ದೊಡ್ಡವರು ನಡೆದದ್ದೇ ದಾರಿ


ದೊಡ್ಡವರು ನಡೆದದ್ದೇ ದಾರಿ. ಅವರು ಕಂಡುಂಡ ಅನುಭವದಂತೆ ವರ್ತಿಸುತ್ತಾರೆ. ಎಷ್ಟೋ ವೇಳೆ ಅವರೂ ಮನುಷ್ಯರೇ ಅವರದೇ ಹುಟ್ಟು ಗುಣಗಳು,ದೌರ್ಬಲ್ಯಗಳೂ ಇರುತ್ತವೆ.  ಅವರ ಬೆನ್ನು ಅವರಿಗೆ ಕಾಣದೆಯೂ ಇರುತ್ತದೆ. ಇತ್ತೀಚೆಗೆ ಇಂಥ ದೊಡ್ಡವರೂ ಇದ್ದಾರೆ. ತಾವು ಏನು ಹೇಳಿದರೂ ವೇದ ವಾಕ್ಯವೇ ಆಗಿಬಿಡುತ್ತದೆ. ಹಾಗೆಯೆ ತಾವು ಏನು ಮಾಡಿದರೂ ನಡೆಯುತ್ತದೆ. ಎನ್ನುವವರು.  ಇನ್ನು ದೊಡ್ಡವರಾದವರಲ್ಲಿ ಕೆಲವರು ನಾನು ಹೇಳಿದಂತೆ ಮಾಡು ನಾನು ಮಾಡಿದಂತೆ ಮಾಡಬೇಡ ಎನ್ನುವವರೂ ಇದ್ದಾರೆ.  ಏನೇ ಅನ್ನಿ, ದೊಡ್ಡವರು ಅನುಸರಿಸಿದ ಶಿಸ್ತು ಬದುಕಿದ ರೀತಿ ಇವುಗಳಿಂದ ಕಲಿಯುವುದು ಬಹಳವಿರುತ್ತದೆ. ಯಾಕೆಂದರೆ, ಈ ಹಿಂದೆ ಆಗಿ ಹೋದ ಹಿರಿಯರಲ್ಲಿ ಮಹಾನ್ ಸಾಧಕರಲ್ಲಿ ಚಿಕ್ಕಂದಿನಿಂದಲೇ ಶಿಸ್ತಿನಿಂದ ಜೀವನ ನಡೆಸಿದವರೇ ಬಹಳ ಇದ್ದಾರೆ.  ಅಂಥವರಿಂದ ಬೇಕಾದುದನ್ನೆಲ್ಲ ಕಿರಿಯರು ಆಯ್ದು ಅಳವಡಿಸಿಕೊಳ್ಳುವ ಜಾಣ್ಮೆ ತೋರಬೇಕು.
ಅಂತೆಯೆ, ಕಿರಿಯರಾದವರು; ತಾವು ಬಹಳ ಬುದ್ದಿವಂತರು. ವಯಸ್ಸಾದವರಿಗೇನು ತಿಳಿಯುತ್ತದೆಂಬ ಧೋರಣೆ ಬಿಟ್ಟರೆ ಅವರಿಗೇ ಒಳ್ಳೆಯದು.  ಅವರು ದೊಡ್ಡವರ ದೌರ್ಬಲ್ಯಗಳನ್ನೆ ಎತ್ತಿ ಆಡಿ ಹೇಳುವಂತಾಗುವ ಸಂದರ್ಭಗಳೆಂದರೆ, ದೊಡ್ಡವರು ದೊಡ್ಡವರಾಗಿ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳದೇ ಇದ್ದಾಗಲೇ.  ಕೆಲ ದೊಡ್ಡವರಂತೂ ನಾನು ಮೇಲೇ ಇದ್ದೇನೆ ನಾನು ಹೇಳಿದ್ದು ಕೆಳಗಿರನವರಿಗೆ ತಲುಪಬೇಕು; ಇಲ್ಲ ನಾನು ಉಗುಳಿದರೂ ಸಿಡಿಯುತ್ತದೆ; ಸಿಡಿಯಬೇಕು ಎಂಬುವ ಧಾಷ್ಷ್ಯದವರೇ ಇದ್ದಾರೆ. ಅದರಿಂದ, ಅವರು ಅವರ ವಯಸ್ಸಿಗೆ ಬಂದ ಮಕ್ಕಳಿಂದ ದೂರವಾದರೆ ಆಶ್ಚರ್ಯವೇನಿಲ್ಲ.  ಕೆಲ ಹಿರಿಯರು ತಮ್ಮ ಬಂಧು ಬಾಂಧವರಲ್ಲಿ ಇಂಥ ಧಿಮಾಕಿನಿಂದ   ಹೊಲಸು ರಾಜಕೀಯ ಮಾಡುವುದರಲ್ಲಿ  ಕಾಲಾಹರಣ ಮಾಡುತ್ತಾರೆ..  ಆದರೇನು! ಕೆಲ ದೊಡ್ಡವರಲ್ಲಿ ಎಚ್ಚರಿಕೆಯಿಂದ ತೂಕದ ಮಾತನಾಡುವವರೂ ಇರುತ್ತಾರೆ. ಯಾಕೆಂದರೆ, ತಾವು ಏನು ಹೇಳಿದರೂ ಅದು ಗಂಭೀರವಾಗಿ ಪರಿಗಣಿಸಲ್ಪಡುತ್ತದೆಂದೇ ಜಾಗ್ರತರಾಗಿರುತ್ತಾರೆ. ಇವರು ನಿಜಕ್ಕೂ ದೊಡ್ಡವರು. ತಮ್ಮ ಹಿರಿ ವಯಸ್ಸಿಗೆ ಮೀರಿ ತಮ್ಮ ತಪ್ಪುಗಳಿಂದ ತಿದ್ದಿಕೊಳ್ಳುತ್ತಾರೆ; ಒಪ್ಪಿಕೊಳ್ಳುತ್ತಾರೆ; ಸ್ನೇಹ ಜೀವಿಗಳಾಗಿರುತ್ತಾರೆ. ಇವರ ಮಾತುಗಳು ಕಿರಿಯರಿಗೆ ಎಷ್ಟೋ ಸಂದರ್ಭಗಳಲ್ಲಿ ಅಣಿ ಮುತ್ತುಗಳೇ  ಆಗಿರುತ್ತವೆ. ಇನ್ನೊಂದು ಮಾತು- ಇಂಥ ಮಹಾನ್ ದೊಡ್ಡವರೂ ಇರುತ್ತಾರೆ ನೋಡಿ, “ನನಗೀಗ 90 ವರುಷ. ಏಕೋ ಗೊತ್ತಿಲ್ಲ; ಜನ ನನ್ನನ್ನು ಮಹಾನ್ ಸಾಧಕನಂತೆ ಗುರುತಿಸಿದ್ದಾರೆ.  ನಾನೇನೂ ಅಂತದ್ದು ಮಾಡಿಲ್ಲ.  ನಾನು ಮಾಡದೇ ಇರುವಒಳ್ಳೆಯ ಕೆಲಸಗಳು ಮಾಡಲಿಕ್ಕೆ ಇನ್ನೂ ಎಷ್ಟೋ ಇವೆ.  ಅವುಗಳೇನೆಂದು ತಿಳಿದು ಕಿರಿಯರು ಮಾಡುವಂತಾಗಬೇಕು. ನಾನು ಬುದುಕಿದ ರೀತಿಯಿಂದ ಅವರು ಕಲಿಯಬೇಕು. ನಾನು  ಇತರರ ಒಳಿತಿಗಾಗಿಯೆ  ಏನನ್ನಾದರೂ ಮಾಡಿದ್ದರೆ ಅದರ ಸಾರ್ಥಕ್ಯವೇನೆಂದು ಮನಗಾಣುವಂತಾಗಬೇಕಷ್ಟೇ…”  ಎನ್ನುತ್ತಾರೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s