ರಾಜಾ ಹರಿಶ್ಚಂದ್ರ ಫ್ಯಾಕ್ಟರಿ


ಭಾರತದ ಮೊದಲ ಚಲನ ಚಿತ್ರ ರಾಜಾ ಹರಿಶ್ಚಂದ್ರ. 1913ರಲ್ಲಿ ಅದು ತೆರೆ ಕಂಡಿತ್ತು. ಆ ಚಲನ ಚಿತ್ರವನ್ನು ತೆರೆಗಿತ್ತ ದಾದಾ ಫಾಲ್ಕೆ ಭಾರತ ಸಿನಿಮಾರಂಗದ ಪಿತಾಮಹ ಎನಿಸಿಕೊಂಡರು.  ತಮ್ಮ ಆಸ್ತಿಯನ್ನೆಲ್ಲಾ ಅಡವಿಟ್ಟು ರಾಜಾ ಹರಿಶ್ಚಂದ್ರ ನಿರ್ಮಾಣಕ್ಕೆ ಕೈ ಹಾಕಿದ ಫಾಲ್ಕೆ ಸಾಹೇಬರಿಗೆ ಹರಿಶ್ಚಂದ್ರನ ಪತ್ನಿ ತಾರಾಮತಿಯ ಪಾತ್ರ ಮಾಡಲು ಯಾವು ಸ್ತ್ರೀಯೂ ಮುಂದೆ ಬರಲಿಲ್ಲ!  ಫಾಲ್ಕೆ ಸಾಹೇಬರು ವಿಧಿಯಿಲ್ಲದೇ ವೈಶ್ಯವಾಟಿಕೆ ನಡೆಸುತ್ತಿ ಒಬ್ಬಾಕೆಯ ಮನವೊಲಿಸಿ ಯಾರನ್ನಾದರೂ ಕಳುಹಿಸಕೊಡುವಂತೆ ಯತ್ನಿಸಿ ವಿಫರಾಗಬೇಕಾಯಿತು. ಅಂದರೆ, ಆ ಕಾಲದಲ್ಲಿ ಸಿನಿಮಾದಲ್ಲಿ ನಟಿಸುವುದೆಂದರೆ ವೈಶ್ಯವಾಟಿಕೆಯಲ್ಲಿ ಕೆಲಸ ಮಾಡುವುದಕ್ಕಿಂತಲೂ ಕೀಳಾಗಿತ್ತು! ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಹೋಲಿಸಿದರೆ ಇಂಥ ಎಷ್ಟೋ ಸ್ವಾರಸ್ಯಕರ ವಿಷಯಗಳು ನಮ್ಮ ಸಮಾಜದ ವಿವಿಧರಂಗಗಳ್ಳಿ ಸಿಗುತ್ತವೆ.
ಇಂದು ಸಿನಿಮಾದಲ್ಲಿ ನಟಿಸುವುದೇ ಒಂದು ಅಗ್ಗಳಿಕೆಯಾಗಿ ಬಿಟ್ಟಿದೆಯಲ್ಲ!  ಫಾಲ್ಕೆ ಸಾಹೇಬರು ಬದುಕಿದ್ದದಿದ್ದರೆ ಈಗೇನು ಹೇಳುತ್ತಿದ್ದರೋ…  ಭಾರತೀಯ ಚಲನ ಚಿತ್ರ ರಂಗದ ಮಾಯಾನಗರಿ ಮುಂಬೈನ ವೈಶ್ಯವಾಟಿಕೆಯಲ್ಲಿ ಅಂದು ಕೇಳಿಬಂದ ಮಾತು ಇಂದಿಗೆ ಅದೆಷ್ಟು ಪ್ರಸ್ತುತವಾಗಿದೆ ಎಂಬುದನ್ನಂತೂ ಚಿಂತಿಸಬೇಕಾದ ವಿಷಯವಾಗಿದೆ.  ಯಾಕೆಂದರೆ, ಈಗಲೂ ವೈಶ್ಯವಾಟಿಕೆಯಲ್ಲಿರುವವರ್ಯಾರೂ  ಸಹ ಪಬ್ಲಿಕ್ ಆಗಿ ತೆರೆದುಕೊಳ್ಳಲಾರರಲ್ಲ…!
ಕ್ರಮೇಣ ಸಿನಿಮಾ ಎಂಬುದು ಅಂದಿನ ಕಾಲಘಟ್ಟದಲ್ಲಿ ಸಮಾಜ ಸುಧಾರಣೆಯ ಅದ್ಭುತ ಕಲಾಮಾಧ್ಯಮವಾಗಿ ಹೊರಹೊಮ್ಮಿತ್ತು.  ಅಂದಿನ  ಸೂಪರ್ ನಟಿಯರಿಗೆ ಜನಮಾನಸದಿಂದ ಸಲ್ಲುತ್ತಿದ್ದ ಅದಮ್ಯ ಗೌರವವೇ ಬೇರೆ…    ಇದೀಗ ದಾದಾ ಸಾಹೇಬ್ ಫಾಲ್ಕೆಯವರ ಆ ಮೊದಲ ಸಿನಿಮಾ ನಿರ್ಮಾಣದ ಹರ ಸಾಹಸವನ್ನೇ  ಇಂದಿನ ಜನರಿಗೆ ತೆರೆದಿಡಿವಂತ ಸಿನಿಮಾ “ರಾಜಾ ಹರಿಶ್ಚಂದ್ರಾಜಿ ಫ್ಯಾಕ್ಟರಿ” ಬಂದಿದೆ.
ಮುಂಬೈ ರಂಗಭೂಮಿಯ ಕಲಾವಿದರಾದ ಪರೇಶ್ ಮೊಕಾಶಿ ಕೂಡ ಫಾಲ್ಕೆ ಸಾಹೇಬರಂತೆಯೆ ತಮ್ಮೆಲ್ಲ ಆಸ್ತಿ ಅಡವಿಟ್ಟು ಈ ಚಿತ್ರ ನಿರ್ಮಿಸಿದ್ದಾರೆಂಬ ಸುದ್ದಿ.  ಈ “ರಾಜಾ ಹರಿಶ್ಚಂದ್ರಾಜಿ ಫ್ಯಾಕ್ಟರಿ” ವಿದೇಶಿ ಭಾಷಾ ಸಿನಿಮಾ ವಿಭಾಗಲ್ಲಿ ಭಾರತದಿಂದ “ಫಿಲ್ಮಂ ಫೆಡರೇಷನ್ ಇಂಡಿಯಾ ಮೂಲಕ 2010ರ ಆಸ್ಕರ್ ಪ್ರಶಸ್ತಿಗೆ ಶಿಫಾರಸ್ಸುಗೊಂಡಿದೆಯಂತೆ.

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s