ಕಲಾವಿದ ಅಯಾಜುದ್ದೀನ್ ಪಟೇಲ್


ನನ್ನ ಕಂಪ್ಯೂಟರ್ ಪುಸ್ತಕಗಳಿಂದ ಪ್ರಭಾವಿತರಾದವರಲ್ಲಿ ನಾರಾಯಣ್ ಜೋಶಿ ಒಬ್ಬರು. ಆವರು ಗುಲ್ಬರ್ಗದವರು. ಮೊನ್ನೆ ಅವರು ನನಗೆ ಫೋನ್ ಮಾಡಿ, ತಮ್ಮ ಸ್ನೇಹಿತ ಚಿತ್ರ-ಛಾಯಾಚಿತ್ರ ಕಲಾವಿದ ಅಯಾಜುದ್ದೀನ್ ಪಟೇಲ್ ಅವರ ಚಿತ್ರಗಳ ಪ್ರದರ್ಶನ  ಬೆಂಗಳೂರಿನ ಚಿತ್ರ ಕಲಾ ಪರಿಷತ್ ನಲ್ಲಿ ಏರ್ಪಡಿಸಲಾಗಿದೆ. ನೀವೂ ಬರಬೇಕೆಂದು ಆಹ್ವಾನವಿತ್ತರು.  ಅವರ ಅಭಿಮಾನಕ್ಕೆ ಕಟ್ಟುಬಿದ್ದು ನಾನು ಹೊರಡಲನುವಾದೆ. ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದರೂ ಇಲ್ಲಿ ನೋಡುವುದು ಬಹಳವಿದೆ ಅನ್ನಿಸಿದೆಯಲ್ಲ. ಹೇಗೂ ಚಿತ್ರಕಲಾ ಪರಿಷತ್ ಮಂದಿರವನ್ನೂ ನೋಡಿದಂತಾಗುತ್ತದೆ. ಅಲ್ಲಿ ನನ್ನ ಮೆಚ್ಚಿನ ವಿಶ್ವದ ಹೆಸರಾಂತ ಕಲಾವಿದರಾದ ನಿಕಾಲಸ್ ರೂರಿಚ್ ಮತ್ತು  ಎಸ್.ಎಸ್. ಕುಕ್ಕೆ ಮುಂತಾದವರ ಕಲಾಕೃತಿಗಳನ್ನೂ ನೋಡಿದಂತಾಗುತ್ತದೆಂದುಕೊಂಡೆ. ನನ್ನ ಶ್ರೀಮತಿಯನ್ನೂ ಜೊತೆಯಲ್ಲಿ ಕರೆದುಕೊಂಡು ಹೊರಟೆ.  ಜೋಶಿಯವರು (ಇವರೂ ಕೂಡ ಛಾಯಾ ಚಿತ್ರ ಗ್ರಾಹಕರಾಗಿ ಪಡಿಣತಿ ಪಡೆದವರು). ಕಲಾವಿದ ಅಯಾಜುದ್ದೀನ್ ರನ್ನು ಪರಿಚಯಿಸಿದರು. ಸಾಮಾನ್ಯವಾಗಿ ಹೆಸರಾಂತ ಕಲಾವಿದರಲ್ಲಿ ಕಾಣುವ ಬಿಗುವು ಬಿಮ್ಮಾನಗಳೇನೂ ಕಾಣದ  ಆತ ಮೊದಲ ನೋಟಕ್ಕೇ ಸರಳ, ವ್ಯಕ್ತಿ ಸ್ನೇಹ ಜೀವಿ ಎನಿಸಿದರು. ಪಟೇಲ್. ತಮ್ಮ ಕಲಾ ಕೃತಿಗಳ ಪರಿಚಯ ಮಾಡಿಸಿದರು.

ಅವರ ಬಗ್ಗೆ ವಿಚಾರಿಸಿದೆ- 1970ರಲ್ಲಿ  ಗುಲ್ಬರ್ಗ ಜಿಲ್ಲೆಯ ಗಡಿಕೇಶ್ವರ ತಾಲೂಕಿನ ಚಿಂಚೋಳಿಯಲ್ಲಿ  ಪ್ರೈಮರಿ ಶಾಲಾ ಮಾಸ್ತರ ಮಗನಾಗಿ  ಜನಿಸಿದ ಅಯಾಜುದ್ದೀನ್ ಪಟೇಲ್. ಕಲೆಯನ್ನರಸಿ ನಡೆದು ಬಂದ ದಾರಿಯಲ್ಲಿ ಕಷ್ಟ –ನಷ್ಟಗಳು ಕಡಿಮೆಯೇನಲ್ಲ. ಗುಲ್ಬಾರ್ಗಾ ವಿಶ್ವ ವಿದ್ಯಾನಿಲಯದಿಂದ ಮಾಸ್ಟರ್ ಆಫ್ ಆರ್ಟ್ಸ ಪದವಿ ಪಡೆದಿರುವ ಅಯಾಜುದ್ದೀನ್ , ಸತತ ಇಪ್ಪ ತ್ತೈದು ವರ್ಷಗಳೇ ಸಾಧನೆಗೈದು ತಮ್ಮ ಕಲಾ ಕೃತಿಗಳ ಹಲವಾರು ಪದರ್ಶನಗಳನ್ನು ಸ್ವತಃ ಖರ್ಚಿನಿಂದ ಏರ್ಪಡಿಸಿದ್ದಾರೆ,  ಅನೇಕ ಗಣ್ಯರಿಂದ ಮೆಚ್ಚುಗೆ ಪಡೆದಿದ್ದಾರೆ.

ಮೈಸೂರು ದಸರಾ ಬೆಸ್ಟ್ ಫೋಟೋ ಗ್ರಫಿ ಅವಾರ್ಡ್ ಸೇರಿದಂತೆ, ಎಂ.ಎಂ.ಕೆ.ಕಾಲೇಜ್ ಆಫ್ ಆರ್ಟ್ಸ ಗುಲ್ಬರ್ಗ, ಅಖಿಲ ಭಾರತ 4ನೇ ಕಲಾಪ್ರದರ್ಶನ  ನಾಗಪುರದಲ್ಲಿ ಫೋಟೋಗ್ರಫಿ ಅವಾರ್ಡ, ಇನ್ನೂ  ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅಯಾಜುದ್ದೀನ್ ಇದೀಗ ಗುಲ್ಬರ್ಗಾ ರಾಷ್ಟ್ರೀಯ ಛಾಯಾ ಚಿತ್ರ ಗ್ರಾಹಕರ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಹಲವು ಕಲಾ ಸಂಘ ಸಂಸ್ಥೆಗಳಲ್ಲಿ ಸದಸ್ಯರೂ ಆಗಿದ್ದಾರೆ ಮತ್ತು ಕಾರ್ಯ ನಿರ್ವಾಹಕರಾಗಿಯೂ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಕಲಾ ಕೃತಿ ಮತ್ತು ಸಾಧನೆಗಳನ್ನು ಕುರಿತು ಕೆಲವು ಡಾಕ್ಯುಮೆಂಟರಿ ಫಿಲಂಗಳೂ ಬಂದಿವೆ.
ಶ್ರೀಯುತ ಅಯಾಜುದ್ದೀನ್ ಪಟೇಲ್ ಅವರು  ಒಬ್ಬ ಪ್ರತಿಭಾವಂತ ಮತ್ತು ಅನುಭವಿ ಚಿತ್ರ ಛಾಯಾಚಿತ್ರಗ್ರಾಹಕರು. ಅವರ ಕಲಾ ಕೃತಿಗಳಲ್ಲಿ ಗ್ರಾಮೀಣ ಜನಜೀವನದ ಸ್ಥಿತಿ-ಗತಿಗಳ ವಿಭಿನ್ನ ವಾದ ದಟ್ಟ ಚಿತ್ರಣವೇ ಹೆಚ್ಚು ವಸ್ತು ನಿಷ್ಟವಾಗಿ  ತೋರಿ ಬಂದಿದೆ.  ಕ್ಯಾಮೆರಾ, ಕಂಪ್ಯೂಟರ್ ತಮ್ಮಂತೆಯೆ ಬಳಸಿಕೊಂಡು ತಮ್ಮ ಕುಂಚದಿಂದ ಬಣ್ಣಗಳೊಡೆ  ಬದುಕಿನ ವಾಸ್ತವಕ್ಕೆ ಹತ್ತಿರವೆನಿಸುವ ಹಾಗೆ ಚಿತ್ರಿಸುವ ಅವರ ಕಲಾವಂತಿಕೆ ಶ್ಲಾಘನೀಯವಾಗಿದೆ. ಅವರು ವಸ್ತು ನಿಷ್ಠೆ , ಗಂಭೀರ ದೃಷ್ಟಿ ಕೋನಗಳು ಇನ್ನೂ ಹೊಸ  ದಿಕ್ಕುಗಳೆಡೆಗೆ ಹರಿಯುತ್ತಾ ಕಲೆಯಲ್ಲಿ ಇನ್ನಷ್ಟು ಹೊಸ ಸಾಧ್ಯತೆ  ಹಾಗೂ ಆಯಾಮಗಳನ್ನೂ  ಕಾಣುವಂತಾಗಲಿ ಎಂದು ಹಾರೈಸುವೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s