ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು…!


ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗೆ ಕ್ಯೂ ನಿಲ್ಲದೇ ಸಲಭವಾಗಿ ಅಲ್ಲಿ ಕೆಲಸ ಪೂರೈಸಿಕೊಳ್ಳಲು ಸಾಧ್ಯವಾಗಿತ್ತಲ್ಲ..! ಅದರಲಿ, ಆ ಕಛೇರಿ ಹೇಗಿತ್ತೂಂತೀರಾ… ಹಾಯಾಗಿ ಎಲ್ಲರೊಂದಿಗೂ(ನಮ್ಮೊಂದಿಗೂ) ಹರಟೆ ಹೊಡೆಯುತ್ತಾ ಸರಾಗವಾಗಿ ಕೆಲಸ ಮಾಡಿ ಕೊಡುತ್ತಿದ್ದರು.

ಕೌಂಟರ್ ನಲ್ಲಿ ಇದ್ದಾತ ಹೇಳುತ್ತಿದ್ದ- ಹಿಂದಿನ ದಿನ ಟಿವಿ 9 ನಲ್ಲಿ  ಪೆಟ್ರೋಲ್ ಪಂಪ್ ಗಳಲ್ಲಿ ಕಡಿಮೆ  ಎಣ್ಣೆ ಅಳೆಯುವುದನ್ನು ಹಿಡಿದು ಹಾಕಿದ್ದರಂತಲ್ಲ; ಅದೇ  ದೊಡ್ಡ ಸುದ್ದಿ ಯಾಗಿತ್ತು.  ಅಲ್ಲಲ್ಲ!  ಪೆಂಟ್ರೋಲ್ ಪಂಪ್ ನ ಭಾರೀ ದೊಡ್ಡ ಕುಳಗಳ ಮಾತೇ ಅದಾಗಿತ್ತು.  ಏನೂ ಆಗೋದಿಲ್ಲ ಬಿಡಿ.  ಅವುಗಳ ಲೈಸೆನ್ಸ್ ಪಡೆದವರೆಲ್ಲ  ಭಾರೀ ಭಾರಿ ಘಟಾನು ಘಟಿಗಳೇ ಅವರೆಲ್ಲಾ… ಮತ್ತೆ ನಮ್ ಹಣೆ ಬರಹದ ಕಡೆ ಮಾತು ಹೊರಳಿತು…. ಇನ್ನು ಸ್ವಲ್ಪ ದಿನ ಹೋದ್ರೆ ನಮ್ಮ ಕಛೇರಿ ಪೂರ್ತಿ ಜ್ಯೋತಿಷ್ಯಮಯವಾಗಿ ಬಿಡುತ್ತೇಂತ!

ಅವರ್ಯಾರೂ ಊಟದ ಸಮಯವಾದ್ರೂ ಅದರ ಪರಿವೆ ಇಲ್ಲ ದೇ ಕೆಲಸ ಮಾಡುತ್ತಿದ್ದರು; ಇಲ್ಲ ಮಾಡಿಕೊಡುತ್ತಿದ್ದರು ನೋಡಿ, ಬಾಕಿ ದಿವ್ಸ ಆಗಿದ್ದಿದ್ದರೇ ಲಂಚ್ ಅವರ್ಸ್ ಅಂತ ರಪ್ಪನೆ ಕೌಂಟರ್ ಬಾಗಿಲು ಬಂದ್ ಆಗಿಬಿಡುತ್ತಿತ್ತಲ್ಲ..! ಸೂರ್ಯನಿಗೆ ಗ್ರಹ ಬಡಿದಿದ್ದರೇನು ಇವರ್ಯಾರಿಗೂ ಈವತ್ತು ಯಾವ ಗ್ರಹ ಬಡಿದಿಲ್ಲ ನೋಡಿ; ನಾವೂ ನೆಮ್ಮದಿ; ಆವರೂ ನೆಮ್ಮದಿಯಿಂದ ಕೆಲಸ ಮಾಡಿ ಕೊಡ್ತವರ್ರೇ… ಬೇರೆ ದಿನಗಳಲ್ಲೂ ಕೆಲಸ ಮಾಡಿಕೊಡೊವ್ರು ಇದಾರೆ; ಇದ್ದೇ ಇರ್ತಾರೆ ಒಬ್ಬಿಬ್ರಾದ್ದೂ ಆ ಮಾತೇ  ಬೇರೆ ಬಿಡಿ!  ಅರ್ರೆ ರೆ, ಒಬ್ಬ ಮಾತ್ರ  ಹಿಂದೆ ಕುಳಿತು ಸುಮ್ಮನೆ ಕೆಲಸವಿಲ್ಲದೇ ಕುಳಿತು ಮಾಡುವುದಾದರೂ ಏನು ಎಂದು ಚೂಯಿಂಗ್ ಗಮ್ಮ ಜಗಿಯುತ್ತಿದ್ದ, ಬಹುಶಃ ಗ್ರಹಣ ಕಾಲದಲ್ಲಿ ಚೂಯಿಂಗ್ ಗಮ್ ಜಗಿಯ ಬಾರದೆಂದು ಎಲ್ಲೂ ಹೇಳಿಲ್ಲ ನೋಡಿ..!

ಮೇನೇಜರ್ ಸಾಹೇಬರು ತಮ್ಮ ಛೇಂಬರಲ್ಲೇ  ಕುಳಿತಿದ್ದರು.  ಕೆಲವು ಹಳೇ ಎಕ್ಸ್‌ರೇ ಫಿಲಂ ಷೀಟ್ಸ ಹಿಡಿದು ಯಾವುದು ಸೂರ್ಯ ಗ್ರಹಣ ನೋಡಲು ಸೇಫೆಸ್ಟ್ ಎಂಬುದನ್ನು ಪರಿಶೀಲಿಸುತ್ತಿದ್ದರು.ಬಹಶಃ ಸ್ವಾಫ್ ನವರನ್ನೆಲ್ಲ ಈ ಲಂಚ್ ಅವರ್ ಲ್ಲೇ  ಸೂರ್ಯ ಗ್ರಹಣ ದರ್ಶನ ಮಾಡಿಸಲು ಸಿದ್ಧತೆಯೋ…ಅಂತೂ ಊರಿಗೆ ಊರೇ… ಗ್ರಹಣ ಕಾಲದಲ್ಲಿ ಸ್ತಬ್ದ!! ಎಲ್ಲೇ ಲ್ಲೂ ಸಂಯಮ… ಯಾವೊಂದು ಧಾವಂತವೂ ಇಲ್ಲ…!!! ಎಷ್ಟೋ ವರ್ಷಗಳಿಗೊಮ್ಮೆ ಅಪರೂಪದ ದೃಶ್ಯ ಅದೂ ಬೆಂಗಳೂರಂಥ ಮಹಾ ನಗರದಲ್ಲೇ…..

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s