ಹಳೆಯ ತತ್ವಗಳಿಗೆ ಬದ್ಧತೆ ಬೇಕಿಲ್ಲ….


  • ಇಂದಿನ ಮನುಷ್ಯ ಹಳೆಯ ತತ್ವಗಳಿಗೆ ಬದ್ಧನಲ್ಲ. ಹೊಸ ತತ್ವಗಳ  ಗೊಡವೆಯೂ ಅವನಿಗೆ ಬೇಕಿಲ್ಲ. ಆತನಲ್ಲಿ ಜೀವನೋತ್ಸಾಹ ಕಾಣೆಯಾಗುತ್ತಿದೆ, ಜೀವನೋತ್ಸಾಹವೆಂದರೆ ಹಣವಿದ್ದಾಗಲಷ್ಟೇ. ಎಷ್ಟೋ ವೇಳೆ ಹಣವೂ ಅವನನ್ನು ಅತೃಪ್ತನನ್ನಾಗಿಯೆ  ಇಟ್ಟಿರುತ್ತದೆ.
  • ಯುವಕ  ಯುವತಿಯರು ಹಣದ ಹಿಂದೇ  ಬೀಳುತ್ತ, ದೈಹಿಕ ಸೆಳೆತಗಳಿಗೆ ಆಕರ್ಷಿತರಾಗುತ್ತ ಯಾವೊಂದು  ಕಟ್ಟುಪಾಡುಗಳು ನಿರ್ಬಂಧಗಳಿಲ್ಲದ ಅನಿರ್ಬಂಧ ಸ್ಥಿತಿಯಲ್ಲಿಯೆ  ಬದುಕಿನ ಏನೆಲ್ಲ  ಸುಖವನ್ನೂ ಅನುಭವಿಸುವ ಹಂಬಲವೇ ಅವರಲ್ಲಿ  ಇರುವಂತೆ  ಕಾಣಸಿಗುತ್ತಿದೆ.
  • ವಿದ್ಯಾವಂತರಲ್ಲಿ ಅತಿ ಹೆಚ್ಚು ಸಂಬಳ ಪಡೆಯುವವರು, ಹೆಚ್ಚು ಹೆಚ್ಚು ಸೌಲಭ್ಯ ಪಡೆಯುವವರು, It is not how much you earn, it is how much you enjoy ಎಂಬ ವಾದಕ್ಕೆ ಕಟ್ಟು ಬಿದ್ದಿದ್ದಾರೆ! ಗಂಡು  ಹೆಣ್ಣುಗಳ ಸಖ್ಯ, ಫಾಸ್ಟ್ ಫುಡ್ ಆಕರ್ಷ್‌ಣೆ,  ನನ್ನ  ಬದುಕು  ನನ್ನ  ಭವಿಷ್ಯ ಯಾರೆಲ್ಲರ ಹಂಗೇಕೆ…..? ಮಾತೇಕೆ ಕೇಳ ಬೇಕೆಂಬ ದಾಷ್ಟ್ಯ  ತಂದೆ ತಾಯಿಗಳು  ಗುರು ಹಿರಿಯರ ಬಗ್ಗೆ ಅನಾದರಣೆ ಎಲ್ಲೆಡೆ ಎದ್ದು ತೋರುತ್ತದೆ.
  • ಯಾವೊಂದು ಆಳವಾದ ವಿಚಾರಗಳು, ಗಾಢವಾದ ಚಿಂತನೆಗಳು, ಆದರ್ಶಗಳು ಇಂದಿನ ಯುವ ಜನಾಂಗಕ್ಕೆ ಹಿಡಿಸಲಾರವು.
  • ಸುತ್ತಲ್ಲರೂ ಹಣವನ್ನು ಸೌಂದರ್ಯವನ್ನು ಕೊಳ್ಳೆ ಹೊಡೆಯುತ್ತಿರುವಾಗ ಬೇಕು ಬೇಕಾದರೀತಿಯಲ್ಲಿ ಮಜಾಉಡಾಯಿಸುತ್ತಿರುವಾಗ, ತಾನೊಬ್ಬನೆ  ನಾಳೆಗಾಗಿ ತಾಳ್ಮೆ ಸಂಯವನ್ನು,  ಯಾವುದೋ ತಾತ್ವಕತೆಯನ್ನೂ ಕಟ್ಟುಪಾಡುಗಳನ್ನೂ ಅನುಸರಿಸುವ ವ್ಯವಧಾನವನ್ನು ಕಳೆದುಕೊಂಡಿದ್ದಾರೆ.
  • ಯುವಕರಲ್ಲಿ ಹೀಗೆ ಎನ್ಜಾಯ್ ಮೆಂಟ್ ಎನ್ನುವಂಥ ಲೈಫ್ ಸ್ಟೈಲ್, ಹಿಂದೆಂದೂ ಕಿಂಚಿತ್ ಇರಲೇ ಇರಲಿಲ್ಲವೆಂದಲ್ಲ. ಈ ಇಪ್ಪತ್ತೊಂದನೇ ಶತಮಾನದಲ್ಲಿ ಹಣದ ಪ್ರಭಾವಗಳು, ಜನರ ನಡುವೆ  ಕಂಡು  ಬರುವ ಭಾವನೆಗಳು,  ಬದುಕಿನ ರೀತಿ ನೀತಿಗಳು ಹಿಂದೆಂದಿಗಿಂತಲೂ ವಿಭಿನ್ನವಾಗಿವೆ ಹಾಗೂ ವಿಛಿದ್ರಕಾರಿಯೂ ಆಗತೊಡಗಿವೆ ಎಂಬುದೂ ಗತ ಜೀವನದ ಉದಾಹರಣೆಗಳಿಂದ ಕಂಡುಬರುತ್ತದೆ.
  • ಹೀಗೆ ಡ್ಯಾಷಿಂಗ್ ನೇಚರ‍್ – ಸ್ವೇಚ್ಛೆಯಾಗಿ  ಹಾದಿ ಬಿಟ್ಟು ನುಗ್ಗುವ  ಯುವಸ್ವಭಾವಗಳ ಚಿತ್ರಣವನ್ನು, ನಮ್ಮ ಹಿರಿಯ ಸಾಹಿತಿಗಳ ಕೃತಿಗಳು ಮತ್ತು ಸಿನಿಮಾ ದೃಶ್ಯಮಾಧ್ಯಮಗಳೂ ಸಾಕಷ್ಟು ಬಂದಿವೆ. ಅವುಗಳಲ್ಲಿ ಕಾಣಸಿಗುವುದೆಲ್ಲ ಆದರ್ಶವೇ ಮೇಲುಗೈಯಾಗಿ ಪುಟ ಪುಟಗಳಲ್ಲಿ, ದೃಶ್ಯಮಾಧ್ಯಮದ ಫ್ರೇಂ ಫ್ರೇಂ ಗಳಲ್ಲಿ ಇರುವುದೂ ಕಂಡುಬರುತ್ತದೆ.

ಸರಿಮಾರ್ಗದ ಸ್ಪಷ್ಟನೆ ಆ ಹಿಂದಿನ ಕೃತಿಗಳಲ್ಲೂ ಇತ್ತು. ಇಂದಿನ ಕೃತಿಗಳಲ್ಲಿ ಅದೆಲ್ಲಿದೆ ? ಎಂದು ಹುಡುಕಬೇಕಾಗುತ್ತದೆ. ಅಂದು ಸಮಾಜ ಸುಧಾರಣೆಯ ಪ್ರಬಲ ಮಾಧ್ಯಮವಾಗಿದ್ದ ಸಿನಿಮಾ  ಇಂದು ಟಿ.ವಿ ಚಾನೆಲ್ ಗಳೂ ಸೇರಿದಂತೆ ಇಂಡಸ್ಟ್ರಿಯಾಗಿ ಹಣ ಮಾಡುವ ದಂಧೆಗಳಾಗಿ ಬಿಟ್ಟಿವೆ. ಅಲ್ಲಿ ನಟಿಸುವವರೂ ಕೂಡ ಕಲೆಗಾಗಿ ನಟಿಸುತ್ತಿರುವರೇ ಅಥವಾ ಕೇವಲ ಹಣಕ್ಕಾಗಿ “ತಮ್ಮದೆಲ್ಲವನ್ನೂ” ಜೋಜಿಗಿಟ್ಟಿರುವರೇ ಎಂದೇ ಭಾಸವಾಗುತ್ತದೆ…

ಹೀಗೆ ಹಾದಿಬಿಟ್ಟವರಲ್ಲಿ ಯುವಕ ಯುವತಿಯರಷ್ಟೇ ಇಲ್ಲ, ದೊಡ್ಡವರೆನಿಸಿಕೊಂಡ ಹಿರಿಯರೂ ರಾಜಕಾರಣಿಗಳೂ, ಅಧಿಕಾರಿಗಳೂ, ಹೆಸರಾಂತ ಪ್ರತಿಷ್ಠಿತರೂ ಇದ್ದಾರೆ.   ಇಂಥಜನಾಂಗದ ನಡುವೆ ಕೇಳುವವರೂ ಇದ್ದಾರೆ. ಎಲ್ಲದಕ್ಕೂ ಇತಿ ಮಿತಿ ಅರಿತು ನಡೆಯವವರೂ ಇದ್ದಾರೆ.  ಅಂಥವರನ್ನು ಅನ್ವೇಷಣೆ ಮಾಡಿ ಹುಡುಕುವುದೇ ಕಡುಕಷ್ಟವಾಗಿದೆಯಲ್ಲ…

ಅಷ್ಟಕ್ಕೂ ಕ್ಷಣಿಕ ಸುಖದ ಬೆಂಬತ್ತದೇ ಇರುವ ಮನುಷ್ಯನೇ ಇಲ್ಲ ಎನ್ನಬಹದು.  ವಯಸ್ಸಾದವರಲ್ಲೂ ಅಂಥವರನ್ನೂ ಕಾಣುತ್ತವಲ್ಲ… ಸ್ವಭಾವತಃ ಮನುಷ್ಯ ಪ್ರಾಣಿಯ ಅಭೀಪ್ಸೆ ಎಂದರೆ ಸುಖಬೋಗವೇ.  ಆತನಿಗೆ ಬೌತಿಕವಾದ ಐಷಾರಾಮೀ ಜೀವನ, ಲೈಂಗಿಕ ಸೌಖ್ಯ ಸಂಬಂಧಗಳು ನಿತ್ಯ ಕಾಡದೇ ಇರುವುದಿಲ್ಲ. ಹೇಳಬೇಕೆಂದರೆ ಇತ್ತೀಚಿನದ ಉದಾಹರಣೆಗಳಿಂದ ಅವು ಸನ್ಯಾಸಿಯನ್ನೂ ಕಾಡದೇ ಬಿಡಲರವಲ್ಲ.
ಅರ್ಥ ಮತ್ತು ಕಾಮ  ಎರಡರಲ್ಲೂ ಮೇಲುಗೈಯಾಗಿ ಎಲ್ಲ ಸುಖವೈಭೋಗಗಳಿಗೊಂದು ಇತಿಮಿತಿಯನ್ನೇ ಕಾಣದ ಶ್ರೀಮಂತ ವರ್ಗವೊಂದೆಡೆ…

ಬದುಕಿನಲ್ಲಿ “ಅರ್ಥ” ಹಾಗೂ ನೈತಿಕತೆ-ಅರ್ಥ ವನ್ನೇ ಹುಡುಕುತ್ತ ಐಹಿಕಭೋಗಗಳನ್ನು ಕಾಮವನ್ನು ಒಂದು ಸಂಯಮ ಸಂಗ ಸೌಖ್ಯದಲ್ಲಷ್ಟೇ ಕಾಣುವ ಸಾಮಾನ್ಯವರ್ಗ ಇನ್ನೊಂದೆಡೆ..
ಇವರೆಡೂ ವರ್ಗಗಳ ನಡುವೆ ಶುದ್ಧ ಮಾನವ ಪ್ರೇಮ ವೆಂಬುದು ಸರಳ ಜೀವನವನ್ನರಸಿ ಎಲ್ಲೋ ತೂಗುಯ್ಯಾಲೆಯಾಡುತ್ತಲೇ ಇರುತ್ತದೆ.

ಯಾಕೆಂದರೆ, ಈ ಜೀವನ ಶೈಲಿಯಲ್ಲಿ ಸುಖದ ಚರಮ ಸೀಮೆ ತಲುಪಿ ಮೈಮರೆತಿರುವವರಿಗೆ ಬದುಕಿಗೇನೂ ಅರ್ಥವೆಂಬುದಿಲ್ಲ. ಅದೇ ಬದುಕಿನ ಅರ್ಥ ಅನರ್ಥದ ಬಗ್ಗೆ ತಲೆಕೆಡಿಸಿಕಕೊಂಡವರಿಗೆಎ ಸುಖವೆಂಬದು ಕಾಲ ಬಳಿಯೇ ಇದ್ದರೂ ಸಂತೃಪ್ತಿ ಎಂಬುದಿಲ್ಲ… ಯಾಕೆ ಹೀಗೆ….? ಎಷ್ಟೋ ವೇಳೆ ಇಲ್ಲಿ ಉತ್ತರ ಹುಡುಕುವುದೇ ಕಷ್ಟ ಕಷ್ಟ…
ಹಾಗದರೆ, ಸಂತೃಪ್ತಿ ಎಂಬುದು ಹಣದ ಸಂಪಾದನೆಯಲ್ಲಿದೆಯೇ..? ನಿರ್ವಾಜ್ಯ ಪ್ರೇಮದಲ್ಲಿದೆಯೇ… ಆ ಪರಿಯ ಉದಾತ್ತ ಭಾವನೆಗಳಲ್ಲಿದೆಯೇ… ಇವು ಮೂರರ ಮೌಲಿಕ ಸಮ್ಮಿಶ್ರಣದಲ್ಲಿದೆಯೇ.. ಅಥವಾ ಸನ್ಯಾಸದಲ್ಲಿದೆಯೆ… ಇದ್ಯಾವುದೂ ಅಲ್ಲ ಕೇವಲ ಸಿನಿಕ ಸಿಡುಕತನದಲ್ಲಿ ಕ್ರುದ್ಧತೆಯಲ್ಲಿದೆಯೇ….?

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s