ಪುನರ್ಜನ್ಮ,ಗ್ರಹಣ ಇವು ನಿಜಕ್ಕೂ ಮೊಢ ನಂಬಿಕೆಗಳೇ…?


ಮೊಢ ನಂಬಿಕೆಗಳನ್ನು ವೈಭವೀಕರಿಸಿ ಟಿ.ವಿ.ಚಾನೆಲ್ ಗಳು ಪ್ರಚಾರ ಮಾಡುವುದು ಹೆಚ್ಚುತ್ತಿದೆ.  ಅಂತಹ ಮೊಢ ನಂಬಿಕೆಗಳನ್ನೇ ಆಧರಿಸಿದ ಸಿನಿಮಾಗಳೂ ಬಂದು ಜಯ ಬೇರಿ ಹೊಡೆದಿವೆ; ಹೊಡೆಯುತ್ತಿವೆ. ಪ್ರೇಕ್ಷಕರ ಕುತೂಹಲ ಕೆರಳಿಸುವ  ಇಂತಹ ಸಿನಿಮಾಗಳು 30-40 ವರ್ಷಗಳ ಹಿಂದಿನಿಂದಲೂ ಬಂದಿವೆ; ಬರುತ್ತಿವೆ. ಅವುಗಳಲ್ಲಿ ನನ್ನನ್ನು ಇಂದಿಗೂ ಕಾಡುವ ಸುಂದರ ಸುಮಧುರವೆನಿಸುವ ಹಳೆಯ ಸಿನಿಮಾ ಎಂದರೆ ಕಮಲ್ ಅಮ್ರೋಹಿ ಅವರ ಹಿಂದಿ ಚಿತ್ರ-  “ನೀಲ್ ಕಮಲ್” ಅದರಲ್ಲೂ ಕಥಾ ನಾಯಕಿ ಒಬ್ಬ ನರ್ತಕಿ.  ಕಳೆದ ವರ್ಷ ಗಳಲ್ಲಿ ಬಂದ “ಆಪ್ತ ಮಿತ್ರ” ಇಂತಹ ಮೊಲದಿಂದಲೇ ಬಂದ ಇನ್ನೊಂದು ಪುನರ್ಜನ್ಮದ  ಕನ್ನಡ ಚಿತ್ರ.  ಹೀಗೆ ಪುನಜನ್ಮವನ್ನು ವೈಭವೀಕರಿಸುವ ದೃಶ್ಯಗಳ ಸರಕುಗಳನ್ನು ಹೊಂದಿದ ಸಿನಿಮಾ ಹಾಗೂ ಟಿ.ವಿ.ಕಾರ್ಯಕ್ರಮಗಳು ಜನಸಾಮಾನ್ಯರನ್ನು ದಂಗು ಬಡಿಸಿ ಇಂದಿಗೂ ಮಂತ್ರ ಮುಗ್ಧರನ್ನಾಗಿಸುತ್ತಿರುವುದಂತೂ ನಿಜ.  ಅದೇ ವ್ಯಾಪಾರೀ ಚಾತುರ್ಯ ಜಾಲವಲ್ಲದೇ ಇನ್ನೇನು?  ಜೊತೆಗೆ ಇತ್ತೀಚೆಗೆ ನಿಧನರಾದ ನಟ ವಿಷ್ಣು ವರ್ಧನ್ ಅವರ ಸಾವಿನ ಸುತ್ತ, ಊಹಾಪೋಹವಾಗಿ ಕಪೋಲ ಕಲ್ಪಿತ ಹಬ್ಬಿರುವ  ಆಪ್ತ ಮಿತ್ರದ ನರ್ತಕಿ ನಾಗವಲ್ಲಿಯ ಕಟ್ಟು ಕಥೆಯನ್ನೇ ಕೆಲವು ಚಾನೆಲ್ ಗಳೂ ವೈಭವೀಕರಿಸಿ ಬಿತ್ತರಿಸಿವೆ.  ಆ ದೇವರೇ ನಮ್ಮ ಮುಗ್ಧ ಜನರನ್ನು ಕಾಪಾಡಬೇಕು.  ಅಥವಾ ಸುಮ್ಮನೆ ಸ್ವಲ್ಪ ಹೊತ್ತು ಖುಷಿಗಾಗಿ ಅಂತಹ ಕಾರ್ಯಕ್ರಮಗಳನ್ನು ನೋಡಿ ಮರೆತು ಬಿಡುವಂಥ ಬುದ್ಧಿವಂತರೂ  ಇದ್ದೇ  ಇರುತ್ತಾರೆ ಬಿಡಿ.

ಆದರೆ, ಪುನರ್ಜನ್ಮವೇ ಸುಳ್ಳು ಎಂದು ಹೇಳುವುದು ಸರಿಯೇ..?  ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಏನು ಹೇಳುತ್ತದೆ?  ಆತ್ಮವು ನಮ್ಮ ಮರಣಾನಂತರ ಈ ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ಪ್ರವೇಶಿಸುತ್ತದೆ; ಪುನಜನ್ಮ ಪಡೆಯುತ್ತದೆಂದು. ಅಂತಹ ಭಗವದ್ಗೀತೆಯನ್ನು ಭೋದಿಸಿದ ಶ್ರೀ ಕೃಷ್ಣನೇ ನಮ್ಮ ಪರಮಾತ್ಮನೆಂದು ನಾವು ಪೂಜಿಸುತ್ತೇವೆ. ಶ್ರೀರಾಮ ಮತ್ತು ಶ್ರೀಕೃಷ್ಣರು ವಿಷ್ಣುವಿನ ಹತ್ತು ಅವತಾಗಳಲ್ಲಿ ಅವರೂ ಕೂಡ ಎಂದು ತಿಳಿದಿದ್ದೇವೆ. ಅಷ್ಟಕ್ಕೂ, ಈವರೆಗೆ ಪುನರ್ಜನ್ಮವೇ ಸುಳ್ಳು ಎಂದು ಬೊಬ್ಬಿರಿಯುವವರು, ಅನೇಕಾನೇಕ ವಿದ್ವಾಂಸರು ಬಹಳ ಮಂದಿ ಬಂದು ಹೋಗಿದ್ದಾರೆ. ಯಾರು ಏನೇ ಬೊಬ್ಬಿರಿದರೂ ನಮ್ಮ ಅನೂಚಾನವಾದ ಸನಾತನ ತಾತ್ವಿಕ – ಸಾತ್ವಿಕ ನಂಬಿಕೆಗಳು ಅಚಲ. ಅವುಗಳ ಮೇಲೇ ನಮ್ಮ ದೇವರು ಧರ್ಮ ಸಂಪ್ರದಾಯ ಆಚಾರ ವಿಚಾರಗಳು ಶತಮಾನಗಳಿಂದಲೂ ಹಾಸು ಹೊಕ್ಕಾಗಿವೆ; ಅವೇ ನಮ್ಮ ಸಾಮಾನ್ಯ ಜನರ ಜೀವನ ವಿಧಾನವಾಗಿಯೂ ಬೇರೂರಿವೆ; ನಮ್ಮ ಜನರಿಗೆ ಎಂದಿಗೂ ಶಾಂತಿ ಸಮಾಧಾನವನ್ನೂ ನೀಡಿವೆ;ನೀಡುತ್ತಿವೆ ಎಂಬುದೂ ಅಕ್ಷರಶಃ ಸತ್ಯ.

ಯಾವುದೋ ಟಿ.ವಿ.ಚಾನೆಲ್ ಗಳು ಅಂತಹ ಶ್ರೇಷ್ಠವಾದ ನಮ್ಮ ಧಾರ್ಮಿಕ ನಂಬಿಕೆಯನ್ನೇ ದುರುಪಯೋಗ ಪಡಿಸಿಕೊಂಡು ಮುಗ್ಧ ಜನರನ್ನು ಮರುಳು ಗೊಳಿಸಿದರೆ, ಕೆಲ ಜ್ಯೋತಿಷಿಗಳೂ ಅದಕ್ಕೆ ಪೋಷಿಸಿ ನೀರೆರೆಯುತ್ತಿದ್ದರೆ, ಅದೆಲ್ಲ ಸುಳ್ಳ ಪೊಳ್ಳುಗಳು ಕಪೋಲ ಕಲ್ಪಿತಗಳು ಖಂಡಿತ ನಂಬ ಬೇಡಿರಿ ಎಂದು ಹೇಳಿದರಷ್ಟೇ ಸಾಕು.  ಅದನ್ನು ಬಿಟ್ಟು ಪುನರ್ಜನ್ಮವೇ ಸುಳ್ಳು ಹಾಗೂ ನಮ್ಮಲ್ಲಿ ಅನೂಚಾನವಾಗಿ ನಡೆದು ಬಂದ ನಂಬಿಕೆ ಶಾಸ್ತ್ರ ಸಂಪ್ರದಾಯಗಳಾದ ಗ್ರಹಣ ಕಾಲದ ಆಚರಣೆಗಳು ಮುಂತಾದವುಗಳೆಲ್ಲವೂ ಸುಳ್ಳು ಪೊಳ್ಳು ಎಂದು ಸಾರವುದೇನು?! ಯಾರೇನೆ  ಸಾರುತ್ತ ಬೊಬ್ಬಿರಿದರೂ ನಮ್ಮ ಜನ ಅದಕ್ಕೆಲ್ಲ ಸೊಪ್ಪು ಹಾಕಲಾರರೆನ್ನಿ. ತಾವು ನಂಬಿದ ದೇವರು ಧರ್ಮ ಆಚರಣೆಗಳನ್ನೆಲ್ಲ ಎಂದಿಗೂ ಬಿಡಲಾರರು ಎಂಬುದಕ್ಕೇ ಮತ್ತೊಮ್ಮೆ ಉದಾಹರಣೆಯಾಗಿತ್ತು; ಈ ವರ್ಷ ನಾವು ಕಂಡ ಸೂರ್ಯಗ್ರಹಣ, ಅದೆಷ್ಟೇ ಆಧುನಿಕತೆಯಲ್ಲಿ ತಾಂತ್ರಿಕತೆಯಲ್ಲಿ ಮುಂದುವರೆದಿದ್ದರೂ ಸಹ ಬೆಂಗಳೂರು ಅಂದಿನ ಸೂರ್ಯ ಗ್ರಹಣದಿಂದ ತಣ್ಣಗೆ ಮಲಗಿತ್ತು.  ಅದಕ್ಕೆ ಸಾಕ್ಷಿಭೂತವಾಗಿ ಘನ ಗಾಂಭೀರ್ಯದಿಂದ ಮೌನವನ್ನೇ ಮೆರೆದಿತ್ತು.

ಇಂತಹ ನಮ್ಮ ಸನಾತನ ಧರ್ಮ ಸಂಸ್ಕತಿ, ಆಚಾರ ವಿಚಾರಗಳ ಬಗ್ಗೆ ಹೇಳಿಕೆ ನೀಡುವಾಗ ನಮ್ಮ ವಿದ್ವಾಂಸರು ಅದರ ಇನ್ನೊಂದು ಮಗ್ಗುಲನ್ನು ಯೋಚಿಸದಿರುವುದು ತೀರಾ ವಿಷಾದನೀಯ. ಸುಮ್ಮನೆ ಪುನರ್ಜನ್ಮವೇ ಸುಳ್ಳು ಎಂದು ಹೇಳಿದರೆ ಹೇಗೆ…? ಹಾಗೆ  ಸಾರಿದರೆ ನಮ್ಮ ಅಸಂಖ್ಯಾತ ಜನ ಮಾನಸದಲ್ಲಿ ನೆಲೆಯೊರಿರುವ ಭಗವದ್ಗೀತೆಯನ್ನು ಬೋಧಿಸಿದ ನಮ್ಮ ದೇವರಾದ ಶ್ರೀಕೃಷ್ಣ ಪರಮಾತ್ಮನನ್ನು ನಾವು ಯಾವ ದೃಷ್ಟಿಯಲ್ಲಿ ನೋಡಬೇಕು? ಪುನರ್ಜನ್ಮವಿಲ್ಲ ಎಂದ ಮೇಲೆ ಅದನ್ನು ಹೇಳಿದ ಆ ದೇವರು ಅವನ ಅವತಾರಗಳೆಲ್ಲವೂ ಸುಳ್ಳು; ಅವನೂ  ಇರುವುದು ಸುಳ್ಳು, ಆ ದೇವರೇ ಇಲ್ಲವೆಂದು ಮುಗ್ಧ ಜನರಾದಿಯಾಗಿ  ಈ ಪ್ರಪಂಚದಲ್ಲಿ ಎಲ್ಲರೂ ನಾಸ್ತಿಕರಾಗಬೇಕೇ..?. ದಿನೇ ದಿನೇ ದೇವರೂ ಧರ್ಮ ನಂಬಿಕೆ ಸಂಪ್ರದಾಯಗಳನ್ನು ತೊರೆದು ಹೆಚ್ಚು ಹೆಚ್ಚು ದುಷ್ಕೃತ್ಯಗಳಲ್ಲಿ ತೊಡಗಿರುವವರನ್ನೇ  ಅವರೂ ಮಾದರಿಯಾಗಿ ಅನುಸರಿಸಬೇಕೇ..?..ಎಂಬುದೇ ಬೃಹತ್ ಪ್ರಶ್ನೆಯಾಗಿ ನಿಲ್ಲುತ್ತದೆ.

Advertisements

4 thoughts on “ಪುನರ್ಜನ್ಮ,ಗ್ರಹಣ ಇವು ನಿಜಕ್ಕೂ ಮೊಢ ನಂಬಿಕೆಗಳೇ…?”

 1. ನಮಸ್ಕಾರ.
  ಪುನರ್ಜನ್ಮ ಪರಿಕಲ್ಪನೆ ಸಂಪೂರ್ಣ ಸುಳ್ಳು-ಇದು ನನ್ನ ಸ್ಪಷ್ಟ ಅಭಿಪ್ರಾಯ. ಇದರ ಬಗ್ಗೆ ನನ್ನ ಅಭಿಪ್ರಾಯ ನನ್ನ ಬ್ಲಾಗಲ್ಲಿ ಬರೆಯಬೇಕೆಂದಿದ್ದೇನೆ . ಪುರುಸೊತ್ತಾದಾಗ ಬರೆಯುತ್ತೇನೆ. ಆಗ ನಿಮಗೆ ತಿಳಿಸುತ್ತೇನೆ.

  1. ವಂದನೆಗಳು. ಸುಧಾ ವಾರ ಪತ್ರಿಕೆ ಇತ್ತೀಚೆಗೆ (೧೧ ಫೆಬ್ರವರಿ ೨೦೧೦) ಪುನಜFನ್ಮದ ಬಗ್ಗೆ ಸವಿಸ್ತಾರವಾದ ವಿಶೇಷ ಮುಖಪುಟ ಲೇಖನವನ್ನು ಪ್ರಕಟಿಸಿದೆ; ಓದಲೇ ಬೇಕಾದದ್ದು, ಓದಿ.

 2. ಸರ್,
  ಆತ್ಮ ಎನ್ನುವುದು ಇದೆಯೆ? ಬಹುಷಃ ಇದಕ್ಕೆ “ಅಘೋರಿಗಳನಡುವೆ” ಪುಸ್ತಕದಲ್ಲಿ ಲೇಖಕರು ಅತ್ಯಂತ ಸಮಂಜಸವಾಗಿ ಇಲ್ಲವೆಂದು ಸಾಧಿಸಿದ್ದಾರೆ. ದೇಹವೆನ್ನುವ ರಥಕ್ಕೆ ಚೇತನವಿದ. ದೀಪ ಮತ್ತು ಎಣ್ಣೆಯಂತೆ, ಎಣ್ಣೆಯಿರುವ ತನಕ ದೀಪ ಉರಿಯುತ್ತದೆ ನಂತರ ಆರಿ ಹೋಗುತ್ತದೆ. ಆತ್ಮವಿಲ್ಲದ ಮೇಲೆ ಪುನರ್ಜನ್ಮವಿರಲು ಸಾಧ್ಯವಿಲ್ಲ.

 3. ಅಘೋರಿಗಳ ನಡುವೆ ಲೇಖಕ ಸತ್ಯಕಾಮ ಇದ್ದು ಅವರ ಬಗ್ಗೆ ಅವರು ಬರೆದ “ಪಂಚಮಗಳ ನಡುವೆ” ನೀವೂ ಓದಿರಬೇಕು.
  ಅವರ ಬರಹದಲ್ಲಿ ಮಾಂತ್ರಿಕತೆ ಇದೆ. ಅವರ ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಬೀಜಾಕ್ಷರೀ ಮಂತ್ರವಿದೆ;ಅವರ ಸಿದ್ಧ ಹಸ್ತದಿಂದ ಪುಟ ಪುಟಗಳಲ್ಲಿ ಸಿಗುವ ನುಡಿಗಟ್ಟುಗಳು ನಮ್ಮನ್ನು ಆಲೋಚನೆಗೆ ಹಚ್ಚುತ್ತವೆ…

  ಇನ್ನು ಪುನರ್ಜನ್ಮ ದ ಬಗ್ಗೆ-
  ನಮ್ಮ ಮಹಾನ್ ಕವಿ ಕುವೆಂಪು ಅವರು ಎಂದಂತೆ ಈ ವಿಚಿತ್ರ ವಿಲಕ್ಷಣ ದೇಶದಲ್ಲಿ ಏನುಬೇಕಾದರೂ ಆಗಬಹುದಲ್ಲ…ಅವರವರ ಭಾವಕ್ಕೆ ಅಥವಾ ಅವರವರ ಬುದ್ಧಿಗೆ ಅವರವರ ಜೀವನಕೆ ಏನನ್ನು ಬೇಕಾದರೂ ಅನುಸರಣ ಮಾಡಿಕೊಳ್ಳಲು ಯಾರೆಲ್ಲರೂ ಸರ್ವ ಸ್ವತಂತ್ರರಲ್‌ಲವೇ….
  ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s