟ್ ಮುಂತಾದ ಏನೆಲ್ಲ ಟೇಬಲ್  ಮೇಲಿನ  ಅಸ್ತ್ರಗಳಿಂದ  ನಡೆಯುವುದೇ  ಒಂದು  ವಿಕೋಪವೋ ಅಪಹಾಸ್ಯವೋ.. ಏನೋ ಆಗಿರುತ್ತದೆ…

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s