ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ಧಮF ಸಂಸ್ಕೃತಿ


ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ನಮ್ಮ ಧರ್ಮ ಸಂಸ್ಕೃತಿ ಒಂದೆಡೆಯಿಂದ ನಾಶವಾಗುತ್ತಿದೆ ಎಂದು ಕಾಣುತ್ತಿದ್ದಂತೆಯೆ, ಅದು ಇನ್ನೊಂದೆಡೆಯಿಂದ ಪುನರುತ್ಥಾನವಾಗುತ್ತಲಿರುವುದೂ ಕಾಣಸಿಗುತ್ತದೆ. ಈಗೀಗ ನಮ್ಮ ಯುವ ಜನತೆಯೊ ಕೂಡ ಆಧ್ಯಾತ್ಮ, ಯೋಗ, ಧ್ಯಾನ ಇವುಗಳತ್ತ ತಮ್ಮ ಗಮನ ಹರಿಸಿದ್ದಾರೆ. ಪಾಶ್ಚಿಮಾತ್ಯರೂ ನಮ್ಮ ಧರ್ಮ ಸಂಸ್ಕೃತಿ ಯೋಗ, ಧ್ಯಾನಗಳತ್ತ ಆಕರ್ಷಿತರಾಗತ್ತಿದ್ದಾರೆ. ಇಲ್ಲಿನ ಕೌಟುಂಬಿಕ ಜೀವನ ಪದ್ಧತಿ, ಧಾರ್ಮಿಕ ನಂಬಿಕೆ, ಸಸ್ಯಾಹಾರಿ ಆಹಾರ ಕ್ರಮ, ನಮ್ಮ ಜನರ ಆಚಾರವಿಚಾರ ಎಲ್ಲವೂ ಅವರನ್ನು ಸೆಳೆದುಕೊಂಡಿವೆ.

ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ ಬಂದಿರುವ ಒಬ್ಬ ಸನ್ಯಾಸಿನಿ ಕಾಳೀಜಿ. ಈಕೆಯ ಮೊಲ ಹೆಸರು ಕಾಲಿ ರೇ.(ವಿಜಯ ಕರ್ನಾಟಕ ೧೦,ಫಬ್ರುವರಿ ೨೦೧೦). ಆಕೆ ನಮ್ಮ ಧರ್ಮ ಸಂಸ್ಕೃತಿ ಬಗ್ಗೆ ಪಟ ಪಟನೆ ಹೇಳುತ್ತಿದ್ದರೆ, ನೀವು ಮಂತ್ರ ಮುಗ್ಧರಾಗುತ್ತೀರಿ. ೫೨ ರ ಹರೆಯದ ಕಾಳೀಜಿ ತ್ರೈಯೋಗ ಪ್ರಕಾರದಲ್ಲಿ ಮಾಸ್ಟರ‍್. ಈಕೆ ಸನ್ಯಾಸಿನಿ ಆದದ್ದು ಏಕೆ ಮತ್ತು ಹೇಗೆ?…ಕೇಳಿ. ಅಡಿಯಿಂದ ಮುಡಿವರೆಗೆ ಕೇಸರಿ ವಸ್ತ್ರ ಧರಿಸಿರುವ ಆಕೆಯ ಮೊಗದಲ್ಲಿ ಶುಭ್ರನಗೆ ಹೊಮ್ಮುತ್ತದೆ. ಯೋಗ ಶಿಕ್ಷಣ ನೀಡಿ ಸಾವಿರಾರು ಶಿಷ್ಯರನ್ನು ತರಬೇತಿಗೊಳಿಸಿದ್ದಾರೆ. ಅವರು ಯೋಗಾಸನದಲ್ಲಿ ನಿರತರಾದರೆ ನೋಡುವುದೇ ಒಂದು ಯೋಗಾ ಯೋಗ.

ಆಕೆ ಉತ್ತರಿಸುತ್ತಾರೆಬಾಲ್ಯದ ೩ ನೇ ವರ್ಷದಿಂದಲೇ ನಾನು ಯಾರು ಎಂಬ ಪ್ರಶ್ನೆ ಕಾಡುತ್ತಲೇ ಇದೆ ಎನ್ನುತ್ತಾರೆ. ಹೌದು, ನಾನು ಯಾರು? ಎಂಬ ಪ್ರಶ್ನೆ ನಮ್ಮೊಳಗೇ ಉದ್ಭವವಾದಾಗಲೇ ಆಧ್ಯಾತ್ಮದತ್ತ ಮನಸ್ಸು ಹರಿಯುತ್ತದೆ; ಚಿಂತನೆಗೂ ತೊಡಗುತ್ತದೆ. ಆಕೆ ಮುಂದುವರೆದು ಹೇಳುತ್ತಾರೆ, ನಾನು ಮೆಡಿಟೇಷನ್ ಆರಂಭಿಸಿದೆ. ಅದೇ ಆಧ್ಯಾತ್ಮ ಪಯಣದ ಮೊದಲ ಘಟ್ಟ. ಯಾಕೆ ಈ ಪಯಣ ಆರಿಸಿಕೊಂಡೆ ಹೇಳಲಾರೆ; ಪಯಣಿಸುತ್ತಿದ್ದೇನೆ ಅಷ್ಟೇಎನ್ನುತ್ತಾರೆ
ಹೌದು, ಅದೇನು ಸಂಸ್ಕಾರಜನ್ಯವೋ ಒಳ ಮನದ ನೋಟವೋ ….ಮೊರು ವರ್ಷಗಳಿಂದ ಧ್ಯಾನಾಸಕ್ತನಾಗಿ ಸಾಧನೆ ಮಾಡುತ್ತಿರವ ನನ್ನ ಅನುಭವದಲ್ಲಿ ಹೇಳುವುದಾದರೆ,

ಧ್ಯಾನದಲ್ಲಿ ಮಂತ್ರವಿದೆ ಮೌನವಿದೆ
ಮೌನದಲ್ಲಿ ಮನಸ್ಸಿನ ಹಾರಾಟವಿದೆ
ಆ ಹಾರಾಟದಲ್ಲಿ ದೇಹದುಸಿರಾಟವಿದೆ;
ಆ ಉಸಿರಾಟದಾಚೆ ಸಮಾಧಿ ಸ್ಥಿತಿಯಿದೆ
ಆ ಸಮಾಧಿ ಸ್ಥಿತಿಯಲ್ಲೇ ದೈವಸಾನ್ನಿಧ್ಯವಿದೆ.

ನಿಮ್ಮ ಹೆಸರೇಕೆ ಕಾಳಿ ಎಂದು ಕೇಳಿ, ಹಾಗೂ ಕಾಳಿ ತಾಮಸ ಗುಣದ ಶಕ್ತಿ ದೇವತೆಯಲ್ಲವೇ ? ನೀವೋ ಸಾತ್ವಿಕರು ಎಂದರೆ, ಪರದೇಶದ ಹೆಣ್ಣ ಮಗಳಾದ ಆಕೆ ಹೇಳುತ್ತಾರೆ ಗ್ರೀ ಕ್ ನಲ್ಲಿ ಕಾಳಿ ಎಂದರೆ ಒಳ್ಳೆಯದು ಎಂದು ಅಥF. ಭಾರತೀಯ ಪುರಾಣದಲ್ಲಿ ಕಾಳಿ ಎಂದರೆ ಶಕ್ತಿ ದೇವತೆ ಆಕೆಯಲ್ಲಿ ಲಕ್ಷ್ಮಿ ಯ ರಾಜಸಗುಣ, ಸರಸ್ವತಿಯ ಸಾತ್ವಿಕ ಗುಣವೂ ಇದೆ. ಈ ತ್ರಯೋಗುಣವೇ ಗೀತೆಯಲ್ಲಿ ಜ್ಞಾನಯೋಗ, ಕಮFಯೋಗ ಮತ್ತು ಭಕ್ತಿ ಯೋಗ ರೂಪದಲ್ಲಿವೆ. ಯೋಗ ವಿದ್ಯೆಯ ಮುದ್ರೆ ಪ್ರಾಣ ಆಸನದಲ್ಲೂ ಇವೆ. ನಾನು ಪ್ರಚಾರ ಪಡಿಸುತ್ತಿರುವ ತ್ರೆಯೋಗದಲ್ಲೂ ಅದೇ ಗುಣಗಳಿವೆ. ಇವುಗಳೇ ಮನುಷ್ಯನನ್ನು ಸತ್ಚತ್ ಆನಂದ ವಾಗಿಸಿವೆ ಎಂದೂ ನೀರು ಕುಡಿದಂತೆ ಹೇಳುತ್ತಾರೆ.

ಯೋಗ ವ್ಯಾಪಾರೀಕರಣ ಗೊಂಡಿಲ್ಲವೇ? ಎಂಬ ಪ್ರಶ್ನೆಗೆ ಕಲಿಯುಗಎಂದು ಗಂಭೀರರಾಗುತ್ತಾರೆ ಆಕೆ. ಇಂತಹ ಪಾಶ್ಚಿಮಾತ್ಯ ಸಾಧಕರು ನಮ್ಮ ಧಮF ಸಂಸ್ಕೃತಿಯ ರಾಯಭಾರಿಗಳಾಗಿರುವ ಉದಾಹರಣೆಗಳು ಇನ್ನೂ ಅನೇಕ ನಮ್ಮ ನಡುವೆ ಸಿಗುತ್ತವೆ.

ಮತ್ತೆ ನನ್ನ ಮಾತಿನಲ್ಲಿ ಹೇಳುವುದಾದರೆ,

ಕಲಿಯುಗಾರಂಭ ಕಾಲದಲ್ಲಿದ್ದು ದು

ವೇದಕಾಲೀನ ಭಾರತ.

ಈ ಕಲಿಯುಗ ಮುಂದುವರೆದಂತೆಲ್ಲ ಕಾಣುತ್ತಿರುವುದೇ

ವ್ಯಾಪಾರೀಕರಣ ಭಾರತ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s