“Keep watching; may be I will do Good Service”
ಪುನರ್ಜನ್ಮ, ಗ್ರಹಣ, ಇವು ನಿಜಕ್ಕೂ ಮೊಢ ನಂಬಿಕೆಗಳೇ…?
ಮೊಢ ನಂಬಿಕೆಗಳನ್ನು ವೈಭವೀಕರಿಸಿ ಟಿ.ವಿ.ಚಾನೆಲ್ ಗಳು ಪ್ರಚಾರ ಮಾಡುವುದು ಹೆಚ್ಚುತ್ತಿದೆ. ಅಂತಹ ಮೊಢ ನಂಬಿಕೆಗಳನ್ನೇ ಆಧರಿಸಿದ ಸಿನಿಮಾಗಳೂ ಬಂದು ಜಯ ಬೇರಿ ಹೊಡೆದಿವೆ; ಹೊಡೆಯುತ್ತಿವೆ. ಪ್ರೇಕ್ಷಕರ ಕುತೂಹಲ ಕೆರಳಿಸುವ ಇಂತಹ ಸಿನಿಮಾಗಳು 30-40 ವರ್ಷಗಳ ಹಿಂದಿನಿಂದಲೂ ಬಂದಿವೆ; ಬರುತ್ತಿವೆ. ಅವುಗಳಲ್ಲಿ ನನ್ನನ್ನು ಇಂದಿಗೂ ಕಾಡುವ ಸುಂದರ ಸುಮಧುರವೆನಿಸುವ ಹಳೆಯ ಸಿನಿಮಾ ಎಂದರೆ ಕಮಲ್ ಅಮ್ರೋಹಿ ಅವರ ಹಿಂದಿ ಚಿತ್ರ- “ನೀಲ್ ಕಮಲ್” ಅದರಲ್ಲೂ ಕಥಾ ನಾಯಕಿ ಒಬ್ಬ ನರ್ತಕಿ. ಕಳೆದ ವರ್ಷ ಗಳಲ್ಲಿ ಬಂದ “ಆಪ್ತ ಮಿತ್ರ” ಇಂತಹ ಮೊಲದಿಂದಲೇ ಬಂದ ಇನ್ನೊಂದು ಪುನರ್ಜನ್ಮದ ಕನ್ನಡ ಚಿತ್ರ. ಹೀಗೆ ಪುನಜನ್ಮವನ್ನು ವೈಭವೀಕರಿಸುವ ದೃಶ್ಯಗಳ ಸರಕುಗಳನ್ನು ಹೊಂದಿದ ಸಿನಿಮಾ ಹಾಗೂ ಟಿ.ವಿ.ಕಾರ್ಯಕ್ರಮಗಳು ಜನಸಾಮಾನ್ಯರನ್ನು ದಂಗು ಬಡಿಸಿ ಇಂದಿಗೂ ಮಂತ್ರ ಮುಗ್ಧರನ್ನಾಗಿಸುತ್ತಿರುವುದಂತೂ ನಿಜ. ಅದೇ ವ್ಯಾಪಾರೀ ಚಾತುರ್ಯ ಜಾಲವಲ್ಲದೇ ಇನ್ನೇನು? ಜೊತೆಗೆ ಇತ್ತೀಚೆಗೆ ನಿಧನರಾದ ನಟ ವಿಷ್ಣು ವರ್ಧನ್ ಅವರ ಸಾವಿನ ಸುತ್ತ, ಊಹಾಪೋಹವಾಗಿ ಕಪೋಲ ಕಲ್ಪಿತ ಹಬ್ಬಿರುವ ಆಪ್ತ ಮಿತ್ರದ ನರ್ತಕಿ ನಾಗವಲ್ಲಿಯ ಕಟ್ಟು ಕಥೆಯನ್ನೇ ಕೆಲವು ಚಾನೆಲ್ ಗಳೂ ವೈಭವೀಕರಿಸಿ ಬಿತ್ತರಿಸಿವೆ. ಆ ದೇವರೇ ನಮ್ಮ ಮುಗ್ಧ ಜನರನ್ನು ಕಾಪಾಡಬೇಕು. ಅಥವಾ ಸುಮ್ಮನೆ ಸ್ವಲ್ಪ ಹೊತ್ತು ಖುಷಿಗಾಗಿ ಅಂತಹ ಕಾರ್ಯಕ್ರಮಗಳನ್ನು ನೋಡಿ ಮರೆತು ಬಿಡುವಂಥ ಬುದ್ಧಿವಂತರೂ ಇದ್ದೇ ಇರುತ್ತಾರೆ ಬಿಡಿ.
ಆದರೆ, ಪುನರ್ಜನ್ಮವೇ ಸುಳ್ಳು ಎಂದು ಹೇಳುವುದು ಸರಿಯೇ..? ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಏನು ಹೇಳುತ್ತದೆ? ಮುಂದೆ ಓದಿ…>>>
ನೀ ಅದೆಷ್ಟು ಅಗಮ್ಯ..!
ಎಂದಿಗೂ ಕಾಡುವ ಮರ್ಕಟ ಮೃಗ
ಇಲ್ಲಿದ್ದರೆ ಅಲ್ಲಿಲ್ಲ…ಅಲ್ಲಿ ಇನ್ನೆಲ್ಲೊ ಕಚಗುಳಿ
ಇಟ್ಟು ಬಿಟ್ಟೂ ಬಿಡದ ಧಾಳಿ ಬಿರುಗಾಳಿ….
ಹಾಗೊಮ್ಮೆ ಹುಡುಕಾಟ ತಡಕಾಟ
ಅಲ್ಲೇ ಕಂಡೂ ಕಾಣದ ತುಡಿತ ತವಕ…
ಎಲ್ಲ ಒಳಗೊಂಡು ಅದನ್ನನಭವಿಸಿ
ಅಪ್ಪಿ-ಒಪ್ಪಿಸಿಕೊಳ್ಳುವ ಖುಷಿ!
ಕಂಪ್ಯೂಟರ್ ಶಿಕ್ಷಣ
ನಾನು ಕನ್ನಡ ಲೇಖಕನಾಗಿ ಒಂದು ರವಷ್ಟು ಹೆಸರು ಮಾಡುತ್ತಿದ್ದಂತೆಯೆ ಪತ್ರಿಕೆಗಳಿಗೆ ಕಳುಹಿಸುವುದಕ್ಕಾಗಿ ನನ್ನ ಹಸ್ತ ಪ್ರತಿ ತಯಾರಿಸಲು 1998 ರಲ್ಲಿ ಮನೆಗೆ ಕಂಪ್ಯೂಟರ್ ತಂದೆ. ಇಲಾಖೆಯಲ್ಲಿದ್ದಾಗ ಅದಕ್ಕೆ ಸಂಬಂಧ ಪಟ್ಟಂತೆ ಕಂಪ್ಯೂಟರ್ ಟ್ರೈನಿಂಗ್ ಪಡೆದಿದ್ದೆ. ಆದರೆ, ಅಲ್ಲಿ ಕನ್ನಡ ಎಂಬುದಿರಲಿಲ್ಲ; ಅಷ್ಟಕ್ಕೂ, ಆಗ ಕಂಪ್ಯೂಟರ್ ನಲ್ಲಿ ಕನ್ನಡ ಇನ್ನೂ ಬೆಳವಣಿಗೆ ಕಂಡಿರಲಿಲ್ಲ. ನನ್ನ ಮಕ್ಕಳಿಗೆ ಮನೆಯಲ್ಲಿ ನಾನು ಕಂಪ್ಯೂಟರ್ ಪಾಠ ಹೇಳಿಕೊಟ್ಟು ತಯಾರು ಮಾಡಿದ್ದನ್ನು ಕಂಡ ನನ್ನ ಸ್ನೇಹಿತರು, ನನ್ನನ್ನು ಅವರ ಮಕ್ಕಳಿಗೂ ಮನೆ ಪಾಠ ಹೇಳಿಕೊಡಲು ಒತ್ತಾಯಿಸಿದರು. ಸರಿ, ಒತ್ತಾಯಕ್ಕೆ ಕಟ್ಟು ಬಿದ್ದು ವಾರಕ್ಕೆ ಮೊರು ದಿನ ಮಾತ್ರ ಪಾಠ ಎಂದು ಹೇಳಿ ಆರಂಭಿಸಿದೆ.
ಹೀಗೆ ಬಯಸದೇ ಬಂದ ಭಾಗ್ಯದಿಂದ ಕಂಪ್ಯೂಟರ್ ಶಿಕ್ಷಕನಾದೆ. ಆಮೇಲೆ ಪತ್ರಕರ್ತರೊಬ್ಬರ ಪರಿಚಯವಾಯಿತು. ಅವರು ಪಿ.ಯು. ಓದುತ್ತಿದ್ದ ತಮ್ಮ ಮಗಳಿಗೆ ಪಾಠ ಹೇಳಿಕೊಡಿರೆಂದರು, ಜೊತೆಗೆ ಅವರ ಪ್ರೆಸ್ ಕ್ಲಬ್ ನಲ್ಲಿ ಉಚಿತ ತರಬೇತಿ ಶಿಬಿರಕ್ಕೆ ಕಂಪ್ಯೂಟರ್ ಮೇಷ್ಟ್ರನ್ನಾಗಿ ಮಾಡಿದರು. ನಾನು ಕನ್ನಡ ಸಾಹಿತಿ ಎಂದು ತಿಳಿದಿದ್ದ ಅವರು, ಪ್ರೆಸ್ ಕ್ಲಬ್ ನ ಕೋಣೆಯೊಳಗೆ ಪತ್ರಿ ಸಂಜೆ ಪಾಠ ಮಾಡುವುದಲ್ಲದೇ ಅಲ್ಲಿ ಗೋಡೆಯ ಮೇಲೆ ಕನ್ನಡದಲ್ಲಿ ಕಂಪ್ಯೂಟರ್ ಬೇಸಿಕ್ ಪಾಠಗಳ ಚಾರ್ಟ್ಸ ಬರೆದು ಅಂಟಿಸಲು ಹೇಳಿದರು. ಆಗ ಅಲ್ಲಿಗೆ ಭೇಟಿ ನೀಡುತ್ತಿದ್ದ ಪತ್ರ ಕರ್ತರು ನನ್ನ ಕನ್ನಡ ಕಂಪ್ಯೂಟರ್ ಬೋಧನಾ ಕ್ರಮಗಳ ಚಾರ್ಟ್ಸ್ ನೋಡಿದರು. ತುಂಬ ಚೆನ್ನಾಗಿವೆ; ನೀವೇಕೆ ಕನ್ನಡ ಕಂಪ್ಯೂಟರ್ ಪುಸ್ತಕಗಳನ್ನು ಬರೆಯ ಬಾರದು ಎಂದು ಪ್ರೋತ್ಸಾಹಿಸಿದರು. ಹಾಗೆ ಕನ್ನಡದಲ್ಲಿ ಹೊರ ಬಂದವು ನನ್ನ ಕಂಪ್ಯೂಟರ್ ಪುಸ್ತಕಗಳು-ಮೊದಲನೆಯದು 60 ಪುಟಗಳ ಆನಂತರ- “ಕಂಪ್ಯೂಟರ ಕಲಿಕೆಗೊಂದು ಕೈ ಪಿಡಿ, 1) ವಿನ್ ಕಂಪ್ಯೂಟರ್ಸ್ 2) ವಿನಯುವರ್PC 3) ಮೇಜಿನ ಮೇಲಿನ ಪ್ರಕಾಶನ. ಕಲಿಕೆ ಆರಂಬಿಸುವವರಿಗಾಗಿ ಕೆಲವು ಕಂಪ್ಯೂಟರ್ ಟ್ಯೂಟರ್ಸ್ ಉಚಿತ ಡೌನ್ ಲೋಡ್ ಇಲ್ಲಿ ಲಭ್ಯವಿವೆ ನೋಡಿ.
ಆನಂತರ ಬಿ.ಎಸ್.ಎನ್.ಎಲ್. ಇಲಾಖೆಯಿಂದ ಸ್ವಯಂ ನಿವೃತ್ತಿ ಪಡೆದೆ. ಕಂಪ್ಯೂಟರ್ ಶಿಕ್ಷಕನಾಗಿ ಕೆಲಸ ಮಾಡಿದೆ, ಸಂಪನ್ಮೂಲ ವ್ಯಕ್ತಿಯಾಗಿ ಶಾಲಾ ಕಾಲೇಜುಗಳಿಗೆ ಭೇಟಿ ನಿಡಿದ್ದೇನೆ. ನನ್ನ ಪ್ರೊಫೈಲ್ ಮೇಲೆ ತಿಳಿಸಿದ ವೆಬ್ ಸೈಟ್ ನೋಡಿ. ನಮ್ಮ ಕರ್ನಾಟಕದ ಮೊಲೆ ಮೊಲೆಗಳಿಂದ ನನ್ನ ಕಂಪ್ಯೂಟರ್ ಪುಸ್ತಕಗಳ ಬಗ್ಗೆ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಹಾಗು ವಯಸ್ಕರೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ನೀವೂ ಇವುಗಳ ಪ್ರಯೋಜನ ಪಡೆಯಿರಿ; ನಿಮ್ಮ ನಡುವೆ ಕಂಪ್ಯೂಟರ್ ಕಲಿಕೆ ಕನ್ನಡದಲ್ಲಿ ಆರಂಭಿಸುವ ವರಿರಬೇಕಲ್ಲವೇ..? ಅವರಿಗೂ ಹೇಳಿ ದಯವಿಟ್ಟು ಉಪಕೃತರಾಗಿರಿ…ನಿಮ್ಮ ಸಲಹೆ- ಸಹಕಾರಕ್ಕೆ ನಾನು ಎಂದೂ ಕೃತಜ್ಞ…ಮುಂದೆ ಓದಿ…>>>
ಊರಿಗೆ ಊರೇ ಗ್ರಹಣದಿಂದ ಗರಬಡಿದಂತಿತ್ತು..!
ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗೆ ಕ್ಯೂ ನಿಲ್ಲದೇ ಸಲಭವಾಗಿ ಅಲ್ಲಿ ಕೆಲಸ ಪೂರೈಸಿಕೊಳ್ಳಲು ಸಾಧ್ಯವಾಗಿತ್ತಲ್ಲ..! ಅದರಲಿ, ಆ ಕಛೇರಿ ಹೇಗಿತ್ತೂಂತೀರಾ… ಹಾಯಾಗಿ ಎಲ್ಲರೊಂದಿಗೂ(ನಮ್ಮೊಂದಿಗೂ) ಹರಟೆ ಹೊಡೆಯುತ್ತಾ ಸರಾಗವಾಗಿ ಕೆಲಸ ಮಾಡಿ ಕೊಡುತ್ತಿದ್ದರು…. ಮುಂದೆ ಓದಿ…>>>
ದೊಡ್ಡವರು ನಡೆದದ್ದೇ ದಾರಿ…
ದೊಡ್ಡವರು ನಡೆದದ್ದೇ ದಾರಿ. ಅವರು ಕಂಡುಂಡ ಅನುಭವದಂತೆ ವರ್ತಿಸುತ್ತಾರೆ. ಎಷ್ಟೋ ವೇಳೆ ಅವರೂ ಮನುಷ್ಯರೇ ಅವರದೇ ಹುಟ್ಟು ಗುಣಗಳು,ದೌರ್ಬಲ್ಯಗಳೂ ಇರುತ್ತವೆ. ಅವರ ಬೆನ್ನು ಅವರಿಗೆ ಕಾಣದೆಯೂ ಇರುತ್ತದೆ. ಇತ್ತೀಚೆಗೆ ಇಂಥ ದೊಡ್ಡವರೂ ಇದ್ದಾರೆ. ತಾವು ಏನು ಹೇಳಿದರೂ ವೇದ ವಾಕ್ಯವೇ ಆಗಿಬಿಡುತ್ತದೆ. ಹಾಗೆಯೆ ತಾವು ಏನು ಮಾಡಿದರೂ ನಡೆಯುತ್ತದೆ. ಎನ್ನುವವರು. ಇನ್ನು ದೊಡ್ಡವರಾದವರಲ್ಲಿ ಕೆಲವರು ನಾನು ಹೇಳಿದಂತೆ ಮಾಡು ನಾನು ಮಾಡಿದಂತೆ ಮಾಡಬೇಡ ಎನ್ನುವವರೂ ಇದ್ದಾರೆ. ಏನೇ ಅನ್ನಿ, ದೊಡ್ಡವರು ಅನುಸರಿಸಿದ ಶಿಸ್ತು ಬದುಕಿದ ರೀತಿ ಇವುಗಳಿಂದ ಕಲಿಯುವುದು ಬಹಳವಿರುತ್ತದೆ. ಯಾಕೆಂದರೆ, ಈ ಹಿಂದೆ ಆಗಿ ಹೋದ ಹಿರಿಯರಲ್ಲಿ ಮಹಾನ್ ಸಾಧಕರಲ್ಲಿ ಚಿಕ್ಕಂದಿನಿಂದಲೇ ಶಿಸ್ತಿನಿಂದ ಜೀವನ ನಡೆಸಿದವರೇ ಬಹಳ ಇದ್ದಾರೆ. ಅಂಥವರಿಂದ ಬೇಕಾದುದನ್ನೆಲ್ಲ ಕಿರಿಯರು ಆಯ್ದು ಅಳವಡಿಸಿಕೊಳ್ಳುವ ಜಾಣ್ಮೆ ತೋರಬೇಕು. ಮುಂದೆ ಓದಿ…>>>
ಕನ್ನಡದಲ್ಲಿ ಪ್ರಕಟವಾಗಿರುವ ನನ್ನ 3 ಕಂಪ್ಯೂಟರ್ ಪುಸ್ತಕಗಳು-
ವಿನ್ ಕಂಪ್ಯೂಟರ್ಸ-(2009 -Software Made Simple) ಬೇಸಿಕ್ ಆರನೆಯ ಪುನರಾವೃತಿ ಮುದ್ರಣ.
ವಿನ್ ಯುವರ್ PC -(2009 -Hardware Made Easy) ಹಾರ್ಡವೇರ್ ಮೂರನೇ ಆವೃತಿ ಬಂದಿದೆ.
ಮೇಜಿನ ಮೇಲಿನ ಪ್ರಕಾಶನ ಡಿ.ಟಿ.ಪಿ.ಕಲಿಕೆ-(2008 -DTP Made Easy) ಎರಡನೇ ಆವೃತಿ ಬಂದಿದೆ.

Nimma web site nodie bahala kushi aithu nimma hosa book bagge tilisi bega, my regards…l
By chance nimma pustaka “wincomputers” basic pustaka nodidaaga bahalaa kushii aithuu. it is fantastic… even little knowledge person can understand and learn Computer, even practically your all three books are very much useful. i never find these type of kannada computer books any where. Please continue your writing -With my regards..