ಪರಮ ಪಾಪಿಷ್ಠ ಸ್ವಾಮಿಗಳ ನಡುವೆ ಪಾಮಾರ್ಥಿಕ ಸ್ವಾಮಿಗಳು…


ಸತ್ಯವಂತರಿಗಿದು ಕಾಲವಲ್ಲ, ಇದು ಪರಮ ಪಾಪಿಗಳಿಗೆ ಸುಭಿಕ್ಷ ಕಾಲವೆಂದರು. ೧೫ ನೇ ಶತಮಾನದಲ್ಲೇ ಹರಿದಾಸರು. ಹೌದು ಎಲ್ಲಕಾಲಕ್ಕೂ ಪರಮಪಾಪಿಗಳೇ ಹೆಚ್ಚಿರುತ್ತಾರೆ, ಅವರ ಸುಖಭೋಗಗಳು ಜನಸಾಮಾನ್ಯರಿಗೆ ಪ್ರಾಮಾಣಿಕರಿಗೆ ಅತೀವ ನೋವುಂಟು ಮಾಡುತ್ತಲೇ ಇರುತ್ತವೆ.. ಅಂಥವರಲ್ಲೇ ಪರಮ ಪಾಪಿಷ್ಠ ಸ್ವಾಮಿಗಳೂ ಇರುತ್ತಾರೆ.  ಅವರಿಗೋ ಅಷ್ಟೈಶ್ವರ್ಯ ರಾಜಾಥಿತ್ಯಗಳು ಜತೆಗೆ ಮರೆಯಲ್ಲಿ “ಮಾನಿನಿ” ಯರ ಸುಖಭೋಗಗಳು ಬೇರೆ….ಇತ್ತೀಚೆಗೆ ನಿತ್ಯಾನಂದ ಸ್ವಾಮೀಜಿಯ ಇಂಥ “ಅನುಭೋಗದ ದಂಧೆ” ಜಗಜ್ಹಾಹೀರಾಗಿದೆ. ಈ ಬಗ್ಗೆ  ಸುಧೀರ್ಘ ಲೇಖನ ಇಂದಿನ ಪತ್ರಿಕೆಯಲ್ಲಿದೆ ( ಸ್ವಾಮೀಜಿಗಳಲ್ಲಿ ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ” ವಿ.ಕ.೮-೩-೨೦೧೦). ಈ ಲೇಖನದ ಮುಖ್ಯಾಂಶಗಳನ್ನು ಕನ್ನಡ ಬ್ಲಾಗ್ ಓದುಗರಿಗೆ ನೀಡುತ್ತಿದ್ದೇನೆ,,,

ಅನೈತಿಕ ಚಟುವಟಿಕೆಗಳ ಪ್ರಕರಣಗಳು ಇದೇ ಮೊದಲೇನೂ ಅಲ್ಲ. ದೇವವ್ರತ ಎಂಬ ಸನ್ಯಾಸಿ ಇಂತಹದೇ  ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ತಾನು ನಡೆಸುತ್ತಿದ್ದ ಅನಾಥಾಲಯದ ಹೆಣ್ಣು ಮಕ್ಕಳನ್ನೇ ಲೈಂಗಿಕ ಶೋಷಣೆಗೆ ಗುರಿ ಮಾಡಿದ್ದ.

ಆಸ್ತಿಗಾಗಿ ಶಕೀರಾ ಖಲೀಲ್ ಎಂಬಾಕೆಯನ್ನು ವಿವಾಹವಾಗಿ ಆನಂತರ ಆಕೆಯನ್ನೇ ಕೊಂದ ಶ್ರದ್ದಾನಂದ ಸ್ವಾಮೀಜಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ,
ಇದೀಗ ನಿತ್ಯಾನಂದನ ಬೆನ್ನಲ್ಲೇ ಇನ್ನೊಂದು ಪ್ರಕರಣ- ವೈಶ್ಯವಾಟಿಕೆ ನಡೆಸುತ್ತಿದ್ದ ಉತ್ತರ ಪ್ರದೇಶದ   ಇಚ್ಛಧಾರೀ ಸ್ವಾಮೀಜಿ ಎರಡುಬಾರಿ ಪೋಲಿಸರಿಗೆ ಸಿಕ್ಕು ಬಿದ್ದು ಜೈಲು ಸೇರಿದ್ದವನ, ಹೊರ ಬಂದು ಮತ್ತೆ ಕಾವಿ ತೊಟ್ಟು ಅದೇ ಧಂಧೆ ನಡೆಸುತ್ತಾ  ರಾಜಕಾರಣಿಗಳಿಗೆ, ಹಿರಿಯ ಅಧಿಕಾರಿಗಳಿಗೆ ಗಗನ ಸಖಿಯರು, ಸಿನಿಮಾ ನಟಿಯರು, ಮಾಡೆಲ್ ಗಳನ್ನು ಸಪ್ಲೈ ಮಾಡುತ್ತಿದ್ದ. ಇದೀಗ ಮತ್ತೆ ಪೊಲೀಸರ ಅತಿಥಿತಿಯಾಗಿದ್ದಾನೆ.

ಈ ಸ್ವಾಮಿಯ ಬೆಂಗಳೂರಿನ ಬಿಡದಿ ಆಶ್ರಮದ ಅನೈತಿಕ ಚಟುವಟಿಕೆಗಳ ಎಲ್ ಟಿಟಿ ಉಗ್ರರ ಜೊತೆ ಸ್ವಾಮಿಜ ಸಂಬಂಧ ಹೊಂದಿರುವ ಬಗ್ಗೆ ಗುಪ್ತರಚರ ಇಲಾಖೆಯಮೂಲಕ ೨೦೦೫ ರಲ್ಲೇ ಮಾಹಿತಿ  ಅಂದಿನ ಮು.ಮಂತ್ರಿ ಧರ್ಮಸಿಂಗ್ ಅವರಿಗೆ    ಆ ಆಶ್ರಮದಲ್ಲಿ ಆನಂದೋತ್ವವೊಂದು ನಡೆದ ಸಂದರ್ಭದಲ್ಲಿ ಬಂದಿತ್ತೆಂದೂ, ಇದಕ್ಕೆ ಮಹಾರಾಷ್ಟ್ರದ ಅಂದಿನ ರಾಜ್ಯಪಾಲ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಇಬ್ಬರೂ ಆಹ್ವಾನಿತರಾಗಿದ್ದದರು. ಕಾರ್ಯಕ್ರಮದಲ್ಲಿ ಭಾಗವಹಿಸುವುದು ತರವಲ್ಲ ಎಂಬ ಸೂಚನೆ ಕೂಡ ಇತ್ತು. ಆದರೆ,  ಇಬ್ಬರೂ ಭಾಗವಹಿಸಿದ್ದರು.
ಇದರಿಂದ ಮನದಟ್ಟಾಗುತ್ತದೆ; ಪೂರ್ವಪರ ಮಾಹಿತಿ ಇದ್ದರೂ ರಾಜಕಾರಣಿಗಳ ಕರ್ತವ್ಯ ಪ್ರಜ್ಞೆ ಹೇಗೆ ಭ್ರಮೆ ಹಾಗೂ ಮೌಢ್ಯದೊಳಗೆ ಕಳೆದು ಹೋಗುತ್ತದೆಂದು. ಆಗಲೇ ತನಿಖೆಗೆ ಆದೇಶಿಸಿದ್ದರೆ ಈ ನಿತ್ಯಾನಂದನ “ದೇಹದಂಡನೆ, ಪವಾಡಗಳೆಲ್ಲವೂ ಬಯಲಾಗುತ್ತಿತ್ತು.

ಈ ಸ್ವಾಮೀಜಿಗಳು ಇಂದ್ರಿಯನಿಗ್ರಹ ಮಾಡಲಾಗದಿದ್ದರೆ, ವಿದ್ಯಭೂಷಣರಂತೆ ಗೌರವಯುತವಾಗಿ  ಪೀಠ ತ್ಯಾಗ ಮಾಡಿ ವೈವಾಹಿಕ ಜೀವನ ನಡೆಸಬಹುದಲ್ಲ? ಎಂಬ ನನ್ನ ಮನದ ಮಾತನ್ನೇ ಹೇಳಿದ್ದಾರೆ ಲೇಖಕರು. ಈ ಸ್ವಾಮೀಜಿಗಳು ಶಿಕ್ಷಣ ಸಂಸ್ಥೆಗಳು, ಯೋಗ ಕೇಂದ್ರಗಳನ್ನೂ ನಡೆಸುತ್ತಾ ಸಮಾಜ ಸೇವೆಯ ದಾರಿಯಲ್ಲಿ ಜನತೆಗೆ ದ್ರೋಹವೆಸಗುವುದೇಕೇ…? ಇಂಥ ಕೆಟ್ಟ ಸ್ವಾಮೀಜಿಗಳಿಗೆ ಜಗದ್ಗುರವೆಂಬ ಹೆಸರೂ ಆ ಗದ್ದುಗೆಯ ರಾಜಾತಿಥ್ಯಗಳೂ, ಸರ್ಕಾರದಿಂದ ಆರ್ಥಿಕನೆರವೂ, ಜನಮನ್ನಣೆ ಕೀರ್ತಿಯೂ ಇವೆಲ್ಲವೂ ಬೇಕು, ತೆರೆಮರೆಯಲ್ಲಿ ಅನೈತಿಕವಾಗಿ ಹೆಣ್ನುಗಳ ಸುಖಬೋಗವೂ ಬೇಕು.

ಸನ್ಯಾಸಿಗಳು ಸಂಸಾರ ಪರಿತ್ಯಕ್ತರಾಗಿರಬೇಕೆಂದೇನೂ ಇಲ್ಲ. ಉದಾಹರಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರು ಸಂಸಾರಿಗಳಾಗಿರುವವರು. ಯಾವುದೇ ಸ್ವಾಮೀಜಿಗಳಿಗಿಂತ ಕಡಿಮೆ ಇಲ್ಲದೇ ಧಾರ್ಮಿಕ ಸೇವೆ, ಸಮಾಜ ಸೇವೆ, ಶೈಕ್ಷಣಿಕ ಸೇವಾ ಸಂಸ್ಥೆಗಳು, ಕೃಷಿ, ಗ್ರಾಮಾಭಿವೃದ್ಧಿ ಹೀಗೆ ಕ್ರಾಂತಿಕಾರೀ ಕೆಲಸಗಳಲ್ಲಿ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ತಮಕೂರಿನ ಡಾ.ಶಿವಕುಮಾರ ಸ್ವಾಮಿಗಳು, ರಾಮಕೃಷ್ಣಾಶ್ರಮಗಳು, ಮಂತ್ರಾಲಯ  ತೀರ್ಥರು, ಸುತ್ತೂರು ಶ್ರೀಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ  ಒಳ್ಳಯ ಸ್ವಾಮೀಜಿಗಳ ಬಗ್ಗೆಯೂ ಹೇಳುತ್ತಾರೆ.
ಅಲ್ಲದೇ, ಇತ್ತೀಚೆಗೆ ಕೆಲವು  ಮಠಮಾನ್ಯಗಳು ಸೇವೆ ಎಂಬ ಪದದ ಅರ್ಥ ವ್ಯಾಪ್ತಿಯನ್ನು ದಾಟಿವೆ. ಬರೀ ಅರ್ಥ ಕೇಂದ್ರಿಕೃತವಾಗಿವೆ ಎಂದೂ ತಿಳಿಸುತ್ತಾರೆ.

ಉತ್ತರ ಕರ್ನಾಟಕದಲ್ಲಿ ನೆರೆಪೀಡಿತರಿಗೆ ಮಾತಾ ಅಮೃತಾನಂದಮಯಿ ಆಶ್ರಮ ನೂರು ಮನೆಗಳನ್ನು ಕಟ್ಟಿಕೊಟ್ಟಿದೆ, ಇನ್ನು ಐನೂರು ಮನೆಗಳನ್ನು ಕಟ್ಟಿಕೊಡುವ  ಭರವಸೆ ಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಪ್ರತಿಯಾಗಿ ಯಡಿಯೂರಪ್ಪನವರ ಸರ್ಕಾರ ಅಮೃತನಾಂದಮಯಿ ಆಶ್ರಮಕ್ಕೆ ಐದುಕೋಟಿ ರೂ. ಸಂದಾಯ ಮತ್ತು ಹದಿನೈದು ಎಕರೆ ಜಮೀನು ಕೊಡಮಾಡಿದೆ!  ಆರು ಕೋಟಿ ರೂ ಬಂಡವಾಳಕ್ಕೆ ೨೯ ಕೋಟಿ ಲಾಭ!! ಸರಕಾರದ ಇಂತಹ ಕ್ರಮಗಳು ಸಾರ್ವಜನಿಕರ ಚರ್ಚೆಗೆ ವಸ್ತುವಾಗುತ್ತಿವೆ.
ಮಠ ಮಾನ್ಯಗಳಿಗೆ ಸರಕಾರ ನೆರವು ನೀಡುವುದು ತಪ್ಪಲ್ಲ.  ಆದರೆ ಅವುಗಳ ಚಟುವಟಿಕೆ, ಕಾರ್ಯವ್ಯಾಪ್ತಿ ಮನದಟ್ಟು ಮಾಡಿಕೊಂಡು ಸಹಾಯ ಮಾಡುವುದು ಸೂಕ್ತ ಎಂದೂ ಸೂಚಿಸಿದ್ದಾರೆ ಲೇಖನದಲ್ಲಿ.

-ಹೀಗೆ ಮತ್ತೊಂದು ಸ್ವಾರಸ್ಯಕರ ಸೇವಾ ಸಂಗತಿಯನ್ನೂ ಹೊರಗೆಡುವುತ್ತಾರೆ!

ಸ್ವಾಮಿ ದಂಧೆ! ಎಂಬ ಇನ್ನೊಂದು ಲೇಖನ-
ಚೆನ್ನಾಗಿ ಮಾತನಾಡುವ ಛಾತಿ, ಯಾವುದೇ ವಿಷಯವನ್ನು ಕಲಾತ್ಮಕವಾಗಿ ಹೇಳುವ ಕಲೆ, ಭಾರತದ ಪರಂಪರಾಗತ ಕೌಶಲಗಳ ಬಗ್ಗೆ ತಿಳುವಳಿಕೆ ಇವಿಷ್ಟಿದ್ದರೆ ಸ್ವಾಮಿ ಬಿಸಿನೆಸ್ ಗಿಳಿಯಬಹುದು. ಒಂದೆರಡು ಟ್ರಕ್ಕುಗಳು, ಅಲ್ಲದೇ ಇಂಗ್ಲೀಷ್ ಸಂವಹನ ಸಿದ್ಧಿಸಿಬಿಟ್ಟಿದ್ದರೆ ಸ್ವರ್ಗಕ್ಕೆ  ಕಿಚ್ಚು! ಎಂ.ಬಿ.ಎ. ಡಿಗ್ರಿ ಇಟ್ಟುಕೊಂಡು ಯಾವುದೇ ಉದ್ದಿಮೆ ಸ್ಥಾಪಿಸುವುದಕ್ಕಿಂತ ಸ್ವಾಮಿ ಬಿಸಿನೆಸ್ ಗೆ ಟ್ರೈ ಮಾಡಬಹದು. ಎಲ್ಲ ಐಷಾರಾಮಿಗಳ ನಡುವೆಯೆ ಇದ್ದು ಕೊಂಡು ಆಧ್ಯಾತ್ಮದ ಬಗ್ಗೆ ವಿದೇಶಿಯರಿಗೂ ಉಪದೇಶ ಕೊಡಬಹದು ಎಂದು ಹೇಳುತ್ತದೆ.

ಇದೇ ಎರಡನೇ ಲೇಖನದ ಕೊನೆಯಲ್ಲಿ-
ಬಾಳಿಗೊಂದು ನಂಬಿಕೆ ಬೇಕು. ಆ ನಂಬಿಕೆಯ ಸೌಧ ಅಲುಗಾಡದಂತಿರಬೇಕು.  ಸಾಮಾಜಿಕ ಸೇವೆಯಲ್ಲಿ ನಮ್ಮ ದೇಶದ ಬಹಳಷ್ಟು ಧಾರ್ಮಿಕ ಶ್ರದ್ಧಾಕೇಂದ್ರಗಳು ತೊಡಗಿಕೊಂಡಿವೆ. ಶ್ರದ್ಧಾಕೇಂದ್ರಗಳನ್ನೇ ಅಪನಂಬಿಕೆಯಿಂದ ನೋಡುವ ದಿನಗಳು ಬರಕೂಡದು. ಈ ಕಾಳಜಿಯಿಂದಲೇ ಭೋಗಸ್ ಸ್ವಾಮಿಗಳ ವಿರುದ್ಧ ಕಠಿಣ ಕ್ರಮಗಳು ಜರುಗಬೇಕು ಎಂದು ಆಶಿಸಬೇಕಿದೆ ಎಂದು ಹೇಳುತ್ತಾರೆ ಲೇಖಕ ಶಂತನು ಭಟ್‌.
-ಇಂತಹ ಲೇಖನ ಬರೆದ ಪಿ.ತ್ಯಾಗರಾಜ್, ಶಂತನು ಭಟ್ ಅವರಿಗೆ, ಅವನ್ನು ಪ್ರಕಟಿಸಿದ ವಿ.ಕ. ಸಂಪಾಕರಿಗೆ ಧನ್ಯವಾದಗಳು ಸಲ್ಲುತ್ತವೆ.

Advertisements

3 thoughts on “ಪರಮ ಪಾಪಿಷ್ಠ ಸ್ವಾಮಿಗಳ ನಡುವೆ ಪಾಮಾರ್ಥಿಕ ಸ್ವಾಮಿಗಳು…”

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s